ಬೆಂಗಳೂರು, (ಡಿ.30): ರಾಜ್ಯ ಬಿಜೆಪಿ ಸರ್ಕಾರದ ಪ್ರಸಕ್ತ ಅವಧಿಯ ಚೊಚ್ಚಲ ಬಜೆಟ್‌ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ.

 ಮಾರ್ಚ್‌ 2 ರಿಂದ ಆರಂಭಗೊಳ್ಳಲಿದ್ದು, ಮಾರ್ಚ್‌ 5 ರಂದು ಬಜೆಟ್‌ ಮಂಡನೆಯಾಗಲಿದೆ. ಇನ್ನು ಫೆಬ್ರವರಿ 17ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ. 

ಗಡಿ ವಿವಾದ: ಕರ್ನಾಟಕದ ಒಂದಿಂಚು ಜಾಗವನ್ನ ಬಿಡುವುದಿಲ್ಲ, ಯಡಿಯೂರಪ್ಪ

ಫೆಬ್ರವರಿ 17 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದು ಫೆಬ್ರವರಿ 21ರವರೆಗೂ ಅಧಿವೇಶನ ನಡೆಯಲಿದೆ. ಈ ಬಗ್ಗೆ ಇಂದು (ಸೋಮವಾರ) ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು. 

ಮೈತ್ರಿ ಸರ್ಕಾರದ ಪತನದ ಬಳಿಕ ಅಧಿಕಾರಕ್ಕೇರಿದ ಬಿಎಸ್‌ ಯಡಿಯೂರಪ್ಪ ಅವರ ಚೊಚ್ಚಲ ಬಜೆಟ್ ಇದಾಗಿದ್ದು, ಕೃಷಿ ಹೆಚ್ಚಿನ ಆಧ್ಯತೆ ನೀಡುವ ಸಾಧ್ಯತೆಗಳಿವೆ. ಬಜೆಟ್‌ನಲ್ಲಿ ಬಿಎಸ್‌ವೈ ಸರ್ಕಾರ ಏನೆಲ್ಲ ಹೊಸ-ಹೊಸ ಯೋಜನೆಗಳು ಜಾರಿಗೆ ತರುತ್ತೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ