ಮತ್ತೊಮ್ಮೆ ಮುಖಭಂಗ ಮಾಡಿಕೊಳ್ಳುವುದಕ್ಕಿಂತ ನಿಮ್ಮ ಈ ನಿರ್ಧಾರ ಸರಿಯಾಗಿದೆ: ಸಿದ್ದು ಕಾಲೆಳೆದ ಬಿಜೆಪಿ

* ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ
* ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಕರ್ನಾಟಕ ಬಿಜೆಪಿ
* ಟ್ವೀಟ್ ಮೂಲಕ ಕಾಲೆಳೆದಿರುವ ಬಿಜೆಪಿ

Karnataka BJP Taunts Siddaramaiah Over Will not Contest from Chamundeshwari  Statement rbj

ಬೆಂಗಳೂರು, (ಮಾ.13): ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ‌ ಎಂದು ಮಾಜಿ ಸಿ.ಎಂ.‌ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಕರ್ನಾಟಕ ಬಿಜೆಪಿ ಟಾಂಗ್ ಕೊಟ್ಟಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಬೇಡವೆಂದೇ ಜನರು ತಿರಸ್ಕಾರ ಮಾಡಿದ್ದು. ಮತ್ತೊಮ್ಮೆ ನೀವು ಅಲ್ಲಿ ನಿಂತರೂ ಜನರು ತಿರಸ್ಕಾರ ಮಾಡುವುದು ಶತಸಿದ್ಧ ಎಂದು ಸಿದ್ದರಾಮಯ್ಯ ಅವರನ್ನು ಕರ್ನಾಟಕ ಬಿಜೆಪಿ ಲೇವಡಿ ಮಾಡಿದೆ.

Karnataka Politics: ಚಾಮುಂಡೇಶ್ವರಿಯಿಂದ ಮತ್ತೆ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

ಟ್ವೀಟ್ ಮೂಲಕ ಕಾಲೆಳೆದಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಬೇಡವೆಂದೇ ಜನರು ತಿರಸ್ಕಾರ ಮಾಡಿದ್ದು. ಮತ್ತೊಮ್ಮೆ ನೀವು ಅಲ್ಲಿ ನಿಂತರೂ ಜನರು ತಿರಸ್ಕಾರ ಮಾಡುವುದು ಶತಸಿದ್ಧ. ಮತ್ತೊಮ್ಮೆ ಚಾಮುಂಡೇಶ್ವರಿಯಲ್ಲಿ ಮುಖಭಂಗ ಮಾಡಿಕೊಳ್ಳುವುದಕ್ಕಿಂತ ನಿಮ್ಮ ಈ ನಿರ್ಧಾರ ಸರಿಯಾಗಿಯೇ ಇದೆ ಎಂದಿದೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಒಂದಷ್ಟು ಜನ ಸೋನಿಯಾ ಹಾಗೂ ಪ್ರಿಯಾಂಕಾ ಗಾಂಧಿ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೈತಿಕ ಹೊಣೆ ಎಂಬ ಶಬ್ದಕ್ಕೆ ಅರ್ಥವಿದೆಯೇ? ಅವರವರೇ, ಅವರ ಕುಟುಂಬದೊಳಗೆ ಜವಾಬ್ದಾರಿ ಹಂಚಿಕೊಳ್ಳುವ ವಾಸ್ತವತೆಯಲ್ಲಿ ನಕಲಿ ಗಾಂಧಿಗಳು ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಎಂದ್ರು ಪ್ರಶ್ನಿಸಿದೆ.

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಆದರೆ ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್ಸಿಗರು ಗಾಂಧೀಜಿ ಮಾತಿಗೆ ಬೆಲೆ ಕೊಡಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬಂತೆ ಈಗ ಜನರೇ‌ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದಾರೆ. ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ? ಎಂದು ಟೀಕಿಸಿದೆ.

ಸಿದ್ದು ಹೇಳಿದ್ದೇನು?
ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ‌ ಎಂದು ಮಾಜಿ ಸಿ.ಎಂ.‌ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮಳವಳ್ಳಿಗೆ ತೆರಳುವ ಮಾರ್ಗ ಮಧ್ಯೆ ಮದ್ದೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಲ್ಲಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಾಲ್ಕೈದು ಕ್ಷೇತ್ರಗಳಿಂದ ಒತ್ತಡ ಬರುತ್ತಿದೆ. ಆದರೆ ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇದುವರೆಗೂ ನಿರ್ಧರಿಸಿಲ್ಲ ಎಂದು ಹೇಳಿದ್ದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಜಹಾಗೂ ಜೆಡಿಎಸ್ ನಡುವೆ ಹೊಂದಾಣಿಕೆ ಆಗಿದೆಯೇ ಎಂಬ ಪ್ರಶ್ನೆಗೆ, ಅವರು ಏನು ಮಾಡಿಕೊಂಡರೂ ನಾವು ತಲೆ ಕೆಡಿಸಿಕೊಳ್ಳುವುದದಿಲ್ಲ ಎಂದು ಸಿದ್ದರಾಮ್ಯಯ ಹೇಳಿದರು.ಜಿಟಿಡಿ ತಮ್ಮ ಮಗನಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್ ಜೊತೆ ಚರ್ಚಿಸುವದಾಗಿ ಸಿದ್ದರಾಮಯ್ಯ ನುಡಿದರು. ಸಿಎಂ ಇಬ್ರಾಹಿಂ ಪಕ್ಷ ಬಿಟ್ಟ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಅಂತಾರಲ್ಲ ಹಾಗಿದೆ ಇಬ್ರಾಹಿಂ ಪರಿಸ್ಥಿತಿ ಎಂದು ಲೇವಡಿ ಮಾಡಿದ್ದರು.

Latest Videos
Follow Us:
Download App:
  • android
  • ios