ಬಿಜೆಪಿ & ರಾಜ್ಯಪಾಲರು ಏನು ಹೇಳಿದ್ದಾರೆಂಬುದು ಬದಿಗಿಡಿ. ಉಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 

ಚಿತ್ರದುರ್ಗ(ಅ.05): ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಹಿಂದಕ್ಕೆ‌ ಮೋಸ ಮಾಡಿದ್ದಾರೆ. ವಾಲ್ಮೀಕಿ, ಮುಡಾ ಹಗರಣದಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಿದ್ದು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ರಾಜ್ಯದ ಜನ ಸಿಎಂ, ಸರ್ಕಾರದ ವಿರುದ್ಧ ದನಿ ಎತ್ತುತ್ತಿದ್ದಾರೆ. ರಾಜ್ಯ ಸರ್ಕಾರದ ಹಗರಣಗಳಿಂದ ಜನರು ಬೇಸತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಭ್ರಷ್ಟ ಸಿಎಂ ಪ್ರಭಾವಕ್ಕೆ ಒಳಗಾಗಿ ಸೈಟು ಖಾತೆ ರದ್ದು: ಸಿದ್ದು ವಿರುದ್ಧ ಸಿಡಿದೆದ್ದ ವಿಜಯೇಂದ್ರ

ಬಿಜೆಪಿ & ರಾಜ್ಯಪಾಲರು ಏನು ಹೇಳಿದ್ದಾರೆಂಬುದು ಬದಿಗಿಡಿ. ಉಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದ್ದಾರೆ. 

ಕೆ.ಎಸ್‌. ಈಶ್ವರಪ್ಪ ಹೆಸರು ಹೇಳ್ತಿದ್ದಂತೆ ನಗುತ್ತಲೇ ವಿಜಯೇಂದ್ರ ನಿರಾಕರಿಸಿ ತೆರಳಿದ್ದಾರೆ.