ಸಿಎಂ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಉತ್ತಮ ಹೆಸರು ಮಾಡಿದ್ದವರು. ಈಗ ಅವರು ಸಿನಿಮಾ ನಿರ್ದೇಶನಕ್ಕೂ ಇಳಿದರೆ? ಹೀಗೊಂದು ಪ್ರಶ್ನೆಯನ್ನು ರಾಜ್ಯ ಬಿಜೆಪಿ ಕೇಳಿದೆ.
ಬೆಂಗಳೂರು[ಜ.29] ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಜೆಪಿ ಕುಮಾರಸ್ವಾಮಿ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದೆ.
ಕತೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಕುಮಾರಸ್ವಾಮಿ ಅವರೆ ಮಾಡುತ್ತಿದ್ದಾರೆ ಎಂದಿರುವ ಬಿಜೆಪಿ ‘ನಾಟಕ’ ಎಂದು ಇದನ್ನು ಕರೆದಿದೆ.
ಕುಮಾರಸ್ವಾಮಿ ಸಿಎಂ ಆದಾಗಿನಿಂದ ಹೇಳಿಕೆಗಳನ್ನು ಇಟ್ಟುಕೊಂಡು ಬಿಜೆಪಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದೆ. ಹಾಗಾದರೆ ಬಿಜೆಪಿ ಉಲ್ಲೇಖ ಮಾಡಿರುವ ಕುಮಾರಸ್ವಾಮಿ ಅವರ ಹೇಳಿಕೆಗಳು ಏನು?
ದೇವೇಗೌಡರ ಮೊಮ್ಮಗನ ‘ಕಾರು’ಬಾರು, ಇವರ ದರ್ಬಾರ್ ಕೇಳೋರಿಲ್ವಾ.?
1. ನಾನು ವಿಷಕಂಠ: ಕುಮಾರಸ್ವಾಮಿ ಸಿಎಂ ಆದ ಕೆಲ ದಿನಗಳ ನಂತರ ನಾನು ವಿಷಕಂಠ, ನೋವನ್ನು ನುಂಗಿ ಸರ್ಕಾರ ಮುನ್ನಡೆಸುತ್ತಿದ್ದೇನೆ. ನಾನು ಸಾಂದರ್ಭಿಕ ಶಿಶು ಎಂದು ಹೇಳಿದ್ದರು.
2. ನಾನೊಬ್ಬ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ: ಸರಕಾರದಲ್ಲಿ ನಾನೊಬ್ಬ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ ಎಂಬ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಹ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು.
3. ನಾನು ಯಾವಾಗ ಸಾಯುತ್ತೇನೆ ಗೊತ್ತಿಲ್ಲ: ಜೆಡಿಎಸ್ ಸಮಾವೇಶ ಒಂದರಲ್ಲಿ ಮಾತನಾಡುತ್ತ ಕುಮಾರಸ್ವಾಮಿ ಭಾವುಕರಾಗಿದ್ದರು. ನಾನು ಯಾವಾಗ ಸಾಯುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.
4. ಸಿಂಗಪುರದಲ್ಲಿ ಹೊಸ ವರ್ಷ: 2019ರ ಆರಂಭದಲ್ಲಿ ಕುಮಾರಸ್ವಾಮಿ ಸಿಂಗಪುರಕ್ಕೆ ತೆರಳಿದ್ದನ್ನು ಬಿಜೆಪಿ ತನ್ನ ಟೀಕೆಯಲ್ಲಿ ಬಳಸಿಕೊಂಡಿದೆ.
5 . ಸೀತಾರಾಮ ಕಲ್ಯಾಣ ವೀಕ್ಷಣೆ: ಸೀತಾರಾಮ ಕಲ್ಯಾಣ ವೀಕ್ಷಣೆ ಮಾಡಿದ್ದ ಕುಮಾರಸ್ವಾಮಿ ಮಗ ನಿಖಿಲ್ ಅಭಿನಯಕ್ಕೆ ಫುಲ್ ಖುಷ್ ಆಗಿದ್ದರು.
6. ರಾಜೀನಾಮೆ ಕೊಡಲು ಸಿದ್ಧ: ನಾನು ಕುರ್ಚಿಗೆ ಅಂಟಿಕೊಂಡು ನಿಂತಿಲ್ಲ. ರಾಜೀನಾಮೆ ನೀಡಲು ಸಿದ್ಧ ಎಂದು ಬೆಂಗಳೂರಿನಲ್ಲಿ ನೀಡಿದ ಹೇಳಿಕೆಯೂ ಚರ್ಚೆಗೆ ನಾಂದಿ ಹಾಡಿತ್ತು.
