ದೇವೇಗೌಡ ಮೊಮ್ಮಗನ ‘ಕಾರು’ಬಾರು, ಇವರ ದರ್ಬಾರ್ ಕೇಳೋರಿಲ್ವಾ.?
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಮೊಮ್ಮಗನ ‘ಕಾರು’ಬಾರು..! ಪ್ರಜ್ವಲ್ ರೇವಣ್ಣಗೆ ಸರ್ಕಾರಿ ಕಾರು ಕೊಟ್ಟಿದ್ಯಾರು..? ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಬ್ಬರ ಪ್ರಶ್ನಿಸೋರೆ ಇಲ್ವಾ..?
ಹಾಸನ, (ಜ29): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮೊಮ್ಮಗ, ಸೂಪರ್ ಸಿಎಂ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಸಿ ಟೀಕೆಗೆ ಗುರಿಯಾಗಿದ್ದಾರೆ.
ಹಾಸನ ಲೋಕಸಭಾ ನಿಯೋಜಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಕಾರ್ಯಕರ್ತರ ಸಭೆಗೆ ಸರ್ಕಾರಿ ಕಾರಿನಲ್ಲಿ ಬಂದಿದ್ದಾರೆ.
ಗಣರಾಜ್ಯೋತ್ಸವ ವೇದಿಕೆಯಲ್ಲೇ ರೇವಣ್ಣ-ಪ್ರೀತಂ ಗೌಡ ಜಟಾಪಟಿ
ಲೋಕಸಭಾ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಸಭೆ ನಡೆಸುತ್ತಿರೊ ಪ್ರಜ್ವಲ್, ಜೆಡಿಎಸ್ ಸಭೆಗಳಿಗೆ ಸರ್ಕಾರಿ ಕಾರು ಬಳಸುತ್ತುದ್ದಾರೆ.
ಕೆಎ-01 ಜಿಎ-8009 ನಂಬರಿನ ಸರ್ಕಾರಿ ಇನ್ನೋವಾ ಕಾರಿನಲ್ಲಿ ಲೋಕಸಭೆ ಪ್ರಚಾರ ಮಾಡುತ್ತಿದ್ದಾರೆ. ಅಪ್ಪ ಸಚಿವ ಮತ್ತು ದೊಡ್ಡಪ್ಪ ಸಿಎಂ ಆದ ಮಾತ್ರಕ್ಕೆ ಸರ್ಕಾರಿ ಕಾರುಗಳಿಗೇನು ಬೆಲೆ ಇಲ್ವಾ?
ಸಚಿವ ರೇವಣ್ಣ ಬೆಂಬಲಿಗನಿಗೆ ಡಿಸಿ ರೋಹಿಣಿ ಕೊಟ್ಟ ‘ಮರಳೇಟು’
ಈಗಾಗಲೇ ಅಪ್ಪ ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಮೂಗು ತೂರಿಸುವ ಮೂಲಕ ಸೂಪರ್ ಸಿಎಂ ಎಂದೇ ಬಿಂಬಿತರಾಗಿದ್ದಾರೆ. ಅಷ್ಟೇ ಅಲ್ಲದೇ ಹಾಸದಲ್ಲಿ ಸರ್ವಾಡಳಿತದಿಂದ ಕೆಲ ಅಧಿಕಾರಿಗಳ ಹಾಗೂ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಇದೀಗ ಮಗನ ಸರದಿ. ಅಪ್ಪನಿಗಿಂತ ನಾನೇನೂ ಕಡಿಮೆ ಇಲ್ಲ ಅಂತ ರಾಜಾರೋಷವಾಗಿ ಸರ್ಕಾರಿ ಕಾರಿನಲ್ಲಿ ಮಜಾ ಮಾಡುತ್ತಿದ್ದಾರೆ.
ಸರ್ಕಾರಿ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅಬ್ಬರ ಪ್ರಶ್ನಿಸೋರೆ ಇಲ್ವಾ..?. ಅಥವಾ ಗೊತ್ತಿದ್ದರೂ ಅಧಿಕಾರಿಗಳು ತೆಪ್ಪಗಿ ಕೂತಿದ್ದಾರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
"
ನನಗೆ ಸರ್ಕಾರಿ ಬಂಗಲೇ ಬೇಕಿಲ್ಲ. ಸರ್ಕಾರಿ ಕಾರು ಬೇಡ. ನನ್ನ ಕಾರಿನಲ್ಲಿ ಸ್ವಂತ ಹಣದಿಂದ ಇಂಧನ ಹಾಕಿಸಿಕೊಂಡು ಸುತ್ತಾಡುತ್ತೇನೆ ಎಂದು ಪ್ರಜ್ವಲ್ ದೊಡ್ಡಪ್ಪ ರಾಜ್ಯದ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಆದ್ರೆ ಇದೀಗ ಪ್ರಜ್ವಲ್ ರೇವಣ್ಣ ಮಾಡುತ್ತಿರುವುದೇನು? ಅಧಿಕಾರ ಇದೆ ಅಂತ ಸರ್ಕಾರಿ ಕಾರು ಸ್ವಂತಕ್ಕೆ ಬಳಸುತ್ತಿರುವುದು ಎಷ್ಟು ಸರಿ..?