ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದ್ದಾರೆ.

ಬೆಳಗಾವಿ, (ಏ.09): ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅರುಣ್ ಸಿಂಗ್ ಸುಳಿವು ಕೊಟ್ಟಿದ್ದಾರೆ. ಇನ್ನು ಈ ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿರುವ ಅರುಣ್ ಸಿಂಗ್, ಶೀಘ್ರದಲ್ಲಿಯೇ ಯತ್ನಾಳ್ ಅವರನ್ನು ಬಿಜೆಪಿಯಿಂದ ಹೊರಹಾಕಲಾಗುವುದು. ಯತ್ನಾಳ್ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆ ವ್ಯಕ್ತಿ ಬಗ್ಗೆ ಮಾತನಾಡಿದರೆ ಆತನ ಪ್ರಸಿದ್ಧಿಯೇ ಹೆಚ್ಚಲಿದೆ ಎಂದು ಸ್ಪಷ್ಟಪಡಿಸಿದರು. 

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!

ಮಾಧ್ಯಮಗಳಿಗೆ ಯತ್ನಾಳ ಮೇಲೆ ನಂಬಿಕೆ ಇರಬಹುದು. ಆದ್ರೆ ಬಿಜೆಪಿಗೆ ಅವರ ಮೇಲೆ ಝೀರೋ ಝೀರೋ ಒನ್ ಪರ್ಸೆಂಟ್ ನಂಬಿಕೆಯೂ ಇಲ್ಲ. ಯತ್ನಾಳ್‌ ಗೆ ನೋಟಿಸ್ ನೀಡಲಾಗಿದೆ ಶೀಘ್ರವೇ ಹೊರಡಿಸಲಾಗುವುದು ಎಂದರು.

ಯತ್ನಾಳ್ ಮೇಲೆ ಬಿಜೆಪಿಗೆ ಯಾವುದೇ ನಂಬಿಕೆ ಇಲ್ಲ. ಈಗಾಗಲೇ ಯತ್ನಾಳ್ ಗೆ ನೋಟಿಸ್ ನೀಡಲಾಗಿದೆ. ಎಚ್ಚರಿಕೆ ಬಳಿಕವೂ ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದೆ ಎಂದು ಸ್ವತಃ ಅರುಣ್ ಸಿಂಗ್ ಅವರು ಹೇಳಿದ್ದು, ಯತ್ನಾಳ್‌ಗೆ ಸಂಕಷ್ಟ ಎದುರಾಗಿದೆ.