ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ಪ್ರಶ್ನೆಗಳ ಸುರಿಮಳೆ

* ಕೋವಿಡ್ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬಿಜೆಪಿ ತಿರುಗೇಟು
* ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್
* ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರಗುಳಿಗೆ ಪ್ರಶ್ನೆಗಳ ಸುರಿಮಳೆ

Karnataka BJP Hits back at Congress Leaders allegations On BSY Govt about Covid19 rbj

ಬೆಂಗಳೂರು, (ಮೇ.12): ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಕ್ಸಿಜನ್, ಬೆಡ್ ಸಿಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ.

ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ಆಕ್ಸಿಜನ್, ಐಸಿಯು ಆಯ್ತು ಈಗ ವ್ಯಾಕ್ಸಿನ್ ಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಜ್ಞರ ಎಚ್ಚರಿಕೆ ಕಡೆಗಣಿಸಿ ಜನರನ್ನು ಸಾವಿನ ದವಡೆಗೆ ದೂಡಿದ್ದೂ ಅಲ್ಲದೇ ಲಸಿಕೆ ಹಂಚಿಕೆಯಲ್ಲಿಯೂ ವಿಫಲವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ  ವಾಗ್ದಾಳಿ ನಡೆಸಿದೆ.

ರಾಜ್ಯಾದ್ಯಂತ ಲಸಿಕೆಗಾಗಿ ಹಾಹಾಕಾರ, ಆರೋಗ್ಯ ಕೇಂದ್ರಗಳ ಮುಂದೆ ಕ್ಯೂ.!

ಇದಕ್ಕೆ ರಾಜ್ಯ ಬಿಜೆಪಿಯೂ  ಟ್ವಿಟ್ಟರ್ ಮೂಲಕ ಕಾಂಗ್ರೆಸ್‌ ನಾಯಕರುಗಳಿಗೆ ತಿರುಗೇಟು ಕೊಟ್ಟಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಹೇಗೆಲ್ಲಾ ತಿರುಗೇಟು ನೀಡಿದೆ ಎನ್ನುವುದು ಈ ಕೆಳಗಿನಂತಿದೆ.

* ನಿರಾತಂಕವಾಗಿ ನಡೆಯುತ್ತಿದ್ದ ಲಸಿಕೆ‌ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್. ಜನರ ಮನಸಿನಲ್ಲಿ ಹುಳಿ ಹಿಂಡಿದ #ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು. ಜನರಿಗೆ ಆತ್ಮ ಸ್ಥೈರ್ಯ ತುಂಬುವ ಒಂದು ಕೆಲಸವನ್ನಾದರೂ @INCKarnataka ಮಾಡಿದೆಯೇ? ಎಂದು ಪ್ರಶ್ನಿಸಿದೆ.

* ನಾನು ಅಕ್ಕಿ ಕೊಟ್ಟೆ, ಇಂದಿರಾ ಕ್ಯಾಂಟೀನಲ್ಲಿ ಊಟ ಕೊಟ್ಟೆ ನಾನು, ನಾನು, ನಾನು..! ಏನು ನಿಮ್ಮ‌ ಪಿತ್ರಾರ್ಜಿತ ಆಸ್ತಿಯ ದುಡ್ಡಿನಲ್ಲಿ ಕೊಟ್ಟಿದ್ದೇ 
@siddaramaiah? ಎಲ್ಲದಕ್ಕೂ ನಾನು ಎನ್ನುವ @INCKarnataka ಪಕ್ಷದ ನಾಯಕರು ಕೋವಿಡ್‌ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮಾಡಿದ್ದೇನು?

* ವ್ಯಾಕ್ಸಿನ್ ಬಾಕ್ಸ್ ಮೇಲೆ ಪ್ರಧಾನಿ ಚಿತ್ರ ಏಕೆ, ಕೋವಿಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಏಕೆ ಎಂದು ಪ್ರಶ್ನಿಸಿದ್ದ @siddaramaiah ಮಾಡಿದ್ದೇನು?
ಬಡವರಿಗೆ ಕೊಡುವ ದಿನಸಿ ಚೀಲದ ಮೇಲೆ ಪುತ್ರನ ಚಿತ್ರ ಹಾಕಿದ್ದು ಎಷ್ಟು ಸರಿ? ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ  ಅಲ್ವೇ #ಬುರುಡೆರಾಮಯ್ಯ?

* ಲಸಿಕೆ ಹಾಕುವುದು ಎಂದರೆ, ಭ್ರಷ್ಟಾಚಾರ ಮಾಡಿ ದುಡ್ಡು ಹೊಡೆದಷ್ಟು ಸುಲಭ ಎಂದುಕೊಂಡಿರಾ @DKShivakumar?ಲಸಿಕಾಕರಣ ಎನ್ನುವುದೊಂದು ಬೃಹತ್ ಅಭಿಯಾನ. ನೀವು ಕೇಳಿದ ತಕ್ಷಣ ಬ್ಲೂ ಪ್ರಿಂಟ್ ಕೊಟ್ಟು ಬಿಡುವುದಕ್ಕೆ ಇದೇನು ನಿಮ್ಮ ರಾಜಕೀಯ ಪೂರ್ವದ ವೃತ್ತಿ ಅಂದುಕೊಂಡಿದ್ದೀರಾ?

* ಪೌರ ಕಾರ್ಮಿಕರ ಮೇಲೆ ಪ್ರಯೋಗ ಮಾಡುವುದಕ್ಕೆ ಮೊದಲು ಪ್ರಧಾನಿ ಲಸಿಕೆ ಹಾಕಿಸಿಕೊಳ್ಳಬೇಕಿತ್ತು ಎಂದು ಪ್ರಲಾಪಿಸಿದ್ದ #ಮಹಾನಾಯಕ ಈಗ ಲಸಿಕೆ ಅಭಿಯಾನದ ನೀಲನಕ್ಷೆ, ಕಾಲಮಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಗಾಳಿ ಬಂದೆಡೆಗೆ ತೂರಿಕೊಳ್ಳುವ ನಿಮ್ಮಂಥ ರಾಜಕಾರಣಿಗಳ ದುರ್ಬುದ್ಧಿಗೆ ಜನ ತಕ್ಕ ಪಾಠ ಕಲಿಸುತ್ತಾರೆ.

* ಭ್ರಷ್ಟಾಧ್ಯಕ್ಷ @DKShivakumar ಅವರೇ, ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಿರಾ? ಸಾವಿರಾರು ಜನರನ್ನು ಸೇರಿಸಿ ಮಗಳ ಮದುವೆ ಮಾಡುವಾಗ ಎರಡನೇ ಅಲೆಯ ಬಗ್ಗೆ ನಿಮಗೆ ಯೋಚನೆ ಇರಲಿಲ್ಲವೇ? ಹಠಕ್ಕೆ ಬಿದ್ದು ಅಧ್ಯಕ್ಷ ಪದವಿಯ ಪ್ರತಿಜ್ಞಾವಿಧಿ ಸ್ವೀಕರಿಸುವಾಗ ಕೋವಿಡ್ ಬಗ್ಗೆ ಅರಿವಿರಲಿಲ್ಲವೇ?

* ನಮ್ಮ‌ ಪ್ರಶ್ನೆಗಳಿಗೆ #ಮಹಾನಾಯಕ ಉತ್ತರಿಸುವರೇ? ಕೆಪಿಸಿಸಿ ಅಘೋಷಿತ ಅಧ್ಯಕ್ಷೆಯ ಪ್ರತಿಷ್ಠೆಗಾಗಿ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸುವಾಗ @DKShivakumar  ಅವರಿಗೆ ಕೋವಿಡ್ ಹರಡುತ್ತದೆ ಎಂಬ ಪ್ರಜ್ಞೆ ಇರಲಿಲ್ಲವೇ? ಅದೇ ಕಾಳಜಿಯನ್ನು ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ವಿನಿಯೋಗಿಸಬಹುದಿತ್ತಲ್ಲವೇ? ಪ್ರಶ್ನೆಗಳ ಸುರಿಮಳೆಗೈದಿದೆ.

Latest Videos
Follow Us:
Download App:
  • android
  • ios