Asianet Suvarna News Asianet Suvarna News

'ಬೆಳಗಾವಿ ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ'

ರಾಜ್ಯದಲ್ಲಿ ಉಪ ಚುನಾವಣೆ ಅಬ್ಬರ ಜೋರಾಗಿದೆ. ಏಪ್ರಿಲ್ 17ರಂದು ಲೋಕಸಭಾ ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಭವಿಷ್ಉ ನುಡಿದಿದ್ದಾರೆ ನಾಯಕರೋರ್ವರು. 

Karnataka BJP Govt will Collapse After Belagavi by Poll Says Randeep Surjewala  snr
Author
Bengaluru, First Published Apr 11, 2021, 1:07 PM IST

 ಬೆಳಗಾವಿ (ಏ.11): ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಚುನಾವಣೆ ನಡೆಯಲಿದ್ದು, ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು.

ಬೆಳಗಾವಿಯಲ್ಲಿಂದು ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ದೇಶ, ಕರ್ನಾಟಕದಲ್ಲಿ ಬದಲಾವಣೆ ಆಗುವುದು ಗೋಡೆ ಮೇಲೆ ಬರೆದಾಗಿದೆ. ಭ್ರಷ್ಟಾಚಾರ, ನಾಲಾಯಕ್ ಸರ್ಕಾರ ಬದಲಾಯಿಸಲು ಜನ ಕಾತುರರಾಗಿದ್ದಾರೆ. ಈ ಸರ್ಕಾರ ಬದಲಾಯಿಸಲು ಜನ ತಯಾರಾಗಿದ್ದಾರೆ ಎಂದರು. 

ಸಚಿವರು ಸಿಎಂ ಮೇಲೆ ಆರೋಪಿಸುತ್ತಾರೆ, ಸಿಎಂ ಸಚಿವರ ಮೇಲೆ ಆರೋಪ ಮಾಡ್ತಾರೆ. ರಾಜ್ಯದ ಮಂತ್ರಿಗಳು ಕೇಂದ್ರ ಸಚಿವರ ಮೇಲೆ ಆರೋ‌ಪ ಮಾಡ್ತಾರೆ. ಕೇಂದ್ರ ಸರ್ಕಾರದವರು ಇಲ್ಲಿಯ ಮಂತ್ರಿಗಳು ನಾಲಾಯಕ್ ಅಂತಾರೆ. ಇದೆಲ್ಲವೂ ಸರ್ಕಾರ ಪತನದ ಮುನ್ಸೂಚನೆ ಎಂದರು. 

'ಬೈ ಎಲೆಕ್ಷನ್‌ ಬಳಿಕ ಅಡ್ರಸ್‌ ಕಳೆದುಕೊಳ್ಳುವ ಕಾಂಗ್ರೆಸ್‌ : 3 ಕ್ಷೇತ್ರಗಳಲ್ಲಿ ಜಯ ಖಚಿತ' .

ಪ್ರತಿಯೊಂದು ಸಮಾಜ ವಿಭಜನೆ ಮಾಡಿ ದ್ರೋಹ ಮಾಡಿ ಅನೈತಿಕ ಸರ್ಕಾರ ರಚನೆ ಆಗಿದೆ.  ಸತೀಶ್ ಜಾರಕಿಹೊಳಿ‌ ಗೆಲುವಿನ ಬಳಿಕ ಈ ಸರ್ಕಾರ ಪತನವಾಗುತ್ತೆ. ತಮ್ಮಷ್ಟಕ್ಕೆ ತಾನೇ ಕರ್ನಾಟಕ ಸರ್ಕಾರ ಬಿದ್ದು ಹೋಗುತ್ತದೆ.  ಇದಾದ ಬಳಿಕ ಜನರ ಮತಗಳಿಂದ ಕಾಂಗ್ರೆಸ್ ಸರ್ಕಾರ ರಚನೆ ಆಗಲಿದೆ  ಎಂದು ಸುರ್ಜೆವಾಲಾ ಹೇಳಿದರು. 

ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ.  ಜನರ ಮತಗಳಿಂದ, ಪ್ರಜಾಪ್ರಭುತ್ವದಿಂದ ಈ ಸರ್ಕಾರ ಬಂದಿಲ್ಲ.  ಆಪರೇಷನ್ ಕಮಲ, ಹಣ ಮತ್ತು ಭ್ರಷ್ಟಾಚಾರದಿಂದ ಹುಟ್ಟಿದ ಸರ್ಕಾರ ಇದು.  ತನ್ನ ತಪ್ಪಿನಿಂದಲೇ ಈ ಸರ್ಕಾರ ಪತನವಾಗುತ್ತದೆ.  ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿಯಾಗುತ್ತದೆ ಎಂದರು. 

ಅವರ ಪಕ್ಷದವರೇ ಸಿಎಂ ಕುಟುಂಬ ಮೇಲೆ ಆರೋಪ ಮಾಡುತ್ತಿದ್ದಾರೆ.  ಬಿಜೆಪಿಯವರಿಂದಲೇ ನಾಯಕತ್ವ ಬದಲಾವಣೆ ಆಗುತ್ತದೆ.  ಬಿಜೆಪಿಯ ನಾಯಕರೇ ಸಿಎಂ ಬದಲಾವಣೆಗೆ ಕಾದು ಕುಳಿತಿದ್ದಾರೆ, ನಾವಲ್ಲ.  ಹೈಕೋರ್ಟ್ ನಲ್ಲಿ ಸಿಎಂ ಬಿಎಸ್‌ವೈ ವಿರುದ್ಧ ಮೂರು ಭ್ರಷ್ಟಾಚಾರ ಪ್ರಕರಣ ವಿಚಾರಣೆ ನಡೆಯುತ್ತಿದೆ. ಸಿಎಂ ಹಾಗೂ ಸಿಎಂ ಕುಟುಂಬ ಮೇಲೆ ಸಚಿವರು, ಶಾಸಕರು ಆರೋಪ ದಿನದಿನವೂ ಹೆಚ್ಚಾಗಿದೆ.  ರಾಜ್ಯದ ಆಡಳಿತ ಯಂತ್ರ ಸರಿಯಿಲ್ಲ, ಹೀಗಾಗಿ ಈ ಸರ್ಕಾರ ಅಧಿಕಾರದಲ್ಲಿ ಇರಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು. 

Follow Us:
Download App:
  • android
  • ios