ಬಿಜೆಪಿ ಟಿಕೆಟ್ ವಿಳಂಬ ಆಗ್ತಿರುವ ಹಿನ್ನೆಲೆಯಲ್ಲಿ ಶಾಸಕರು ಮತ್ತು  ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿದೆ. ಕೆಲ ಶಾಸಕರು ಟಿಕೆಟ್ ಸಿಗುತ್ತಾ ಇಲ್ವೋ ಅನ್ನೋ ಭಯಕ್ಕೆ ಬಿದ್ದಿದ್ದಾರೆ.

ಬೆಂಗಳೂರು (ಏ.10): ಬಿಜೆಪಿ ಟಿಕೆಟ್ ವಿಳಂಬ ಆಗ್ತಿರುವ ಹಿನ್ನೆಲೆಯಲ್ಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿದೆ. ಪಟ್ಟಿ ಬಿಡುಗಡೆ ಆಗುವ ತನಕ ಆತಂಕದಲ್ಲೇ ಇರಬೇಕಾದ ಸ್ಥಿತಿ ಆಕಾಂಕ್ಷಿಗಳಾದ್ದಾಗಿದೆ. ದೆಹಲಿಯಿಂದ ಬರುವ ಸಂದೇಶಕ್ಕಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕಾಯ್ತಿದ್ದಾರೆ. ಟಿಕೆಟ್ ಅಂತಿಮಗೊಳಿಸುವ ಮುನ್ನ ಹೈಕಮಾಂಡ್ ಹೆಚ್ಚುವರಿ ಮಾಹಿತಿ ಮೊರೆ ಹೋಗಿದೆ. ಮತ್ತೆ ಸರ್ವೇ ನಡೆಸಲು ಮುಂದಾಗಿದೆ. ಹೈಕಮಾಂಡ್ ಈ ನಿಲುವಿನಿಂದ ಆಕಾಂಕ್ಷಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಶಾಸಕರು ಟಿಕೆಟ್ ಸಿಗುತ್ತಾ ಇಲ್ವೋ ಅನ್ನೋ ಭಯಕ್ಕೆ ಬಿದ್ದಿದ್ದಾರೆ. ಕೆಲ ಹಾಲಿ ಶಾಸಕರಿಗೆ ಟಿಕೆಟ್ ಡೌಟ್ ಅನ್ನೋ ಸಂದೇಶ ಕೇಳಿ ಶಾಸಕರು ಬೆಚ್ಚಿಬಿದ್ದಿದ್ದಾರೆ. ಟಿಕೆಟ್ ಸಿಗುವ ಸ್ಪಷ್ಟತೆ ಇಲ್ಲದ ಶಾಸಕರೆಲ್ಲರೂ ಮಾಧ್ಯಮಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ದೆಹಲಿ ಚರ್ಚೆಯ ಬಗ್ಗೆ ತಿಳಿದುಕೊಳ್ಳುವ ಧಾವಂತಕ್ಕೆ ಶಾಸಕರು ಮತ್ತು ಅವರ ಬೆಂಬಲಿಗರು ಮಾಧ್ಯಮಗಳತ್ತ ಕಣ್ಣಿಟ್ಟಿದ್ದಾರೆ.

ಮತ್ತೆ ಸರ್ವೆಯ ಮೊರೆ ಹೋದ ಬಿಜೆಪಿ!
ಇದರ ನಡುವೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮತ್ತೆ ಸರ್ವೇಯ ಮೊರೆ ಹೋಗಿದೆ. 30 ರಿಂದ 40 ಕ್ಷೇತ್ರದಲ್ಲಿ ಮತ್ತೊಂದು ಸರ್ವೆಗೆ ನಾಯಕರು ಮುಂದಾಗಿದ್ದಾರೆ. ಮೊನ್ನೆ ರಾತ್ರಿಯಿಂದಲೇ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಸರ್ವೆಗೆ ಸೂಚಿಸಿದ್ದಾರೆ . ಒಟ್ಟು ಮೂರು ಪ್ರತ್ಯೆಕ ಸಂಸ್ಥೆಗಳಿಂದ ಸರ್ವೆ ನಡೆಯುತ್ತಿದೆ. ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಆಗಲಿದೆ. ಇಂದು ಸಂಜೆಯ ಒಳಗೆ ಮೂರು ಸರ್ವೆಯ ವರದಿ ಬರಲಿದ್ದು. ವರದಿ ಬಂದ ನಂತರ ಇಂದು ರಾತ್ರಿ ಮತ್ತೊಂದು ಸುತ್ತಿನ ನಾಯಕರ ಸಭೆ ನಡೆಯಲಿದೆ. ತದ ನಂತರವೆ ಟಿಕೆಟ್ ಫೈನಲ್ ಆಗಲಿದೆ. ಈ ಎಲ್ಲಾ ಹಿನ್ನೆಲೆ ಪಟ್ಟಿ ಬಿಡುಗಡೆಗೆ ನಾಯಕರು ವಿಳಂಬ ಮಾಡುತ್ತಿದ್ದಾರೆ.

ಬಿಜೆಪಿ ಪಟ್ಟಿ ರಿಲೀಸ್ ಮತ್ತೆ ಮುಂದಕ್ಕೆ! ಕೇಸರಿ ಕಲಿಗಳ ಆಯ್ಕೆ ವಿಳಂಬವಾಗುತ್ತಿರೋದ್ಯಾಕೆ?

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Karnataka Assembly Election 2023: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ