ಬೆಂಗಳೂರು, (ಫೆ.24):  ಆಡಿಯೋ ಕ್ಲಿಪ್​ ವಿಚಾರವೊಂದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್​ ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳ ನಡುವಿನ ಗಲಾಟೆ ಸುಖ್ಯಾಂತ ಕಂಡಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ, ನಟ ಜಗ್ಗೇಶ್ ಅವರಿಗೆ ರಾಜ್ಯ ಬಿಜೆಪಿ ಸಿಹಿ ಮಹತ್ವದ ಹುದ್ದೆಯೊಂದನ್ನು ನೀಡಿದೆ.

ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ

ಹೌದು... ಪಕ್ಷ ಸಂಘಟನೆಗೆ ರಾಜ್ಯ ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ  ನೂತನ 10 ವಕ್ತಾರರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇಂದು (ಬುಧವಾರ) ಆದೇಶ ಹೊರಡಿಸಿದ್ದಾರೆ. ಈ 10ರಲ್ಲಿ ನಟ ಜಗ್ಗೇಶ್ ಅವರನ್ನು  ಬೆಂಗಳೂರು ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿದೆ.

ನೂತನ ವಕ್ತಾರರ ಪಟ್ಟಿ ಹೀಗಿದೆ..

1. ಗಣೇಶ್ ಕಾರ್ಣಿಕ್ - ಮುಖ್ಯ ವಕ್ತಾರರು, ಮಂಗಳೂರು.

2. ಜಗ್ಗೇಶ್- ವಕ್ತಾರರು, ಬೆಂಗಳೂರು.

3. ರಾಜೂಗೌಡ (ನರಸಿಂಹ ನಾಯಕ್)- ವಕ್ತಾರರು, ಯಾದಗಿರಿ.

4. ರಾಜ್‌ಕುಮಾರ್ ಪಾಟೀಲ್ ತೇಲ್ಕೂರು- ವಕ್ತಾರರು, ಕಲಬುರಗಿ.

5. ಛಲವಾದಿ ನಾರಾಯಣಸ್ವಾಮಿ- ವಕ್ತಾರರು. ಬೆಂಗಳೂರು.

6. ತೇಜಸ್ವಿನಿ ಗೌಡ- ವಕ್ತಾರರು, ಬೆಂಗಳೂರು.

7. ಗಿರಿಧರ ಉಪಾಧ್ಯಾಯ- ವಕ್ತಾರರು, ಬೆಂಗಳೂರು.

8. ಪಿ.ರಾಜೀವ್- ವಕ್ತಾರರು, ಬೆಳಗಾವಿ.

9. ಎಂ.ಬಿ.ಜಿರಲಿ- ವಕ್ತಾರರು, ಬೆಳಗಾವಿ.

10. ಮಹೇಶ್- ವಕ್ತಾರರು, ಮೈಸೂರು.