ಭ್ರಷ್ಟಾಚಾರದ ವಿರುದ್ಧ ಬಂದ್ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇದ್ಯಾ? : ಈಶ್ವರಪ್ಪ
ಕೋಟಿ ಕೋಟಿ ಲೂಟಿ ಹೊಡೆದು ಜೈಲಿಗೆ ಹೋಗಿ ಬಂದ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಈಗ ಭ್ರಷ್ಟಚಾರದ ವಿರುದ್ಧ ಬಂದ್‌ಗೆ ಕರೆ ಕೊಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದರು.
ಶಿವಮೊಗ್ಗ ಮಾ.9) : ಕೋಟಿ ಕೋಟಿ ಲೂಟಿ ಹೊಡೆದು ಜೈಲಿಗೆ ಹೋಗಿ ಬಂದ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಈಗ ಭ್ರಷ್ಟಚಾರದ ವಿರುದ್ಧ ಬಂದ್‌ಗೆ ಕರೆ ಕೊಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಿ.ಕೆ. ಶಿವಕುಮಾರ್(DK Shivakumar) ಏಕೆ ಜೈಲಿಗೆ ಹೋಗಿ ಬಂದರು. ಸಿದ್ದರಾಮಯ್ಯ(Siddaramaiah) ಅವರು 8 ಸಾವಿರ ಕೋಟಿ ಲೂಟಿ ಮಾಡಿರುವ ಬಗ್ಗೆ ವರದಿ ಇದೆ. ಇವರಿಬ್ಬರೂ ಕಳ್ಳರು, ಹೀಗ ಬಿಜೆಪಿ ಪಕ್ಷ ಭ್ರಷ್ಟಚಾರ(BJP curruption) ಎಸಗಿದೆ ಎಂದು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ನಾವು ಚುನಾವಣೆ ಪ್ರಣಾಳಿಕೆಯ ಬೇಡಿಕೆಗಳಲ್ಲಿ ಶೇ. 99ರಷ್ಟುಈಡೇರಿಸಿದ್ದೇವೆ ಎಂದಿದ್ದಾರೆ. ಇದು ಅವರದು 101ನೇ ಸುಳ್ಳು. ಅವರು ಹೇಳಿದಂತೆ ಆಗಿದ್ದರೆ ಯಾಕೆ ಸೋಲುತ್ತಿದ್ದರು. ಸರ್ಕಾರ ಏಕೆ ಕಳೆದುಕೊಳ್ಳುತ್ತಿದ್ದರು ಎಂದು ಕುಟುಕಿದರು.
40% ಕಮಿಷನ್ ಸಿಗಲ್ಲ ಅಂತ ಸರ್ಕಾರ ಮನೆ ಹಂಚಿಲ್ಲ: ಮಧು ಬಂಗಾರಪ್ಪ
ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್‌ನವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ, ದಾಖಲೆ ಕೊಡಿ ಎಂದರೆ ಒಂದೇ ಒಂದು ದಾಖಲೆ ಕೊಟ್ಟಿಲ್ಲ. ಈಗ ಬಿಜೆಪಿ ಶಾಸಕರು ಕಾಂಗ್ರೆಸ್ ಬರುತ್ತಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಈವರೆಗೆ ಒಬ್ಬ ಶಾಸಕರು ಕಾಂಗ್ರೆಸ್‌ಗೆ ಹೋಗಿಲ್ಲ. ಕಾಂಗ್ರೆಸ್ ಸತ್ತು ಹೋಗುತ್ತಿರುವ ಪಕ್ಷ. ಆ ಪಕ್ಷಕ್ಕೆ ಯಾರು ಹೋಗಲ್ಲ. ಹೀಗೆ ಸುಳ್ಳುಗಳನ್ನೇ ಹೇಳುತ್ತಿದ್ದರೆ ಮುಂದೆ ವಿರೋಧ ಪಕ್ಷದಲ್ಲೂ ಕಾಂಗ್ರೆಸ್ ಇರಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನ ಒಪ್ಪುವುದಿಲ್ಲ. ಬಿಜೆಪಿಯಿಂದ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ(KC Narayanagowda) ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಡಿಕೆಶಿ ಹೇಳಿಕೆ ಶುದ್ಧ ಸುಳ್ಳು. ನಾರಾಯಣಗೌಡರು ಮೊನ್ನೆಯಷ್ಟೇ ವಿಜಯ ಸಂಕಲ್ಪ ಯಾತ್ರೆ(Viajayasankalpa yatre)ಯಲ್ಲಿ ಭಾಗವಹಿಸಿದ್ದರು. ಮಾಡಾಳ್ ವಿರುಪಾಕ್ಷಪ್ಪ(Madalu virupakshappa)ನವರ ವಿಚಾರದಲ್ಲಿ ಈಗಲೇ ಏನೂ ಹೇಳಲು ಬರುವುದಿಲ್ಲ ಕಾದು ನೋಡೋ., ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ನೇತೃತ್ವ, ಸಂಘಟನೆ, ಅಭಿವೃದ್ಧಿ ಮತ್ತು ಭಾರತೀಯ ಸಂಸ್ಕೃತಿ ಈ 4 ಅಂಶಗಳ ಮೂಲಕ ಚುನಾವಣೆ ಮಾಡುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಜನರ ಕೇಂದ್ರ ತಂಡ ಆಗಮಿಸಿ ಸರ್ವೇ ಮಾಡಿ ವರದಿ ನೀಡಿದೆ. ಈ ಆಧಾರದ ಮೇಲೆ ಅಂತಿಮವಾಗಿ ಕೇಂದ್ರದ ನಾಯಕರು ಅಭ್ಯರ್ಥಿ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್, ಸುಧೀಂದ್ರ ಕಟ್ಟೆ, ಚಂದ್ರಶೇಖರ್ ಮತ್ತಿತರರಿದ್ದರು.
ಚುನಾವಣೆಗೆ(Karnataka assembly election) ಹಿನ್ನೆಲೆ ಜನರದಿಂದ ಅಭಿಪ್ರಾಯ ಸಂಗ್ರಹಿಸಿ ಚುನಾವಣೆ ಪ್ರಣಾಳಿಕೆ ತಯಾರಿಸಲು ತೀರ್ಮಾನಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾ. 16ರಂದು ರಾಯಲ್ ಆರ್ಕೀಡ್ ಹೋಟೆಲ್‌ನಲ್ಲಿ ಪ್ರಣಾಳಿಕಾ ಸಲಹಾ ಸಮಿತಿಯ ಸಭೆ ನಡೆಯಲಿದ್ದು, ಶಾಸಕ ಕೆ.ಎಸ್. ಈಶ್ವರಪ್ಪ ಚಾಲನೆ ನೀಡುವರು ಎಂದು ಜಿಲ್ಲಾ ಬಿಜೆಪಿ ಪ್ರಣಾಳಿಕೆ ಸಮಿತಿಯ ಸಂಚಾಲಕ ಡಾ. ಧನಂಜಯ ಸರ್ಜಿ ತಿಳಿಸಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾ(BJP double engin govt)ರದ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಪ್ರಧಾನಿ ಮೋದಿ(Narendra Modi) ನೇತೃತ್ವದಲ್ಲಿ ಕಳೆದ 70 ವರ್ಷಗಳಲ್ಲಿ ಕಂಡರಿಯದ ಅಭಿವೃದ್ಧಿಯಾಗಿದೆ. 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ 6.5 ಕೋಟಿ ನಲ್ಲಿ ನೀರು ಸಂಪರ್ಕ ನೀಡಲಾಗಿದೆ. 15 ಸಾವಿರ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗಿದೆ. ಕರೋನಾ ಸಂದರ್ಭದಲ್ಲಿ ವಿಶ್ವವೇ ಸಂಕಷ್ಟದಲ್ಲಿದ್ದಾಗ ಭಾರತದಲ್ಲಿ 225 ಕೋಟಿ ವ್ಯಾಕ್ಸಿನೇಷನ್ ಮಾಡುವುದರ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಪ್ರಣಾಳಿಕೆ ತಯಾರಿಸಲು ಜನರಿಂದಲೇ ಫೀಡ್ ಬ್ಯಾಕ್ ತೆಗೆದುಕೊಳ್ಳುವ ದೃಷ್ಟಿಯಿಂದ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ರಾಜ್ಯಮಟ್ಟದಲ್ಲಿ ಅಭಿಪ್ರಾಯ ಪಡೆಯಲು ಬಿಜೆಪಿಯ ಎಲ್ಲಾ ಮೋರ್ಚಾಗಳ ಕಾರ್ಯಕರ್ತರು ಈಗಾಗಲೇ ಮನೆ ಮನೆಗೆ ತೆರಳಿ ಪ್ರಣಾಳಿಕೆಯ ಸಲಹಾ ಫಾರಂನ್ನು ನೀಡಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಅನೇಕ ಚಿಂತನ-ಮಂಥನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ವ್ಯಾಟ್ಸಪ್, ಇ-ಮೇಲ್ ಮುಖಾಂತರ ಹಾಗೂ ಬಾರ್‌ಕೋಡ್‌ಗಳನ್ನು ಸ್ಕಾ ್ಯನ್ ಮಾಡುವುದರ ಮುಖಾಂತರ ಆನ್‌ಲೈನ್ ಮುಖಾಂತರವು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಫಲಾನುಭವಿಗಳು ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಭ್ರಷ್ಟಾಚಾರ ಕೇಂದ್ರವೇ ಕಾಂಗ್ರೆಸ್: ಗೃಹ ಸಚಿವ ಆರಗ ಜ್ಞಾನೇಂದ್ರ
ಮಾ. 16ರಂದು ನಡೆಯಲಿರುವ ಸಭೆಯಲ್ಲಿ ಸಾವಿರ ಸ್ಟಿಕ್ಕರ್‌ನ್ನು ಬಿಡುಗಡೆಗೊಳಿಸಲಾಗುವುದು. ಅಭಿವೃದ್ಧಿಯ ದಿಕ್ಕಿನಲ್ಲಿ ಡಬಲ್ ಇಂಜಿನ್ ಸರ್ಕಾರಕ್ಕೆ ಸಾರ್ವಜನಿಕರು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಸಲಹೆಯನ್ನು ನೀಡುವಂತೆ ಈಗಾಗಲೆ ಪಕ್ಷದಿಂದ ಘೋಷಣೆ ಮಾಡಲಾಗಿದೆ ಎಂದರು.