Asianet Suvarna News Asianet Suvarna News

ಬಳ್ಳಾರಿ ಲಾಜಿಕ್ ರಾಜಕೀಯ: ಒಬ್ರು ಸೀರೆ ಕೊಟ್ರೆ, ಮತ್ತೊಬ್ರು ಬೆಳ್ಳಿ ಕಾಯಿನ್ ಕೊಟ್ರು!

ಚುನಾವಣೆಗೆ ಈಗಿನಿಂದಲೇ ತಯಾರಿ ಶುರುವಗಿದ್ದು, ಶಿಕ್ಷಕರ ಮತ ಸೆಳೆಯಲು ಒಬ್ಬರು ಸೀರೆ ಗಿಫ್ಟ್ ಕೊಟ್ರೆ ಮತ್ತೋರ್ವರು ಬೆಳ್ಳಿ ಕಾಯಿನ್ ಕೊಟ್ಟಿದ್ದಾರೆ.

Karnataka Assembly Poll 2023 BJP And Congress Leaders gits To Teacher In Bellary rbj
Author
First Published Sep 9, 2022, 6:21 PM IST

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಸೆಪ್ಟೆಂಬರ್.09):
ಕರ್ನಾಟಕ ವಿಧಾನಸಭೆಗೆ ಇನ್ನೇನು ಆರೇಳು ತಿಂಗಳು ಬಾಕಿ ಇದೆ.ಆಗಲೇ  ಜನಪ್ರತಿನಿಧಿಗಳ ಓಡಾಟದ ಜೊತೆ ಸಾರ್ವಜನಿಕರ ಮನವೊಲಿಕೆ ಕಾರ್ಯ ಈಗಾಗಲೇ ನಡೆದಿದೆ. ಇಷ್ಟು ದಿನ ಜನರ ಮನವೊಲಿಸಲು ಕೆಲಸವಾಯ್ತು. ಇದೀಗ ಶಿಕ್ಷಕರ ಮನವೊಲಿಸಲು ಕಸರತ್ತು ಜೋರಾಗಿದೆ. 

ಹೌದು.. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಉಡುಗೊರೆ ಕೊಡೋ‌ ಮೂಲಕ ಮನವೊಲಿಸೋ  ಕೆಲಸ ಮಾಡ್ತಿದ್ದಾರೆ. ಆದ್ರೆ, ಇವರು ಕೊಡೋ ಉಡುಗೊರೆಯಿಂದಲೇ ಮತ ಹಾಕ್ತಾರೆ ಎಂದೇನಿಲ್ಲ ಆದ್ರೇ, ಇದೆಲ್ಲವೂ ಕೂಡ ಒಂದಷ್ಟು ತಮ್ಮ ಪರವಾದ ಅಲೆ ಸೃಷ್ಟಿಸಲು ಎನ್ನುವುದಾಗಿದೆ.

ಯಾವಾಗ್ಯಾವಾಗ ಗಾಯ ಆಗಿದೆಯೋ, ಕೈ ಮುರಿದಿದೆಯೋ ಆಗೆಲ್ಲಾ ಅದೃಷ್ಟ ಒಲಿದಿದೆ ಎಂದ ಕೈ ಶಾಸಕ

ಒಬ್ಬರು ಸೀರೆ ಕೊಟ್ಟರೇ ಮತ್ತೊಬ್ಬರು ಬೆಳ್ಳಿ ಕಾಯಿನ್ 
ಇನ್ನೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಬಳ್ಳಾರಿ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ಎಲ್ಲ ಶಿಕ್ಷಕರಿಗೂ ಸೀರೆಯನ್ನು ಉಡುಗೊರೆ ಕೊಡೋ ಮೂಲಕ ಶಿಕ್ಷಕರ ಮನವೊಲಿಕೆ ಮಾಡೋ ಕಸರತ್ತು ಮಾಡಿದ್ದಾರೆ. ತಮ್ಮ ಹಾಲಿ ಕ್ಷೇತ್ರ ಮೊಳಕಾಲ್ಮೂರು ಬಿಟ್ಟು ಬಳ್ಳಾರಿಯಲ್ಲಿ ಸೀರೆ ಹಂಚಿರೋದ್ರಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಮರಳುತ್ತಾರೆ. ತಮ್ಮ ತವರೂ ಕ್ಷೇತ್ರದಿಂದಲೇ  ಶ್ರೀರಾಮುಲು ಈ ಬಾರಿ ಸ್ಪರ್ಧೆ ಮಾಡ್ತಾರೆ ಅನ್ನೋ ಊಹಾ ಪೋಹಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಿದೆ. ಇನ್ನೂ ಸೀರೆಯ ಬಾಕ್ಸ್ ಮೇಲೆ ಶ್ರೀರಾಮುಲು ಪೋಟೋ ಇರೋದು ಕೂಡ ಚುನಾವಣೆ ಗಿಮಿಕ್ಸ್ ಅನ್ನೋದಕ್ಕೆ ಸಾಕ್ಷಿ ನೀಡಿದಂತಿತ್ತು.

ಹಗರಿಬೊಮ್ಮನ ಹಳ್ಳಿಯಲ್ಲಿ ಬೆಳ್ಳಿ ಕಾಯಿನ್
ಇತ್ತ ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಶಿಕ್ಷಕರಿಗೆ ಸೀರೆ ವಿತರಣೆ ಮಾಡಿದ್ರೇ ಅತ್ತ ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾನಾಯ್ಕ ತಮ್ಮ ಕ್ಷೇತ್ರದ ಎಲ್ಲ ಶಿಕ್ಷಕರಿಗೆ ಬೆಳ್ಳಿ ಕಾಯಿನ್ ಕೊಟ್ಟಿದ್ದಾರೆ. ಈಗಾಗಲೇ ಒಮ್ಮೆ ಜೆಡಿ ಎಸ್ ನಿಂದ ಮತ್ತು ಒಮ್ಮೆ ಕಾಂಗ್ರೆಸ್ನಿಂದ  ಒಟ್ಟು ಎರಡು ಬಾರಿ ಗೆದ್ದಿರೋ ಶಾಸಕ ಭೀಮಾನಾಯ್ಕ ಈ ಬಾರಿ ಹ್ಯಾಟ್ರಿಕ್ ಸಾಧನೆ  ಗೆಲುವಿನ ಕನಸಿನಲ್ಲಿದ್ದಾರೆ. ಹೀಗಾಗಿ ಈಗಿನಿಂದಲೇ ಸಾಮಾನ್ಯ ಜನರಂತೆ ಶಿಕ್ಷಕರ ಮನವೊಲೈಸೋ ಕೆಲಸವನ್ನು ಮಾಡುತ್ತಿದ್ದಾರೆ.

ಅಲ್ಲದೇ ಶಿಕ್ಷಕರು ಕೂಡ ಚುನಾವಣೆ ಕೆಲಸ ಮಾಡುತ್ತಾರೆ. ಅವರು ಕೂಡ ಮತದಾರರು ಹೀಗಾಗಿ ಎಲ್ಲೋ ಒಂದು ಕಡೆ ಮನವೊಲೈಕೆ ತಂತ್ರ ಎನ್ನಲಾಗ್ತಿದೆ. ಯಾಕಂದ್ರೇ, ಮನುಷ್ಯನ ಸಹಜಗುಣ ಸಹಾಯ ಮಾಡಿದವರಿಗೆ ಮತ್ತೊಂದು ರೂಪದಲ್ಲಿ ಸಹಾಯ ಮಾಡೋದಾಗಿದೆ.ಇದೇ ಲಾಜಿಕ್ ಮುಂದಿಟ್ಟುಕೊಂಡು ಶಿಕ್ಷಕರಿಗೆ ಉಡುಗೊರೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.  ಆದ್ರೇ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಅನ್ನೊದನ್ನು ಮಾತ್ರ ಚುನಾವಣೆ ಬಳಿಕವಷ್ಟೇ ಗೊತ್ತಾಗಲಿದೆ. 

Follow Us:
Download App:
  • android
  • ios