ಯಾವಾಗ್ಯಾವಾಗ ಗಾಯ ಆಗಿದೆಯೋ, ಕೈ ಮುರಿದಿದೆಯೋ ಆಗೆಲ್ಲಾ ಅದೃಷ್ಟ ಒಲಿದಿದೆ ಎಂದ ಕೈ ಶಾಸಕ
ಕಾಂಗ್ರೆಸ್ ಶಾಸಕರೊಬ್ಬರು ಬಾತ್‍ರೂಮ್‍ನಲ್ಲಿ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದೀಗ ಕಾಂಗ್ರೆಸ್‌ನ ಮತ್ತೋರ್ವ ಶಾಸಕ ಕೈಮುರಿದುಕೊಂಡಿದ್ದಾರೆ. ಅಲ್ಲದೇ ನನಗ ಯಾವಾಗ ಯಾವಾಗ ಕೈ ಮುರಿದಿದೆಯೋ ಆಗೆಲ್ಲಾ ನನಗೆ ಅದೃಷ್ಟ ಒಲಿದು ಬಂದಿದೆ ಎಂದಿದ್ದಾರೆ.
ಬಳ್ಳಾರಿ, (ಆಗಸ್ಟ್. 05): ನನಗೆ ಯಾವಾಗ್ಯಾವಾಗ ಗಾಯ ಆಗಿದೆಯೋ, ಕೈ ಮುರಿದಿದೆಯೋ ಅವಗೆಲ್ಲಾ ನನಗೆ ಅದೃಷ್ಟ ಒಲಿದಿದೆ ಎಂದು ಕಾಂಗ್ರೆಸ್ ಶಾಸಕ ಇ ತುಕಾರಾಂ ಪಬ್ಲಿಕ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇಂದು (ಶುಕ್ರವಾರ) ಲೋಕೋಪಯೋಗಿ ನೂತನ ಗೆಸ್ಟ್ ಹೌಸ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಂಡೂರು ಶಾಸಕ ಇ ತುಕಾರಾಂ, ತಮ್ಮ ಕೈ ಮುರಿತದ ಬಗ್ಗೆ ನಗೆ ಚಟಾಕಿ ಹಾರಿಸಿದ್ದಾರೆ.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬೇಸತ್ತ ಜನ: ಶಾಸಕ ತುಕಾರಾಂ
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಇ ತುಕಾರಾಂ, ನನ್ನ ಕೈ ಮುರಿದಿದೆ. ಹೀಗಾಗಿ ಬ್ಯಾಂಡೇಜ್ ಹಾಕಿದ್ದೇನೆ. ನನಗೆ ಯಾವಾಗ ಗಾಯ ಆಗಿದೆಯ್ಯೋ, ಕೈ ಮುರಿದಿದೇಯ್ಯೋ ಆಗೆಲ್ಲಾ ನನಗೆ ಅದೃಷ್ಟ ಒಲಿದಿದೆ ಎಂದರು.
ಇದು ಸಿದ್ದರಾಮೋತ್ಸವದ ಎಪೆಕ್ಟ್ ಅಲ್ಲ. ಹಿಂದೆ ಕೈ ಮುರಿದಾಗ ಸಚಿವ ಆದೆ. ನಂತರ ಸಿದ್ದರಾಮಯ್ಯನವರ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಆದೆ. ಈಗ ಕೈಗೆ ಕ್ರಾಕ್ ಆಗಿದೆ. ಮುಂದೆನೂ ಅದೃಷ್ಟ ಒಲಿಯಬಹುದು ಎಂದು ತುಕಾರಾಂ ಅಚ್ಚರಿ ಹೇಳಿಕೆ ನೀಡಿದರು.
ರಾಜ್ಯ ರಾಜಕೀಯ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಇನ್ನು ಇದೇ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಅವರ ಕಾರ್ಯವೈಖರಿಯನ್ನು ಹಾಡಿಹೊಗಳಿದ್ದು, ಸಚಿವ ಸಿ.ಸಿ ಪಾಟೀಲ್ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನ ಅಳವಡಿಸಿಕೊಂಡ ಸಚಿವರಾಗಿದ್ದಾರೆ. ಸಿ.ಸಿ ಪಾಟೀಲ ಎಲ್ಲ ಪಕ್ಷದ ಶಾಸಕರಿಗೂ ಸಮಾನವಾಗಿ ಅನುದಾನವನ್ನ ನೀಡಿದ್ದಾರೆ. ಬಸವಣ್ಣನವರ ಪ್ರಕಾರ ಕಾಯಕವೇ ಕೈಲಾಸ ಎಂದು ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲು ಮುರಿದುಕೊಂಡ ಶಾಸಕ ಎಂ.ವೈ ಪಾಟೀಲ್
ಹುಬ್ಬಳ್ಳಿ: ಸ್ನಾನ ಮಾಡುವಾಗ ಬಾತ್‍ರೂಮ್‍ನಲ್ಲಿ ಕಾಲು ಜಾರಿ ಬಿದ್ದು ಕಲಬುರಗಿಯ ಅಫಜಲಪುರ ಶಾಸಕ ಎಮ್.ವೈ ಪಾಟೀಲ್ ಕಾಲು ಮುರಿದುಕೊಂಡಿದ್ದಾರೆ.
ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡಿದ್ದ ಎಂ.ವೈ.ಪಾಟೀಲ್, ವಾಪಸ್ಸು ಊರಿಗೆ ತೆರಳಲು ತಡವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸರ್ಕಿಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು. ಇಂದು(ಆ.04) ಬೆಳಗ್ಗೆ ಸ್ನಾನ ಮಾಡಲು ಹೋದಾಗ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಕೂಡಲೇ ಜೊತೆಗಿದ್ದ ಅವರ ಆಪ್ತರು ಅಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಶಾಸಕ ಎಂ.ವೈ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.