ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ!
ಹನುಮಾನ್ ಭಕ್ತರ ನಾಡು ಕರ್ನಾಟಕಕ್ಕೆ ಆಗಮಿಸಿದ ಪ್ರಭು ಹನುಮಾನ್ ಚರಣಕ್ಕೆ ನಮಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಹಿಂದೆ ಶ್ರೀರಾಮ ಚಂದ್ರನ ಬಂಧಿಸಿಟ್ಟ ಕಾಂಗ್ರೆಸ್ ಇದೀಗ ಹನುಮಾನ್ ಬಂಧಿಸಿಡಲು ಹೊರಟಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ(ಮೇ.02); ಕಾಂಗ್ರೆಸ್ ಈ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಇದೀಗ ಹುನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಭಜರಂಗದಳ ನಿಷೇಧಿಸುವುದಾಗಿ ಘೋಷಿಸಿದೆ. ಇದರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಶ್ರೀರಾಮಚಂದ್ರ ಹಾಗೂ ಹನುಮಾನ್ ನಮಗೆ ಪೂಜ್ಯ ಎಂದಿದ್ದಾರೆ. ವಿಜಯನಗರದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಹನುಮಾನ ಜನ್ಮಸ್ಥಾನಕ್ಕೆ ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಆದರೆ ಇದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗಬಲಿ ಅಂದರೆ ಹನುಮಂತನನ್ನ ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶ್ರೀರಾಮಚಂದ್ರನನ್ನು ಬಂಧಿಸಿಟ್ಟಿದ್ದರು. ಅವರಿಗೆ ಈ ಹಿಂದೆ ಶ್ರೀರಾಮ ಕಂಡರೂ ಆಗುತ್ತಿಲ್ಲ. ಇದೀಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮ ಚಂದ್ರ ಹಾಗೂ ಹನುಮಂತ ಪೂಜ್ಯ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಬದ್ಧರಾಗಿದ್ದೇವೆ. ನಮ್ಮ ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ರೌಡಿಗಳನ್ನು ಎನ್‌ಕೌಂಟರ್ ಮಾಡಿದರೆ ಕಾಂಗ್ರೆಸ್ ಕಣ್ಣಲ್ಲಿ ನೀರು, ಚಿತ್ರದುರ್ಗದಲ್ಲಿ ಮೋದಿ ಮಾತಿಗೆ ವಿಪಕ್ಷ ಸುಸ್ತು!
ವಿಜಯನಗರ ಜಿಲ್ಲೆ ಅತ್ಯಂತ ಐತಿಹಾಸಿಕ ಸ್ಥಳವಾಗಿದೆ. ಪುರಾಣ, ಇತಿಹಾಸದಲ್ಲೂ ಉಲ್ಲೇಖವಿದೆ. ಇದು ಕರ್ನಾಟಕದ ಅತ್ಯಂತ ಯುವ ಜಿಲ್ಲೆಯಾಗಿದೆ. ವಿಜಯನಗರ ಜಿಲ್ಲೆಯಾಗಿ ಮಾಡಲಾಗಿದೆ. ಇಲ್ಲಿನ ಪ್ರತಿ ಮನೆ ಮನೆಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಈಗಾಗಲೇ ವಿಜನಗರ ಜನರು ಬಿಜೆಪಿಯ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ವಿಜಯನಗರ ನಿರ್ಧಾರ ಮಾಡಿದ್ದಾರೆ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ದಶಕಗಳ ಆಡಳಿತದಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವೆ ದೊಡ್ಡದಾದ ಕಂದಕ ನಿರ್ಮಾಣವಾಗಿದೆ. ಈ ಕಂದಕವನ್ನು ದೂರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಇಂದು ನಗರದಲ್ಲಿ ಸಿಗುವ ಸೌಲಭ್ಯಗಳು, ಗ್ರಾಮೀಣ ಪ್ರದೇಶದಲ್ಲಿ ಸಿಗಬೇಕು ಅನ್ನೋ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಹಾಗೂ ನಗರ ಪ್ರದೇಶದ ದೂರ ಕಡಿಮೆ ಮಾಡಲು ಬಿಜೆಪಿ ಕೆಲಸ ಮಾಡುತ್ತಿದೆ. ಎಲ್ಲಾ ರೈತರ ಜಮೀನಿಗೆ ಬೇಕಾದ ನೀರಾವರಿ ವ್ಯವಸ್ಥೆ ಆಗಬೇಕು ಅನ್ನೋದು ಅವರ ಬೇಡಿಕೆಯಾಗಿತ್ತು. ಇದನ್ನು ಪರಿಗಣಿಸಿ ಈ ಭಾಗದಲ್ಲಿ 70ಕ್ಕೂ ಹೆಚ್ಚು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷಿ ಕಾಲೇಜನ್ನು ಸ್ಥಾಪನೆ ಮಾಡಲಾಗುತ್ತಿದೆ. ಡಿಜಿಟಲ್ ಇಂಡಿಯಾ ಅಭಿಯಾನ, ಪ್ರತಿಯೊಂದು ಮನಗೆ ಕುಡಿಯವ ನೀರು ಪೂರೈಸುವ ಅಭಿಯಾನ, ಆರೋಗ್ಯ ಅಭಿಯಾನ ಎಲ್ಲವೂ ಗ್ರಾಮ ಹಾಗೂ ನಗರದ ಅಂತರ ಕಡಿಮೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್: ಜೀ-ಮ್ಯಾಟ್ರಿಜ್ ಸಮೀಕ್ಷೆ
ಹಂಪಿ ಬಗ್ಗೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೆ ಹೆಮ್ಮೆಯ ಪ್ರತೀಕ. ಆದರೆ ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್‌ಗೆ ಇದು ಹೆಮ್ಮೆಯ ವಿಷಯವಲ್ಲ. ಇದರ ಪರಿಣಾಮ ಹಂಪಿಯಂತ ಪಾರಪಂರಿಕ ತಾಣ ನಿರ್ಲಕ್ಷ್ಯಕ್ಕೊಳಗಾಯಿತು. ಆದರೆ ನಮ್ಮ ಸರ್ಕಾರ 50 ರೂಪಾಯಿ ನೋಟಿನಲ್ಲಿ ಹಂಪಿಯ ಕಲ್ಲಿನ ರಥ ಮುದ್ರಣ ಮಾಡಲಾಗಿದೆ. ಹಂಪಿಯ ವಿರಾಸತ್‌ನ್ನು ಬಿಜೆಪಿ ಸಂರಕ್ಷಣೆ ಮಾಡುತ್ತಿದೆ. ಹಂಪಿ, ಬಾದಾಮಿ, ಐಹೋಳೆ, ಪಟ್ಟದಕಲ್ಲು, ಬಿಜಾಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.