Asianet Suvarna News Asianet Suvarna News

Karnataka election 2023: ಕಾಫಿನಾಡಲ್ಲಿ ಮಹಿಳಾ ಮತದಾರರೇ ಮೇಲು!

:  'ಹೆಣ್ಮಕ್ಕಳೇ ಸ್ಟ್ರಾಂಗ್ ಗುರು' ರಾಜ್ಯದ ಮಟ್ಟಿಗೆ ಈ ಟೈಟಲ್‌ ಹಲವು ಬಾರಿ ರಿಪೀಟ್‌ ಆಗುತಿ​ತ​ರು​ತ್ತದೆ. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದ ವೇಳೆಯಲ್ಲಿ ಇದೊಂದು ಕಾಯಂ ಸ್ಲೋಗನ್‌. ಈಗ ಚುನಾ​ವಣಾ ಸಮಯ. ಪ್ರಸ್ತುತ ಜಿಲ್ಲೆ​ಯ​ಲ್ಲಿ ಮತದಾರರ ಸಂಖ್ಯೆಯಲ್ಲೂ ಮಹಿಳೆಯರೇ ಮೇಲುಗೈ. ಇಲ್ಲೂ ಕೂಡ ಸ್ಟ್ರಾಂಗ್‌!

karnataka assembly election women voters are more in chikkamagaluru rav
Author
First Published Mar 19, 2023, 9:34 AM IST

ಆರ್‌. ತಾರಾನಾಥ್‌

ಚಿಕ್ಕಮಗಳೂರು (ಮಾ.19) :  'ಹೆಣ್ಮಕ್ಕಳೇ ಸ್ಟ್ರಾಂಗ್ ಗುರು' ರಾಜ್ಯದ ಮಟ್ಟಿಗೆ ಈ ಟೈಟಲ್‌ ಹಲವು ಬಾರಿ ರಿಪೀಟ್‌ ಆಗುತಿ​ತ​ರು​ತ್ತದೆ. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದ ವೇಳೆಯಲ್ಲಿ ಇದೊಂದು ಕಾಯಂ ಸ್ಲೋಗನ್‌. ಈಗ ಚುನಾ​ವಣಾ ಸಮಯ. ಪ್ರಸ್ತುತ ಜಿಲ್ಲೆ​ಯ​ಲ್ಲಿ ಮತದಾರರ ಸಂಖ್ಯೆಯಲ್ಲೂ ಮಹಿಳೆಯರೇ ಮೇಲುಗೈ. ಇಲ್ಲೂ ಕೂಡ ಸ್ಟ್ರಾಂಗ್‌!

ಈ ಬಾರಿಯ ವಿಧಾನಸಭಾ ಚುನಾವಣೆ(Karnataka assembly election 2023) ಮತದಾರರ ಪಟ್ಟಿಪರಿಷ್ಕರಣೆ ನಂತರ ಅಂತಿಮ ಪಟ್ಟಿಪ್ರಕಟಗೊಂಡಿದೆ. ಇಲ್ಲಿನ ಅಂಕಿಅಂಶ ನೋಡಿದರೆ ಕಾಫಿನಾಡಿನಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು. ಜಿಲ್ಲೆಯಲ್ಲಿ ಇರೋದು ಒಟ್ಟು ಮತದಾರರ ಸಂಖ್ಯೆ 934769. ಇದರಲ್ಲಿ ಪುರುಷರ ಸಂಖ್ಯೆ 464228, ಮಹಿಳಾ ಮತದಾರರ ಸಂಖ್ಯೆ 470505. ಅಂದರೆ 6277 ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

CHIKKAMAGALURU: ಪರವಾನಗಿ ಪಡೆಯದೆ ಬ್ಯಾನರ್ಸ್, ಫ್ಲೆಕ್ಸ್, ಪೋಸ್ಟರ್ ಅಂಟಿಸುವುದು ನಿಷೇಧ: ಜಿಲ್ಲಾಧಿಕಾರಿ ರಮೇಶ್

ಭಾಗಶಃ, ಈ ಕಾರಣಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಚುನಾವಣೆ ಘೋಷಣೆಗೂ ಮುನ್ನ ಮಹಿಳೆಯರಿಗೆ ಸೀರೆ ಹಂಚಿ​ಕೆ, ಅವರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡುತ್ತಿವೆ ಎಂಬ ಮಾತನ್ನು ತೆಗೆದು ಹಾಕುವಂತಿಲ್ಲ. ಆದರೆ, ರಾಜಕೀಯ ಪ್ರಾತಿನಿಧ್ಯ ನೀಡುವ ಸಂದರ್ಭದಲ್ಲಿ ಮಹಿ​ಳೆ​ಯನ್ನು ಪರಿಗಣಿಸುತ್ತಿಲ್ಲ.

ಟಿಕೆಟ್‌ ಹಂಚಿಕೆ:

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ(Chikkamagaluru assembly constituency)ಗಳ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಚಿತ್ರಣ ಫೈನಲ್‌ ಹಂತಕ್ಕೆ ಬಂದಿದೆ. ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಶಾಸಕರು ಇದ್ದಾರೆ. ಮೂಡಿಗೆರೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ಕೆಲವು ಮುಖಂಡರು ದಾಳ ಬೀಸಿದ್ದಾರೆ. ಅದು, ಬಹಿರಂಗವಾಗಿ ಸ್ಫೋಟಗೊಂಡಿದೆ. ಆದರೂ ಅವರಿಗೆ ಪಕ್ಷದ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸ ಪಕ್ಷದ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ.ಎನ್‌. ಜೀವರಾಜ್‌ ಸ್ಪರ್ಧಿಸಲಿದ್ದಾರೆ. ಜೆಡಿಎಸ್‌, ತರೀಕೆರೆ ಹೊರತುಪಡಿಸಿ, ಇನ್ನುಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯನ್ನು ಪ್ರಕಟ ಮಾಡಿದೆ. ಆದರೆ, ಕಾಂಗ್ರೆಸ್‌ ಪಕ್ಷದಿಂದ ಈ ಐದು ಕ್ಷೇತ್ರಗಳಲ್ಲಿ ಯಾರಾರ‍ಯರು ಸ್ಪರ್ಧೆ ಮಾಡುತ್ತಾರೆಂಬ ಸ್ಪಷ್ಟವಾದ ಚಿತ್ರಣ ಮತದಾರರ ಮುಂದಿಲ್ಲ.

ಬಿಜೆಪಿ- ಕಾಂಗ್ರೆಸ್‌:

ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಸ್ಪಷ್ಟವಾದ ಚಿತ್ರಣ ಮುಂದಿದ್ದರೂ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸುಷ್ಮಾ ಅವರು ಟಿಕೆಟ್‌ ನೀಡುವಂತೆ ಪಕ್ಷಕ್ಕೆ ಮನವಿ ಮಾಡಿದ್ದಾರೆ. ಮೂಡಿಗೆರೆ ಕ್ಷೇತ್ರದ ಬಿಜೆಪಿ ನಾಯಕರ ಮೂಲಕ ಲಾಭಿ ಮಾಡುತ್ತಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌ ಟಿಕೆಟ್‌ ಕೋರಿರುವ ಮಹಿಳೆಯ ಸಂಖ್ಯೆ ಇತರೇ ಪಕ್ಷಗಳಿಗಿಂತ ಹೆಚ್ಚಾಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಹಾಗೂ ನಾಗರತ್ನ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ನಾಗರತ್ನ ಅವರು ಟಿಕೆಟ್‌ಗಾಗಿ ನಡೆಸುವ ಪ್ರಯತ್ನದಿಂದ ಹಿಂದೆ ಸರಿದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ತು ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಅರ್ಜಿ ಸಲ್ಲಿಸದೆ ಇದ್ದರೂ ಟಿಕೆಟ್‌ಗಾಗಿ ಫೈಟ್‌ ಮಾಡುತ್ತಿದ್ದಾರೆ.

BJP Vijaysankalpa yatre: ಮೋದಿ ಬಡವರ ಬದುಕಿಗೆ ಭದ್ರತೆ ನೀಡಿದ್ದಾರೆ: ಆರಗ ಜ್ಞಾನೇಂದ್ರ

470505 ಮಹಿಳಾ ಮತದಾರರು ಇರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಮೂವರು ಹಾಗೂ ಬಿಜೆಪಿಯಿಂದ ಓರ್ವ ಮಹಿಳೆ ಪ್ರಯತ್ನದಲ್ಲಿದ್ದಾರೆ. ಸದ್ಯದ ಬೆಳವಣಿಗೆ ನೋಡಿದರೆ ಓರ್ವ ಮಹಿಳೆಗೆ ಮಾತ್ರ ಟಿಕೆಟ್‌ ಸಿಗುವ ಸಾಧ್ಯತೆ ಇದೆ.

ಕ್ಷೇತ್ರ - ಮಹಿಳಾ ಮತದಾರರು

  • ಶೃಂಗೇರಿ - 84090
  • ಮೂಡಿಗೆರೆ - 84813
  • ಚಿಕ್ಕಮಗಳೂರು - 108868
  • ತರೀಕೆರೆ - 93806
  • ಕಡೂರು - 98928
Follow Us:
Download App:
  • android
  • ios