Chittapur Election Result 2023: ಚಿತ್ತಾಪುರದಲ್ಲಿ ರಾಠೋಡ್‌ ವಿರುದ್ಧ ಖರ್ಗೆಗೆ ಗೆಲುವು

ಪ್ರಿಯಾಂಕ್‌ ಖರ್ಗೆ ಒಟ್ಟು 81323 ಮತಗಳನ್ನ ಪಡೆದರೆ, ಮಣಿಕಾಂತ್‌ ರಾಠೋಡ್‌ 67683 ಮತಗಳನ್ನ ಪಡೆಯುವ ಮೂಲಕ ಪ್ರಿಯಾಂಕ್‌ ಖರ್ಗೆ ಒಟ್ಟು 13640 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Karnataka Assembly Election Result 2023 Priyank Kharge Win in Chittapur grg

ಕಲಬುರಗಿ(ಮೇ.13): ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್‌ ಖರ್ಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಮಣಿಕಾಂತ್‌ ರಾಠೋಡ್‌ ಅವರನ್ನ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ. ಪ್ರಿಯಾಂಕ್‌ ಖರ್ಗೆ ಒಟ್ಟು 81323 ಮತಗಳನ್ನ ಪಡೆದರೆ, ಮಣಿಕಾಂತ್‌ ರಾಠೋಡ್‌ 67683 ಮತಗಳನ್ನ ಪಡೆಯುವ ಮೂಲಕ ಪ್ರಿಯಾಂಕ್‌ ಖರ್ಗೆ ಒಟ್ಟು 13640 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್‌ ಖರ್ಗೆ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಅಂತ ಬಿಜೆಪಿ ಮಣಿಕಾಂತ್‌ ರಾಠೋಡ್‌ ಹೇಳಿಕೊಂಡಿದ್ದರು. ಆದರೆ, ಕ್ಷೇತ್ರದ ಜನತೆ ಮಾತ್ರ ಪ್ರಿಯಾಂಕ್‌ ಖರ್ಗೆ ಅವರಿಗೆ ಜೈ ಎಂದಿದ್ದಾರೆ. 

Karnataka Election Result 2023: ಮುಧೋಳದಲ್ಲಿ ಗೋವಿಂದ ಕಾರಜೋಳಗೆ ಸೋಲು

ಈ ಗೆಲುವಿನ ಮೂಲಕ ಪ್ರಿಯಾಂಕ್‌ ಖರ್ಗೆ ಚಿತ್ತಾಪುರದಲ್ಲಿ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಜನತೆಯೂ ಕೂಡ ಖರ್ಗೆ ಕುಟುಂಬಕ್ಕೆ ಮತ ಹಾಕಿದ್ದಾರೆ. 

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತವರಲ್ಲಿಯೇ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಗಳಿಸಿದ್ದು, ದೇಶದಲ್ಲಿಯೇ ಕಾಂಗ್ರೆಸ್ ಮೂರನೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ ಆಗಿದೆ. 

Latest Videos
Follow Us:
Download App:
  • android
  • ios