ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕಿಸಲು ಹೊರಟಿದೆ ಕಾಂಗ್ರೆಸ್, ಸೋನಿಯಾ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ!

ಕರ್ನಾಟಕದ ಸಾರ್ವಭೌಮತ್ವ ಕುರಿತು ಸೋನಿಯಾ ಗಾಂಧಿ ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ ಮೋದಿ ಗರಂ ಆಗಿದ್ದಾರೆ. ಸಂವಿಧಾನವನ್ನೇ ಅರಿಯದ ಕಾಂಗ್ರೆಸ್ ನಾಯಕರು, ಭಾರತದಿಂದ ಕರ್ನಾಟಕ ಪ್ರತ್ಯೇಕಿಸುವ ಮಾತನಾಡುತ್ತಿದ್ದಾರೆ. ಭಾರತ ಜನನಿಯ ತನುಜಾತೆ ಎಂದು ಕುವೆಂಪು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.

Karnataka Assembly Election PM Modi slams Sonia Gandhi statement on state sovereignty in nanjangud ckm

ನಂಜನಗೂಡು(ಮೇ.07:  ವಿದೇಶಿ ಶಕ್ತಿಗಳನ್ನು ಭಾರತ ವಿಷಯದಲ್ಲಿ ಮಧ್ಯಪ್ರವೇಶಿಸಲು ಕಾಂಗ್ರೆಸ್ ಹೇಳುತ್ತಿದೆ. ಈ ಮೂಲಕ ಕಾಂಗ್ರೆಸ್ ಭಾರತದ ಶಕ್ತಿಯನ್ನೇ ಪ್ರಶ್ನಿಸುತ್ತಿದೆ. ಭಾರತದ ಆಂತರಿಕ ಸಮಸ್ಯೆಗಳಿಗೆ ವಿದೇಶಿ ಶಕ್ತಿಗಳನ್ನು ಆಮಂತ್ರಿಸುವ ಕಾಂಗ್ರೆಸ್ ಭಾರತವನ್ನೇ ಅವಮಾನಿಸುತ್ತಿದೆ. ಕರ್ನಾಟಕದ ಸಾರ್ವಭೌಮತ್ವವನ್ನು ಕಾಂಗ್ರೆಸ್ ರಕ್ಷಿಸುತ್ತದೆ ಎಂದು ನಿನ್ನೆ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ. ಇಷ್ಟು ದಿನ ಸಂಸತ್ತಿನಲ್ಲಿ ಕುಳಿತವರೂ ಸಂವಿಧಾನವನ್ನೇ ಅರಿತಿಲ್ಲ.ಸ್ವತಂತ್ರಗೊಂಡ ಬೆನ್ನಲ್ಲೇ ಸಾರ್ವಭೌಮತ್ವ ಸಿಕ್ಕಿದೆ. ಆದರೆ ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಿ ನೋಡುತ್ತಿದೆ. ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ನೋಡುತ್ತಿದೆ. ಟುಕುಡೆ ಟುಕಡೆ ಸಮಸ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಭಾರತ ಜನನಿಯ ತನುಜಾತೆ ಎಂದು ಕುವೆಂಪು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಕರ್ನಾಟಕವನ್ನೇ ಪ್ರತ್ಯೇಕಿಸುವ ಮಾತನಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ನಂಜನಗೂಡಿನಲ್ಲಿ ಕೊನೆಯ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ದುರಾಡಳಿತ, ಕರ್ನಾಟಕದ ಸಾರ್ವಭೌಮತ್ವವನ್ನೇ ಪ್ರಶ್ನಿಸುವ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆಹಣ್ಣು ವಿಶ್ವಪ್ರಸಿದ್ಧಿಯಾಗಿದೆ. ಸ್ಥಳೀಯ ಉತ್ಪನ್ನ, ಇಲ್ಲಿನ ಸಾಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಜೆಪಿ ಅವರತ ಶ್ರಮ ಪಡುತ್ತಿದೆ. ಆದರೆ ಕಾಂಗ್ರೆಸ್ ಶೇಕಡಾ 85 ರಷ್ಟು ಕಮಿಷನ್ ಪಡೆದು ಅಭಿವೃದ್ಧಿ ಮಾಡದೇ ಮಲಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಕರ್ನಾಟಕದ ಈ ಚುನಾವಣೆ ಐತಿಹಾಸಿಕವಾಗಿದೆ. ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಕರ್ನಾಟಕದ ಜನತೆ ಭರವಸೆ ಇಟ್ಟಿದೆ.  ಡಬಲ್ ಎಂಜಿನ್ ಸರ್ಕಾರ, ಡಬಲ್ ಸೇವಾ ಮನೋಭಾವ, ಡಬಲ್ ಶಕ್ತಿಯಿಂದ ಕೆಲಸ ಮಾಡುತ್ತಿದೆ.ಕಳೆದ ಕೆಲ ವರ್ಷಗಳಲ್ಲಿ ಇದು ಸಾಬೀತಾಗಿದೆ. ದೇಶದ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದರಿಂದ ಕರ್ನಾಟಕದ ಅಭಿವೃದ್ಧಿಯೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಇಂದು ಭಾರತದ ಆರ್ಥ ವ್ಯವಸ್ಥೆ ವಿಶ್ವದ ಟಾಪ್ 5 ಸ್ಥಾನ ಪಡೆದುಕೊಂಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದಾಖಲೆ, ರಫ್ತಿನಲ್ಲಿ ಭಾರತ ದಾಖಲೆ ಬರೆದಿದೆ ಎಂದು ಮೋದಿ ಹೇಳಿದ್ದಾರೆ.

 

ಇಂದು ಮಕ್ಕಳ ಭವಿಷ್ಯದ ನೀಟ್ ಪರೀಕ್ಷೆ, ನಮ್ಮ ಪರೀಕ್ಷೆ ಮೇ.10ಕ್ಕೆ; ಶಿವಮೊಗ್ಗದಲ್ಲಿ ಮೋದಿ ಭಾಷಣ!

ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಇದ್ದಾಗ ಕರ್ನಾಟಕ ಅಭಿವೃದ್ಧಿ ಕುಂಠಿತವಾಗಿತ್ತು. ಕರ್ನಾಟಕಕ್ಕೆ ಅತೀ ಹೆಚ್ಚಿನ ನೇರ  ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಈ ಕೆಲಸದಿಂದ ನಿಮಗೆ ಹೆಮ್ಮೆಯಾಗುತ್ತಿದೆ ಅಲ್ವಾ? ಮೊಬೈಲ್ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅತೀ ದೊಡ್ಡ ಮೊಬೈಲ್ ಕಂಪನಿಗಳು ಕರ್ನಾಟಕಕ್ಕೆ ಆಗಮಿಸುತ್ತಿದೆ. ಇದನ್ನು ಎಲ್ಲಾ ಕನ್ನಡಿಗನಿಗೆ ಹೆಮ್ಮೆಯ ವಿಷವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಇದು ಹೆಮ್ಮೆ ತರುವ ವಿಷವಲ್ಲ ಎಂದು ಮೋದಿ ಹೇಳಿದ್ದಾರೆ. 

ಭಾರತದ ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರವಾಗುತ್ತಿದೆ. ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ಉತ್ಪಾದನೆ ಘಟಕ ಕರ್ನಾಟಕದಲ್ಲಿ ಆರಂಭಗೊಂಡಿದೆ. ಕರ್ನಾಟಕ ಸ್ಟಾರ್ಟ್ಆಪ್ ಕೈಗಾರಿಕೆಗಳ ರಾಜಧಾನಿಯಾಗಬೇಕು. 1 ಲಕ್ಷ ಸ್ಟಾರ್ಟ್ಆಪ್ ಕರ್ನಾಟಕಕ್ಕೆ ಆಗಮಿಸುತ್ತಿದೆ. ಕರ್ನಾಟಕದಲ್ಲಿ 16,000 ಕಿಲೋಮೀಟರ್ ರೈಲ್ವೇ ವಿದ್ಯುದ್ದೀಕರಣ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ, ಹೆದ್ದಾರಿ ಅಭಿವೃದ್ದಿಗಳಿಂದ ಇಲ್ಲಿನ ಉದ್ಯೋಗ ಹೆಚ್ಚಳವಾಗಲಿದೆ. ಇಲ್ಲಿನ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. 

ಗರೀಬಿ ಹಟಾವೋ ಗ್ಯಾರೆಂಟಿಯನ್ನು ಕಾಂಗ್ರೆಸ್ ದಶಕಗಳ ಹಿಂದೆ ನೀಡಿತ್ತು. ಆದರೆ ಇದು ಇತಿಹಾಸದ ಅತೀ ದೊಡ್ಡ ಸುಳ್ಳಿನ ಕಂತೆಯಾಗಿ ಉಳಿದುಕೊಂಡಿದೆ. ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಜನರ ಮುಂದಿಡುತ್ತದೆ. ಹೀಗಾಗಿ ಕಾಂಗ್ರೆಸ್‌ಗೆ ಬಡತನ ಹೋಗಲಾಡಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ವಂದೇ ಭಾರತ್ ರೈಲು ಚಲಿಸುತ್ತಿದೆ. ಭಾರತದಲ್ಲಿ ರೈಲು ನಿಲ್ದಾಣ ನವೀಕರಣ ಹೇಗೆ ಆಗುತ್ತಿದೆ? ಹೊಸ ಹೊಸ ವಿಮಾನ ನಿಲ್ದಾಣ ಹೇಗೆ ನಿರ್ಮಾಣ ಆಗುತ್ತಿದೆ? ಹೆದ್ದಾರಿ, ಅಧುನಿಕ ಮೂಲಭೂತ ಸೌಕರ್ಯ ನಿರ್ಮಾಣ ಹೇಗೆ ಆಗುತ್ತಿದೆ ಅನ್ನೋದು ಕಾಂಗ್ರೆಸ್ ಚಿಂತೆಯಾಗಿದೆ. ಇದಕ್ಕೆ ಮೋದಿ ಹಣ ಎಲ್ಲಿಂದ ತರುತ್ತಿದ್ದಾರೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಇದು ನಿಮ್ಮ ಹಣ. ನಿಮ್ಮ ಹಣದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದೆ. ಇದೇ ಹಣವನ್ನು ಕಾಂಗ್ರೆಸ್ ನುಂಗೀ ನೀರು ಕುಡಿಯುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

The Kerala Story ಕುರಿತು ಬಳ್ಳಾರಿಯಲ್ಲಿ ಮಾತಾಡಿದ ಪ್ರಧಾನಿ ಮೋದಿ: ನಿರ್ಮಾಪಕ ಹೇಳಿದ್ದೇನು?

ಯೋಗ, ಆಯುರ್ವೇದದಲ್ಲಿ ಭಾರತದ ತಾಖತ್ತು ಅಡಗಿದೆ. ಈ ವಿಚಾರದಲ್ಲಿ ಮೈಸೂರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಗವನ್ನು ಕಡೆಗಣಿಸಿತ್ತು. ಇಂದು ಇಡೀ ವಿಶ್ವದಲ್ಲಿ ಯೋಗದ ಚರ್ಚೆಯಾಗುತ್ತಿದೆ. ಇಡೀ ವಿಶ್ವವೇ ಯೋಗ ಮಾಡುತ್ತಿದೆ. ಇದಕ್ಕೆ ಕಾರಣವೇನು? ಇದಕ್ಕೆ ಮೋದಿ ಕಾರಣವಲ್ಲ, ನೀವು ನೀಡಿದ ಒಂದು ಮತ ಕಾರಣವಾಗಿದೆ ಎಂದು ಮೋದಿ ಹೇಳಿದ್ದಾರೆ. 

ಭಾರತ ಮಸಾಲೆಯಲ್ಲಿ ಅತ್ಯಂತ ಪ್ರಾಚೀನತೆ ಹೊಂದಿದೆ. ಕೊರೋನಾ ಸಮಯದಲ್ಲಿ ಅರಶಿನ ಹಾಕಿದ ನೀರು ಕುಡಿಯಲು ಹೇಳಿದ್ದೆ. ಇದನ್ನು ಕಾಂಗ್ರೆಸ್ ಟೀಕಿಸಿತ್ತು. ಆದರೆ ಕಾಂಗ್ರೆಸ್ ಕರ್ನಾಟಕದ ರೈತರನ್ನು ಅವಮಾನಿಸಿತ್ತು. ನಮ್ಮ ಮಸಾಲೆ ಬೇಡಿಕೆ ಹೆಚ್ಚಾಗಿದೆ. ಅರಶಿನ, ಶುಂಠಿ ರಫ್ತಿನಲ್ಲಿ ಶೇಕಡಾ 200 ರಷ್ಟು ಹೆಚ್ಚಾಗಿದೆ. ಇದರ ನೇರ ಲಾಭ ಮೈಸೂರಿನ ರೈತರಿಗೆ ಆಗಿದೆ. ಭಾರತದ ಸಂಸ್ಕೃತಿಯಲ್ಲಿ ಕರ್ನಾಟಕ ಒಂದು ಸ್ಥಂಬವಾಗಿದೆ. ನಂಜನಗೂಡು, ಶ್ರೀರಂಗಪಟ್ಟಣ, ಮೈಸೂರು ಸಾಂಸ್ಕೃತಿ ಪರಂಪರೆ ಹೊಂದಿದೆ ಪಟ್ಟಣಗಳು. ಆದರೆ ಕಾಂಗ್ರೆಸ್ ಇವನ್ನು ಅವಮಾನ ಮಾಡುತ್ತಲೇ ಬಂದಿದೆ. ಇದೀಗ ಭಜರಂಗಬಲಿಯನ್ನು ಅವಮಾನ ಮಾಡುತ್ತಿದೆ ಎಂದರು.

ಆಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ಸೇರಿದಂತೆ ಹಲವು ಮಂದಿರಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ. ಇದು ಕಾಂಗ್ರೆಸ್‌ಗೆ ಹಿಡಿಸಿಲ್ಲ. ಕೆಲ ದಿನಗಳ ಹಿಂದೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಬಂದಿದ್ದೆ. ಕರ್ನಾಟಕ ಶಕ್ತಿಯನ್ನು ವಿಶ್ವಕ್ಕೆ ಹೇಳಲು ಬಂದಿದ್ದೆ. ಇದನ್ನು ಕಾಂಗ್ರೆಸ್ ಅವಮಾನಿಸಿತ್ತು. ಕಾಂಗ್ರೆಸ್ ಲಿಂಗಾಯಿತ ಸಮುದಾಯವನ್ನು ಅವಮಾನಿಸಿತು. ಕಾಂಗ್ರೆಸ್ ತುಷ್ಟೀಕರಣದ ರಾಜನೀತಿ ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಲಾಭ ನೋಡಿಕೊಂಡು ರಾಜಕಾರಣ ಮಾಡುತ್ತದೆ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯ ಜನರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು. ಶಿವಮೊಗ್ಗದಲ್ಲಿ ಇವರ ಜೊತೆ ಮಾತನಾಡಿ ಇಲ್ಲಿಗೆ ಬಂದಿದ್ದೇನೆ. ಹಕ್ಕಿ ಪಿಕ್ಕಿ ಸಮುದಾಯ ಸೂಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.
 

Latest Videos
Follow Us:
Download App:
  • android
  • ios