Kodagu: ಅಮೆರಿಕದಲ್ಲಿರುವ ಮೂವರು ಮಕ್ಕಳಿಂದ ತಂದೆ ಅಪ್ಪಚ್ಚು ರಂಜನ್ ಪರ ನಿರಂತರ ಪ್ರಚಾರ

ಮಡಿಕೇರಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರ ಪರವಾಗಿ ಅಮೆರಿಕದಲ್ಲಿರುವ ಅವರ ಮೂವರು ಮಕ್ಕಳು ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. 

Karnataka assembly Election madikeri bjp candidate  Appachu Ranjan children campaign gow

ಕೊಡಗು (ಮೇ.5): ರಾಜ್ಯ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೇವಲ 4 ದಿನಗಳಷ್ಟೇ ಬಾಕಿ ಇವೆ. ಈ ನಡುವೆ ಮಡಿಕೇರಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರ ಪರವಾಗಿ ಅಮೆರಿಕದಲ್ಲಿರುವ ಅವರ ಮೂವರು ಮಕ್ಕಳು ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ವಿಕ್ರಮ್ ಪೂವಯ್ಯ ಸೇರಿದಂತೆ ಮೂವರು ಮಕ್ಕಳು ರಂಜನ್ ಪರವಾಗಿ ಮತಯಾಚಿಸುತ್ತಿದ್ದಾರೆ. ಸೋಮವಾರಪೇಟೆ, ಕುಶಾಲನಗರ ಮತ್ತು ಮಡಿಕೇರಿ ಸೇರಿದಂತೆ ಎಲ್ಲೆಡೆ ತೆರಳಿ ಮತಯಾಚಿಸುತ್ತಿದ್ದಾರೆ. ತಮ್ಮ ತಂದೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮತ್ತೊಮ್ಮೆ ವೋಟ್ ಹಾಕಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಪ್ರತೀ ಗ್ರಾಮ, ಪಟ್ಟಣಗಳಿಗೆ ತೆರಳುತ್ತಿರುವ ಅಪ್ಪಚ್ಚು ರಂಜನ್ ಅವರ ಮೂವರು ಮಕ್ಕಳು ಬಿಜೆಪಿಯ ಪ್ರಣಾಳಿಕೆ, ಮಾದರಿ ಬ್ಯಾಲೆಟ್ ಪೇಪರ್ ಗಳನ್ನು ಹಂಚಿ ಮತ ಯಾಚಿಸುತ್ತಿದ್ದಾರೆ. ಸೋಮವಾರಪೇಟೆಯಲ್ಲಿ ಪ್ರತೀ ಅಂಗಡಿ ಮುಂಗಟ್ಟುಗಳಿಗೆ ತಮ್ಮ ತಂದೆಯೊಂದಿಗೆ ತೆರಳಿ ಮತ ಯಾಚಿಸಿದ ವಿಕ್ರಮ್ ಪೂವಯ್ಯ ಮಾತನಾಡಿ ನಮ್ಮ ತಂದೆಯವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಅವರ ಪರವಾಗಿ ಕೆಲಸ ಮಾಡಬೇಕಾಗಿರುವು ನಮ್ಮ ಜವಾಬ್ದಾರಿ. ಹೀಗಾಗಿ ನಾವು ಒಂದು ತಿಂಗಳ ಕಾಲ ರಜೆ ಪಡೆದು ಬಂದು ಕೆಲಸ ಮಾಡುತ್ತಿದ್ದೇವೆ. ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಪ್ರಚಾರ ಮಾಡುತ್ತಿದ್ದಾರೆ.

ನಾವು 1994 ರಿಂದಲೂ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ಇನ್ನು ಕೊಡಗಿನಲ್ಲಿ ಪ್ರವಾಹ  ಬಂದು ಬೆಟ್ಟಗಳ ಕುಸಿತವಾದಾಗ ತಂದೆಯವರು ಸಾಕಷ್ಟು ಓಡಾಡಿ ಕೆಲಸ ಮಾಡಿದ್ದಾರೆ. ಸ್ವತಃ ಅವರೇ ಸ್ಥಳಕ್ಕೆ ಹೋಗಿ ರಕ್ಷಣೆಗಾಗಿ ಓಡಾಡಿದ್ದಾರೆ. ಕೋವಿಡ್ ಬಂದಾಗ ಸಾವಿರಾರು ಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ತಲುಪಿಸಿದ್ದಾರೆ. ಇಂತಹ ಜನಪರವಾದ ಶಾಸಕರನ್ನು ಜನರು ಬಿಟ್ಟುಕೊಡಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ.

ಬೆಂಗಳೂರು: EVM ಬಂದ ನಂತರ ಬಿಎಸ್‌ಪಿಗೆ ಸೋಲಾಯಿತು: ಮಾಯಾವತಿ!

ಹೀಗಾಗಿ ತಂದೆಯವರಿಗೆ ಜನರು ಮತ್ತೊಮ್ಮೆ ವೋಟ್ ನೀಡುತ್ತಾರೆ, ತಂದೆಯವರು ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದೇವೆ. ಪ್ರಚಾರ ಮಾಡಿರುವ ಎಲ್ಲಾ ಗ್ರಾಮಗಳಲ್ಲೂ ಒಳ್ಳೆಯ ಅಭಿಪ್ರಾಯವಿದೆ. ಜನರು ಮತ ಹಾಕುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ತಂದೆ ಗೆದ್ದೇ ಗೆಲ್ಲುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಆದರೆ ಮತದಾರರು ಕಡಿಮೆ ಇದ್ದರೂ ಕ್ಷೇತ್ರ ದೊಡ್ಡದು. ಹೀಗಾಗಿ ಕೆಲಸಗಳು ಇನ್ನೂ ಮಾಡಬೇಕಾಗಿದೆ.

Karnataka Assembly Election 2023: 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಗಲಿದ್ಯಾ?

ಈ ಬಾರಿ ಗೆದ್ದು ಆ ಕೆಲಸಗಳನ್ನು ಪೂರೈಸುತ್ತಾರೆ ಎನ್ನುವ ನಂಬಿಕೆ ನಮ್ಮದು ಎನ್ನುತ್ತಾರೆ ಅಪ್ಪಚ್ಚು ರಂಜನ್ ಅವರ ಹಿರಿಯ ಪುತ್ರ ವಿಕ್ರಮ್ ಪೂವಯ್ಯ. ಒಟ್ಟಿನಲ್ಲಿ ತಂದೆಯ ಗೆಲುವಿಗಾಗಿ ಸ್ವದೇಶಕ್ಕೆ ಆಗಮಿಸಿರುವ ಅಪ್ಪಚ್ಚು ರಂಜನ್ ಅವರ ಮೂವರು ಮಕ್ಕಳು ನಿತ್ಯ ಅವಿರತ ಪ್ರಚಾರ ಮಾಡುತ್ತಿದ್ದಾರೆ. ಮೇ ತಿಂಗಳ ಹದಿನೇಳರವರೆಗೂ ಜಿಲ್ಲೆಯಲ್ಲೇ ಇರುವ ಅಪ್ಪಚ್ಚು ರಂಜನ್ ಅವರ ಮಕ್ಕಳು ತಮ್ಮ ತಂದೆಯ ಗೆಲುವನ್ನು ಕಂಡು ಸಿಹಿ ತಿನ್ನುತ್ತಾರೋ ಇಲ್ಲ ಮತದಾರರು ಏನೋ ಉತ್ತರ ನೀಡುತ್ತಾರೋ ಎನ್ನುವುದಕ್ಕೆ ಇನ್ನು ಕೆಲವು ದಿನಗಳನ್ನು ಕಾಯಬೇಕಾಗಿದೆ. 

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Karnataka assembly Election madikeri bjp candidate  Appachu Ranjan children campaign gow

Latest Videos
Follow Us:
Download App:
  • android
  • ios