ಪ್ರತೀ ರಾಜ್ಯದ ಚುನಾವಣೆಯೂ ಮುಂಬರುವ ಚುನಾವಣೆ ಮೇಲೆ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರುವುದು ಸುಳ್ಳಲ್ಲ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಏಕ ಮಾತ್ರ ಬಿಜೆಪಿ ಅಧಿಕಾರವಿರೋ ಕರ್ನಾಟಕದ ವಿಧಾನಸಭೆ ಚುನಾವಣೆ ಪರಿಣಾಮ ಬೀರದೇ ಇರುತ್ತದೆಯೇ? 

ವರದಿ: ಪವನ್ ಲಕ್ಷ್ಮೀಕಾಂತ್, ಏಷ್ಯಾನೆಟ್ ಸುವರ್ಣ ನ್ಯೂಸ್

ರಾಜ್ಯ ವಿಧಾನಸಭೆಗೆ ದಿನಗಣನೆ ಶುರುವಾಗಿದೆ. ಮೇ 10 ರಂದು ರಾಜ್ಯದ ಜನರು ಮತದಾನ ಮಾಡುವ ಮೂಲಕ ಮುಂದಿನ ತಮ್ಮ ಐದು ವರ್ಷವನ್ನು ಯಾವ ಪಕ್ಷದ ಕೈಗೆ ನೀಡುತ್ತಾರೆ ಎಂಬ ಕುತೂಹಲ ಕಾಡಿದೆ. ಈ ನಡುವೆ ಕರ್ನಾಟಕ ಚುನಾವಣೆಯನ್ನ ಇಡೀ ದೇಶವೇ ಎದುರು ನೋಡುತ್ತಿದೆ. ಸದ್ಯ ಲೋಕಸಭಾ ಚುನಾವಣೆ ಗೆಲ್ಲುಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಹುಮುಖ್ಯ. 

ಕರ್ನಾಟಕದಿಂದ 2024ರ ಲೋಕಸಭಾ ಚುನಾವಣೆವರೆಗೂ ಎದುರಾಗುವ ರಾಜ್ಯ ಚುನಾವಣೆಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರಾ ಫೈಟ್ ಇದ್ದು, ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲುವುದನ್ನು ಎರಡೂ ಪಕ್ಷಗಳು ಪ್ರತಿಷ್ಠೆಯನ್ನಾಗಿ ಪರಿಗಣಿಸಿವೆ. ಹೀಗಾಗಿ ಕ್ವಾರ್ಟರ್‌ಫೈನಲ್ ಪಂದ್ಯವಾಗಿರುವ ಕರ್ನಾಟಕ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ಮೆಟ್ಟಿಲಾಗುವುದರಲ್ಲಿ ಎರಡು ಮಾತಿಲ್ಲ. 

2024ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕ ಚುನಾವಣೆ ಸೇರಿ ಬರೋಬ್ಬರಿ ಆರು ರಾಜ್ಯಗಳ ಚುನಾವಣೆ ನಡೆಯಲಿವೆ. ದ್ವಿತೀಯಾರ್ದದಲ್ಲಿ ರಾಜಸ್ಥಾನ, ಛತ್ತೀಸ್ಘಢ, ತೆಲಂಗಾಣ, ಮಧ್ಯಪ್ರದೇಶ, ಜಮ್ಮು & ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಲಿವೆ. ಈ ಐದು ರಾಜ್ಯಗಳಲ್ಲಿ 116 ಲೋಕಸಭಾ ಕ್ಷೇತ್ರಗಳು ಬರಲಿವೆ. ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ ಬಿಜೆಪಿ 25 ಒಂದು ಪಕ್ಷೇತರ ಸ್ಥಾನ ಸೇರಿ 26 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲವು ಸಾಧಿಸಿದೆ. ಮಧ್ಯ ಪ್ರದೇಶ 29 ಸ್ಥಾನಗಳ ಪೈಕಿ 28 ಬಿಜಪಿ ಗೆದ್ದಿದೆ. ಒಂದು ಸ್ಥಾನವನ್ನ ಕಾಂಗ್ರೆಸ್ ಗೆದ್ದಿದೆ. 

ರಾಜಸ್ಥಾನದಲ್ಲಿ 25 ಸ್ಥಾನಗಳ ಪೈಕಿ 24 ಸ್ಥಾನ ಬಿಜೆಪಿ ಗೆದ್ದಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ತೆಲಂಗಾಣದಲ್ಲಿ 17 ಸ್ಥಾನಗಳ ಪೈಕಿ ಕಾಂಗ್ರೆಸ್ ಮೂರು ಸ್ಥಾನ, ನಾಲ್ಕು ಸ್ಥಾನ ಬಿಜೆಪಿ, 10 ಸ್ಥಾನ ಟಿಆರ್ಎಸ್ ಗೆದ್ದಿದೆ. ಛತ್ತೀಸ್ಘಡದಲ್ಲಿ 11 ಸ್ಥಾನಗಳ ಪೈಕಿ 3 ಸ್ಥಾನ ಕಾಂಗ್ರೆಸ್, 9 ಸ್ಥಾನ ಬಿಜೆಪಿ ಗೆದ್ದಿದೆ. ಜಮ್ಮು ಮತ್ತು ಕಾಶ್ಮೀರಲ್ಲಿ 6 ಸ್ಥಾನಗಳ ಪೈಕಿ ಮೂರು ಬಿಜೆಪಿ, ಪಕ್ಷೇತರ ಮೂರು ಸ್ಥಾನ ಗೆದ್ದಿದೆ.

ಕಳೆದ ಈ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸೋತಿತ್ತು, ಆದರೂ ಲೋಕಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಈ ಐದು ರಾಜ್ಯಗಳ ಪೈಕಿ ಬರೋಬ್ಬರಿ 100 ಸ್ಥಾನಗಳನ್ನ ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಕಳೆದ ಬಾರಿ ರೀತಿಯ ಪರಿಸ್ಥಿತಿ ಬಿಜೆಪಿಗಿಲ್ಲ. ಕರ್ನಾಟಕದಲ್ಲಿ ಕೇಸರಿ ನಾಯಕರಿಗೆ ಹಿನ್ನೆಡೆಯಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಪ್ರಧಾನಿ ಮೋದಿ ಸಾಲು ಸಾಲು ಸಮಾವೇಶಗಳು, ರೋಡ್ ಶೋ ಮಾಡುತ್ತಿದ್ದಾರೆ. 

ಪ್ರಧಾನಿ ಮೋದಿ 9 ವರ್ಷದ ಆಡಳಿತಕ್ಕೆ ಸಿಗುತ್ತಾ ಫುಲ್ ಮಾರ್ಕ್ಸ್?
ಕರ್ನಾಟಕ ರಾಜ್ಯದ ಚುಕ್ಕಾಣಿ ಹಿಡಿಯಲು ಕಮಲ ನಾಯಕರು ಬೇವರು ಸುರಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ ನೋಡಿ ವೋಟ್ ಮಾಡುವುದಾಗಿ ಮತದಾರರು ಹೇಳಿತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಕೇಂದ್ರ ನಾಯಕತ್ವ ನೋಡಿ ಎಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ನಂತರ ನಾಯಕತ್ವ ಕೊರತೆ ಅನುಭವಿಸುತ್ತಿರುವ ಕೇಸರಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಕಮ್ಮಿ ಆಗಿಲ್ಲ ಎಂಬ ಮಾತು ಸತ್ಯವಾಗುತ್ತದೆ.

Modi Bengaluru Roadshow: ಮೋದಿ ರೋಡ್‌ ಶೋ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಸಿಗುತ್ತಾ ಜಯ ಬಲ..?
ಇನ್ನೂ ಕಾಂಗ್ರೆಸ್ ನಾಯಕತ್ವಕ್ಕೆ ಈ ಚುನಾವಣೆ ಸತ್ವ ಪರೀಕ್ಷೆಯನ್ನು ಒಡ್ಡಿದೆ. ಕಳೆದ ವರ್ಷದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಯಾತ್ರೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಸಾಕ್ಷಿಯಾಗಲಿದೆ. ಮೂರುವರೆ ಸಾವಿರ ಕಿಲೋ ಮೀಟರ್ ಪಾದಯಾತ್ರೆ 500 ಕಿಲೋ ಮೀಟರ್‌ಗೂ ಹೆಚ್ಚು ಪಾದಾಯಾತ್ರೆ ಮಾಡಿದ್ರು. ಅಧಿಕಾರ ಹಿಡಿಯುತ್ತೇವೆ ಎಂದು ಕನಸು ಕಾಣುತ್ತಿರುವ ರಾಜ್ಯ ಕಾಂಗ್ರೆಸ್‌ಗೆ ಕೇಂದ್ರ ನಾಯಕತ್ವಕ್ಕೆ ನಿಜವಾದ ಅಸಲಿ ಮುಖ ತಿಳಿಯಲಿದೆ. ಜೋಡೋ ಯಾತ್ರೆ ಜೊತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಾಲು ಸಾಲು ಪಾದಯಾತ್ರೆಗಳಿಗೂ ಬಲ ಸಿಕ್ಕಂತಾಗುತ್ತದೆ.

ಬೆಂಗಳೂರಿನಲ್ಲಿ ಮೋದಿ ರೋಡ್ ಶೋ; ನಾಳೆ ಈ ಮಾರ್ಗ ಬಂದ್,ಪರ್ಯಾಯ ರಸ್ತೆ ಬಳಸಲು

ಅಲ್ಲದೇ ಅತಂತ್ರ ಫಲಿತಾಂಶ ಬಂದು ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಕರುನಾಡಿನ ಜನರು ಪ್ರದೇಶಿಕ ಪಕ್ಷದ ಮೊರೆ ಹೋಗುತ್ತಿದ್ದಾರೆ ಎಂಬ ಸಂದೇಶವೂ ದೇಶಕ್ಕೆ ತಿಳಿಯಲಿದೆ. ಒಟ್ಟಾರೆ ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯೂ ಮೂರು ರಾಜಕೀಯ ಪಕ್ಷಗಳಿಗೂ ಮುಂದಿನ ಭವಿಷ್ಯ ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.