ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಆದರೆ. ಈ ಬಾರಿ ಚುನಾವಣೆಗೆ ಹಣ ಹಂಚಲು ಅಭ್ಯರ್ಥಿಗಳು ಭಿನ್ನ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಮಾಲೂರಿನ ಪಕ್ಷೇತರ ಅಭ್ಯರ್ಥಿಯ ಮಾಡಿರುವ ಪ್ಲ್ಯಾನ್‌ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ. 

ಬೆಂಗಳೂರು (ಮೇ.16): ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. 2615 ಮಂದಿ ಅಭ್ಯರ್ಥಿಗಳ ಪೈಕಿ 224 ಮಂದಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹಾಗಂತ ಉಳಿದ ಅಭ್ಯರ್ಥಿಗಳು ಚುನಾವಣೆ ಗೆಲ್ಲೋಕೆ ಮಾಡದೇ ಇರುವ ಪ್ರಯತ್ನಗಳೇ ಇಲ್ಲ. ಅದರಲ್ಲೂ ಪ್ರತಿ ಚುನಾವಣೆಯಂತೆ ಈ ಬಾರಿಯೂ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸಿದ್ದಾರೆ. ಅದರಲ್ಲೂ ಗಾಂಧಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚುನಾವಣೆಯಲ್ಲಿ ಹಣ ಹಂಚೋಕೆ ಮಾಡಿದ ಪ್ಲ್ಯಾನ್‌ ನೋಡಿದ್ರೆ ಅಚ್ಚರಿಯಾಗೋದು ಖಂಡಿತಾ. ನೋಟುಗಳನ್ನು ಕೋಡ್‌ವರ್ಡ್‌ ಆಗಿ ಬಳಸಿಕೊಂಡು ಈ ಅಭ್ಯರ್ಥಿ ಹಣ ಹಂಚಿಕೆ ಮಾಡುತ್ತಿದ್ದ ಎನ್ನಲಾಗಿದೆ. ಇದು ಗೊತ್ತಾದ ಬೆನ್ನಲ್ಲಿಯೇ ಪೊಲೀಸರು ಅವರ ವಿರುದ್ದ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ನೋಟುಗಳನ್ನೇ ಕೋಡ್ ವರ್ಡ್‌ನ್ನಾಗಿ ಬಳಸಿಕೊಂಡು ನೋಟನ್ನು ಕೆಲ ಮತದಾರರು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಹಣದ ಜೊತೆ ದೇವರ ಫೊಟೋ ಇಟ್ಟೂ ಹಣ ಹಂಚಿಕೆ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಕೇಳಿದ್ದೇವೆ. ಆದರೆ, ಇಲ್ಲಿ ಹಣ ಹಂಚಿಕೆ ವಿಧಾನವೇ ಡಿಫರೆಂಟ್‌ ಆಗಿದೆ. ಇಲ್ಲಿ ದುಡ್ಡು ಬೇಕು ಅಂದರೆ ದುಡ್ಡನ್ನೇ ತೋರಿಸಬೇಕು. ಸಣ್ಣ ಮೊತ್ತ ತೋರಿಸಿದರೆ ಸಾಕು ದೊಡ್ಡ ನೋಟು ನಿಮಗೆ ಸಿಗುತ್ತಿತ್ತು.

ದುಡ್ಡು ಹಂಚಲು ದುಡ್ಡನ್ನೇ ಕೋಡ್ ವರ್ಡ್ ಅನ್ನಾಗಿ ಬಳಸುತ್ತಿದ್ದ ಅಭ್ಯರ್ಥಿಯ ಪರ ಕಾರ್ಯಕರ್ತರು. ಕಬ್ಬನ್ ಪೇಟೆಯಲ್ಲಿ ದುಡ್ಡು ಹಂಚುವ ವಿಧಾನವೇ ಬಹಳ ಡಿಫರೆಂಟ್‌ ಆಗಿತ್ತು. 20 ರೂಪಾಯಿ ತೋರಿಸಿರೆ 2000 ರೂಪಾಯಿ ಹಣ ಸಿಗುತ್ತಿತ್ತು. ಬೆಳಗ್ಗೆ 20 ರೂಪಾಯಿ ಹಂಚಿದರೆ, ಸಂಜೆ 2000 ರೂಪಾಯಿ ಹಂಚುತ್ತಿದ್ದರು. 20 ರೂಪಾಯಿಯನ್ನು ತೋರಿಸಿದರೆ, ಸಂಜೆ 2000 ಹಣ ಕೊಡುತ್ತಿದ್ದರು.

ವೋಟರ್‌ ಐಡಿ ಇದ್ದವರಿಗೆ ಕಾರ್ಯಕರ್ತರು 20 ರೂಪಾಯಿ ಹಂಚುತ್ತಿದ್ದರು. ಅದೇ 20 ರೂಪಾಯಿಯನ್ನ ತಾವ ಸೂಚಿಸಿದ ವ್ಯಕ್ತಿಗೆ ಕೊಟ್ಟರೆ 2000 ಸಿಗುತ್ತೆ ಎಂದು ಮತದಾರರಿಗೆ ಆಮಿಷ ನೀಡಲಾಗಿತ್ತು. ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ಕಡೆಯವರಿಂದ ಈ ಹಣ ಹಂಚಿಕೆ ನಡೆದಿತ್ತು ಎನ್ನಲಾಗಿದೆ.

ಕಲಬುರಗಿ ದಕ್ಷಿಣ ಕ್ಷೇತ್ರ: ಮತದಾರರಿಗೆ ಹಣ ಹಂಚಿಕೆ ಪ್ರಕರಣ-ಪೋಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿಯಿಂದಲೇ ದೂರು

ವಿಧಾನಸಭಾ ಪಕ್ಚೇತರ ಅಭ್ಯರ್ಥಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ,ಚಂದ್ರಶೇಖರ್ ,ವಸಂತ್ ಕುಮಾರ್ ಹಾಗೂ ವೆಂಕಟೇಶ್ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅವರಿಂದ 93NA110201, 93NA110202, 93NA110203, 93NA110204, 93NA110205 ಹಾಗೂ 93NA110206 ನಂಬರಿನ 20 ರೂಪಾಯಿ ನೋಟುಗಳ ವಶಪಡಿಸಿಕೊಳ್ಳಲಾಗಿದೆ. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಹಣ ಹಂಚಿವೆ: ವಾಟಾಳ್‌ ನಾಗರಾಜ್‌