Asianet Suvarna News Asianet Suvarna News

Breaking: ಬಿಜೆಪಿ 3ನೇ ಪಟ್ಟಿ ಬಿಡುಗಡೆ: ಹಿರಿಯ ತಲೆಗಳಿಗೆ ಶಾಕ್‌

ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ 3ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ಕೊಕ್‌ ಕೊಡಲಾಗಿದೆ.

karnataka assembly election 2023 BJP third list released sat
Author
First Published Apr 17, 2023, 6:23 PM IST

ಬೆಂಗಳೂರು (ಏ.17): ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ 3ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ಕೊಕ್‌ ಕೊಡಲಾಗಿದೆ.

  1. ಹುಬ್ಬಳ್ಳಿ ಧಾರವಾಡ ಸೆಂಟ್ರಲ್- ಮಹೇಶ್‌ ಟೆಂಗಿನಕಾಯಿ 
  2. ಹಗರಿ ಬೊಮ್ಮನಹಳ್ಳಿ- ಬಿ. ರಾಮಣ್ಣ
  3. ಗೋವಿಂದರಾಜನಗರ - ಉಮೇಶ್‌ ಶೆಟ್ಟಿ
  4. ಮಹದೇವಪುರ - ಮಂಜುಳಾ ಅರವಿಂದ್‌ ಲಿಂಬಾವಳಿ
  5. ಸೇಡಂ - ರಾಜಕುಮಾರ ಪಾಟೀಲ್ ಹಾಲಿ ಶಾಸಕ
  6. ಕೊಪ್ಪಳ - ಮಂಜುಳಾ ಅಮರೇಶ್
  7. ಹೆಬ್ಬಾಳ - ಕಟ್ಟಾ ಪುತ್ರ ಜಗದೀಶ್
  8. ಕೃಷ್ಣ ರಾಜ - ಶ್ರೀವತ್ಸ
  9. ರೋಣ- ಕಳಕಪ್ಪ ಬಂಡಿ ಹಾಲಿ ಶಾಸಕ
  10. ನಾಗಠಾಣ- ಸಂಜೀವ ಐಹೊಳೆ

Breaking: ಬಿಜೆಪಿಯ 2ನೇ ಪಟ್ಟಿ ರಿಲೀಸ್‌, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ!

ಎರಡು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಬಾಕಿ: ಶಿವಮೊಗ್ಗ ನಗರ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ಸೇರಿ ಎರಡು ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಅನ್ನು ಘೋಷಣೆ ಮಾಡದೇ ಬಿಜೆಪಿ ಬಾಕಿ ಉಳಿಸಿಕೊಂಡಿದೆ. ಶಿವಮೊಗ್ಗ ನಗರದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್‌ ಈಶ್ವರಪ್ಪ ಅವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯವಿದ್ದು, ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬುದು ಇನ್ನೂ ಗೊಂದಲದ ಗೂಡಾಗಿದೆ. ಮತ್ತೊಂದೆಡೆ ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಯನ್ನು ವಿಳಂಬ ಮಾಡಲಾಗುತ್ತಿದೆ.

ಯಾವ ಘಟಾನುಘಟಿಗಳಿಗೆ ಟಿಕೆಟ್‌ ಮಿಸ್: ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡದೇ ಮಂಜುಳಾ ಅಮರೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್‌ ಅವರಿಗೆ ಟಿಕೆಟ್‌ ನೀಡದೇ ಶ್ರೀವತ್ಸ ಅವರಿಗೆ ಟಿಕೆಟ್‌ ಕೊಡಲಾಗಿದೆ. ಈ ಮೂಲಕ ಬ್ರಾಹ್ಮಣ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ರಾಮದಾಸ್‌ಗೆ ಟಿಕೆಟ್‌ ನಿಡದೇ ಬಿಜೆಪಿ ಕೊಕ್‌ ನೀಡಿದೆ. ಇನ್ನು ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ವಿರುದ್ಧ ಬಿಜೆಪಿಯಿಂದ ಮಹೇಶ್‌ ಟೆಂಗಿನಕಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 189 ಮಂದಿಗೆ ಟಿಕೆಟ್ ಘೋಷಣೆ, 52 ಹೊಸ ಮುಖ!

ವಿ. ಸೋಮಣ್ಣ ಶಿಷ್ಯ ಉಮೇಶ್‌ ಶೆಟ್ಟಿಗೆ ಟಿಕೆಟ್‌: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಮದ ವಿ. ಸೋಮಣ್ಣ ಅವರ ಶಿಷ್ಯನಾದ ಮಾಜಿ ಕಾರ್ಪೋರೇಟರ್‌ ಉಮೇಶ್‌ ಶೆಟ್ಟಿ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇನ್ನು ಈಗಾಗಲೇ ಸಚಿವ ಸೋಮಣ್ಣ ಅವರಿಗೆ ಚಾಮರಾಜನಗರ ಹಾಗೂ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನಿಡಲಾಗಿದೆ. ಇನ್ನು ಸೋಮಣ್ಣ ಅವರ ಪುತ್ರ ಅರುಣ್‌ ಸೋಮಣ್ಣ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ಕಾಯಲಾಗುತ್ತಿತ್ತು. ಆದರೆ, ಈಗ ಟಿಕೆಟ್‌ ಅನ್ನು ಉಮೇಶ್‌ ಶೆಟ್ಟಿಗೆ ಕೊಡಲಾಗಿದೆ. ಮತ್ತೊಂದೆಡೆ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಅರವಿಂದ ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಪತ್ನಿಗೆ ಟಿಕೆಟ್‌ ನಿಡಲಾಗಿದೆ.

 

Follow Us:
Download App:
  • android
  • ios