ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ಕೇಂದ್ರ ಗೃಹ ಸಚಿವ ಹಾಗೂ ರಾಜಕೀಯ ಚಾಣಕ್ಯ ಅಮಿತ್‌ ಶಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಪಕ್ಷ ಬಿಟ್ಟುಹೋದ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರ ಬಗ್ಗೆಯೂ ಮಾತನಾಡಿದ್ದಾರೆ. 

ಬೆಂಗಳೂರು (ಏ.30): ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿಯೇ ಬೀಡುಬಿಟ್ಟಿರುವ ರಾಜಕೀಯ ಚಾಣಕ್ಯ ಅಮಿತ್‌ ಶಾ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ಅಜಿತ್‌ ಹನುಮಕ್ಕನವರ್‌ಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಹಲವು ವಿಚಾರಗಳ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದಾರೆ. ಮೇ.13 ರಂದು ರಾಜ್ಯದಲ್ಲಿ ಬಿಜೆಪಿ ಜಯದ ನಗೆ ಬೀರೋದು ಖಚಿತ ಎಂದಿರುವ ಅವರು ಇತ್ತೀಚೆಗೆ ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ್‌ ಸವದಿ ಅವರ ಬಗ್ಗೆ ಮಾತನಾಡಿದರು. 'ಇಬ್ಬರು ಕೂಡ ಚುನಾವಣೆಯಲ್ಲಿ 30 ಸಾವಿರ ಅಂತರದಲ್ಲಿ ಸೋಲ್ತಾರೆ.. ಕೌಂಟಿಂಗ್ ಆದ್ಮೇಲೆ ನನಗೆ ಕಾಲ್ ಮಾಡಿ.. ನನಗೆ ಹುಬ್ಬಳ್ಳಿಯ ಸಂಘಟನೆ 1990ರಿಂದಲೂ ಗೊತ್ತು. ಹುಬ್ಬಳ್ಳಿಯಲ್ಲಿ ವ್ಯಕ್ತಿಗೆ ವೋಟ್ ಕೊಡೋದಿಲ್ಲ.. ಪಾರ್ಟಿಗೆ ವೋಟ್ ಕೊಡ್ತಾರೆ' ಎಂದು ಹೇಳಿದರು.

ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಶೆಟ್ಟರ್ ಸೋಲ್ತಾರೆ ಗೆಲ್ತಾರೆ ಪ್ರಶ್ನೆಯಲ್ಲ? ಉಳಿದ ಕ್ಷೇತ್ರದ ಮತದಾರರ ಮೇಲೆ ಯಾವ ಪರಿಣಾಮ ಬೀರಲಿದೆ ಅನ್ನೋದೇ ಪ್ರಶ್ನೆ ಎಂದಾಗ, 'ಇಲ್ಲ ಆ ತರ ಏನಾಗಲ್ಲ.. ಮತದಾರರ ಮೇಲೆ ಯಾವ ಪ್ರಭಾವ ಆಗಲಿದೆ ಎಂದರೆ, ಆ ವ್ಯಕ್ತಿಯನ್ನ ಶಾಸಕನ್ನಾಗಿ ಮಾಡಿದ್ರು, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ರು, ಮುಖ್ಯಮಂತ್ರಿಯನ್ನಾಗಿ ಮಾಡಿದ್ರು, ವಿಪಕ್ಷ ನಾಯಕನನ್ನಾಗಿ ಮಾಡಿದ್ರು.. ಒಂದು ಸಲ ಟಿಕೆಟ್ ಕೊಡಲ್ಲ ಅಂದಿದ್ದಕ್ಕೆ ಐಡಿಯಾಲಜಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಕಾಂಗ್ರೆಸ್ ಜೊತೆ ಹೇಗೆ ಸಾಧ್ಯ. ಐಡಿಯಾಲಜಿ ಇರುವ ಕಾರ್ಯಕರ್ತ ಆಗಿದ್ರೆ.. ಸ್ವಾರ್ಥ ಇಲ್ಲ ಅಂದ್ರೆ..ಆದ್ರೆ ಇವ್ರು ಸ್ವಾರ್ಥಕ್ಕಾಗಿ ಬಿಟ್ಟು ಹೋಗಿದ್ದಾರೆ.. ತಮ್ಮನ್ನ ತಾವು ಏನು ಅಂತ ತೋರಿಸಿದ್ದಾರೆ. ಜನ ಇದನ್ನೆಲ್ಲಾ ನೋಡ್ತಾರೆ, ಅವರು ಪತ್ರಕರ್ತರ ತರ ನೋಡೋದಿಲ್ಲ... ಜನ ವ್ಯಕ್ತಿಯ ನಡೆಯನ್ನ ನೋಡ್ತಾರೆ' ಎಂದರು ಹೇಳಿದರು.
ಜಗದೀಶ್‌ ಶೆಟ್ಟರ್‌ಗಾಗಲಿ, ಲಕ್ಷ್ಮಣ್‌ ಸವದಿ ವಿಚಾರದಲ್ಲಿ ಎಲ್ಲಿ ಸಮಸ್ಯೆ ಆಯಿತು, ವಿಷಯ ತಿಳಿಸುವಾಗ ಸಮಸ್ಯೆ ಆಯಿತೇ ಎನ್ನುವ ಪ್ರಶ್ನೆಗೆ, ಎಲ್ಲಿಯೂ ಸಮಸ್ಯೆ ಆಗಲಿಲ್ಲ. ಪಾರ್ಟಿಯಿಂದ ಈ ಬಾರಿ ಚುನಾವಣೆಗೆ ನಿಲ್ಲಬೇಡಿಸ ಎಂದು ಹೇಳಲಾಗಿತ್ತು. ಅದು ಪಾರ್ಟಿಯ ನಿರ್ಧಾರವಾಗಿತ್ತು ಎಂದರು.



ಶೆಟ್ಟರ್‌ಗಾಗಲಿ, ಸವದಿಗಾಗಲಿ ನೀವೇ ಯಾಕೆ ಹೇಳಲಿಲ್ಲ ಎನ್ನುವ ಪ್ರಶ್ನೆಗೆ, 'ನಾನೇ ಸ್ವತಃ ಅವರಿಗೆ ಹೇಳಿದ್ದೆ. ಈ ಬಾರಿ ಸ್ಪರ್ಧೆ ಬೇಡ ಯಡಿಯೂರಪ್ಪ ಅವರ ರೀತಿಯಲ್ಲಿ ಪಾರ್ಟಿಯ ಕೆಲಸ ಮಾಡಿ ಎಂದಿದ್ದೆ. ಯಾವುದೇ ಸಮಸ್ಯೆ ಆಗಿರಲಿಲ್ಲ. ಸಮಸ್ಯೆ ಅವರೇ ಮಾಡಿಕೊಂಡಿದ್ದು, ಸಮಸ್ಯೆಯ ಪ್ರಶ್ನೆ ಎಲ್ಲಿದೆ. ತುಂಬಾ ಜನರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಲಿ ಯಾರಿಗೂ ಯಾವುದೇ ಸಮಸ್ಯೆ ಆಗಲಿಲ್ಲ ಎಂದರು.

ಅಮಿತ್‌ ಶಾ ಮಂಗಳೂರು ರೋಡ್‌ ಶೋ ಮುಂದೂಡಿಕೆ; 30ರಂದು ಪುತ್ತೂರು, ಬೈಂದೂರಲ್ಲಿ ಯೋಗಿ ಅಬ್ಬರ!

ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ ತುಂಬಾ ತಾಕತ್ತು ಬಂದಿದೆ ಎಂದು ಹೇಳುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ, ಅದೇ ಅವರ ದಿವಾಳಿತನವನ್ನ ತೋರಿಸುತ್ತದೆ. ಕಾಂಗ್ರೆಸ್‌ ಬಳಿ ನಾಯಕರಾಗಲಿ, ನೇತೃತ್ವವಾಗಲಿ ಇಲ್ಲ. ಬಿಜೆಪಿಯಿಂದ ಯಾರಾದ್ರೂ ಬಂದ್ರೆ ಗೆಲ್ಲುತ್ತಾರೆ ಅಂದುಕೊಂಡಿದ್ದಾರೆ.. ಅವರಿಗೆ ಮೊದಲೇ ಗೊತ್ತಿತ್ತು ನಮ್ಮ ನೇತೃತ್ವದಲ್ಲಿ ಗೆಲ್ಲೋದಿಲ್ಲ ಅಂತಾ. ಶೆಟ್ಟರ್, ಸವದಿ ಬಂದ್ಮೇಲೆ.. ಈಗ ಗೆಲ್ಲಬಹುದು ಅಂದುಕೊಂಡಿದ್ದಾರೆ. ಇದರ ಅರ್ಥ ಅವರು ಚುನಾವಣೆ ಗೆಲ್ಲಲ್ಲ ಅಂತ ಎಂದು ಅಮಿತ್‌ ಶಾ ಹೇಳಿದ್ದಾರೆ.

India Gate: ರಾಜ್ಯ ಬಿಜೆಪಿಗರ ಹೊರಗಿಟ್ಟು ಶಾ ಸಭೆ ನಡೆಸಿದ್ದೇಕೆ? ಸುಮಲತಾಗೆ ನಡ್ಡಾ ಕೊಟ್ಟ ಭರವಸೆ ಏನು?

ಲಕ್ಷ್ಮಣ್ ಸವದಿ ಎಂಎಲ್ಎ ಇದ್ದಾರೆ.. ಶೆಟ್ಟರ್ ಕೇವಲ ಎಂಎಲ್ಎ ಆಗಿ ಏನ್ಮಾಡ್ತಿದ್ರು. ಅವರೇ ಹೇಳಿದ್ದಾರೆ ಬೊಮ್ಮಾಯಿ ಕೈ ಕೆಳಗೆ ಮಿನಿಸ್ಟರ್ ಆಗೋದಿಲ್ಲ ಅಂತಾ.. ಹೀಗಾಗಿ ಪಾರ್ಟಿ ನಿರ್ಧಾರ ತಗೊಂಡಿದೆ. ಸವದಿ ಇನ್ನೂ 5 ವರ್ಷ ಎಂಎಲ್ಸಿ ಇದ್ದರು ಎಂದು ಅಮಿತ್‌ ಶಾ ತಿಳಿಸಿದ್ದಾರೆ.