ಕರ್ನಾಟಕ ಚುನಾವಣಾ ದಿನಾಂಕ ಘೋಷಣೆಯಾದ ದಿನವೇ ಕೆಲ ಎಜೆನ್ಸಿಗಳು ನಡೆಸಿದ ಚುನಾವಣಾ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ಸಮೀಕ್ಷೆಯಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದೆ. ಕರ್ನಾಟಕ ಚುನಾವಣೆ ಕುರಿತು ಎಬಿಪಿ ಸಿವೋಟರ್ ಸಮೀಕ್ಷಾ ವರದಿ ವಿವರ ಇಲ್ಲಿವೆ.

ಬೆಂಗಳೂರು(ಮಾ.29): ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ. 10 ರಂದು ಚುನಾವಣೆ, ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಿದೆ. ಇತ್ತ ಹಲವು ಎಜೆನ್ಸಿಗಳು ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆ ಪ್ರಕಟಿಸಿದೆ. ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದಿದೆ. ಇನ್ನು ಬಿಜೆಪಿ ಸ್ಥಾನ 68 ರಿಂದ 80ಕ್ಕೆ ಕುಸಿಯಲಿದೆ ಎಂದಿದೆ. 

ಎಬಿಪಿ ಸಿವೋಟರ್ ಕರ್ನಾಟಕ ಚುನಾವಣಾ ಸಮೀಕ್ಷಾ ವರದಿ
ಕಾಂಗ್ರೆಸ್: 115 ರಿಂದ 127 ಸ್ಥಾನ
ಬಿಜೆಪಿ: 68 ರಿಂದ 80 ಸ್ಥಾನ
ಜೆಡಿಎಸ್: 23 ರಿಂದ 30 ಸ್ಥಾನ
ಇತರರು: 0 - 2
ಒಟ್ಟು: 224

ಅನರ್ಹ ಹೇಳಿಕೆ ನೀಡಿದ ಕೋಲಾರದಿಂದ ರಾಹುಲ್ ಗಾಂಧಿ ಕರ್ನಾಟಕ ಚುನಾವಣಾ ಪ್ರಚಾರ!

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ತಡೆ ಒಡ್ಡಿ ಗರಿಷ್ಠ ಸ್ಥಾನ ಕೈವಶ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ಲೆಕ್ಕಾಚಾರ ನಡೆಸುತ್ತಿದೆ. ಇದೀಗ ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಕೂಡ ಪ್ರಾಬಲ್ಯ ಮೆರೆಯಲಿದೆ ಎಂದಿದೆ. 

ಹಳೇ ಮೈಸೂರು ಭಾಗದಲ್ಲಿ ಸ್ಥಾನ
ಕಾಂಗ್ರೆಸ್: 24 ರಿಂದ 28
ಬಿಜೆಪಿ: 1 ರಿಂದ 5
ಜೆಡಿಎಸ್: 26 ರಿಂದ 27
ಇತರರು: 0- 1
ಒಟ್ಟು: 55

ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಎರ್ಪಡಲಿದೆ ಎಂದಿದೆ. ಆದರೆ ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ವರದಿಗಳು ಹೇಳುತ್ತಿದೆ.

ಚುನಾವಣಾ ಆಯೋಗದಿಂದ ಮತ್ತೊಂದು ಘೋಷಣೆ, 4 ರಾಜ್ಯಗಳ ಉಪಚುನಾವಣೆ ದಿನಾಂಕ ಪ್ರಕಟ!

ಬೆಂಗಳೂರು ನಗರದಲ್ಲಿನ ಸಮೀಕ್ಷಾ ವರದಿ
ಕಾಂಗ್ರೆಸ್: 15 ರಿಂದ 19 ಸ್ಥಾನ
ಬಿಜೆಪಿ: 11 ರಿಂದ 15 ಸ್ಥಾನ 
ಜೆಡಿಎಸ್: 1 ರಿಂದ 3
ಇತರರು: 0-1
ಒಟ್ಟು: 31

ಕರಾವಳಿ ಕರ್ನಾಟಕದಲ್ಲಿನ ಸಮೀಕ್ಷಾ ವರದಿ
ಕಾಂಗ್ರೆಸ್: 8 ರಿಂದ 12 ಸ್ಥಾನ
ಬಿಜೆಪಿ: 9 ರಿಂದ 13 ಸ್ಥಾನ
ಜೆಡಿಎಸ್: 0-1
ಇತರರು: 0 -1

ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಜಯಭೇರಿ ಸೂಚನೆಯನ್ನು ಎಬಿಪಿ ಸಿವೋಟರ್ ಸಮೀಕ್ಷೆ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಶೇಕಡಾ 43 ವೋಟ್ ಶೇರ್ ಪಡೆಯಲಿದೆ ಎಂದಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 25 ರಿಂದ 29 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಬಿಜೆಪಿ 21 ರಿಂದ 25 ಸ್ಥಾನ ಗೆಲ್ಲಲಿದೆ ಎಂದಿದೆ. ಲಿಂಗಾಯಿತ ಸಮುದಾಯದ ಪ್ರಾಬಲ್ಯದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಅನ್ನೋ ಸೂಚನೆಯನ್ನು ಸಮೀಕ್ಷಾ ವರದಿ ನೀಡಿದೆ. 

ಹೈದರಾಬಾದ್ ಕರ್ನಾಟಕದಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಕಾಂಗ್ರೆಸ್ ಶೇಕಡಾ 44 ರಷ್ಟು ವೋಟ್ ಶೇರ್ ಪಡೆದರೆ ಬಿಜೆಪಿ ಶೇಕಡಾ 37. ಇನ್ನು ಸ್ಥಾನಗಳ ಪೈಕಿ ಕಾಂಗ್ರೆಸ್ 19 ರಿಂದ 23 ಸ್ಥಾನ ಗೆಲ್ಲಲಿದೆ ಎಂದರೆ, ಬಿಜೆಪಿ 8 ರಿಂದ 12 ಕ್ಕೆ ಕುಸಿಯಲಿದೆ ಎಂದಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.