ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 490 ಕೊಲೆ 600 ರೈತರ ಆತ್ಮಹತ್ಯೆಗಳಾಗಿವೆ; ಪ್ರಹ್ಲಾದ್ ಜೋಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಬರೋಬ್ಬರಿ 490 ಕೊಲೆಗಳು ನಡೆದಿವೆ. ಜೊತೆಗೆ, 600ಕ್ಕೂ ಅಧಿಕ ರೈತರ ಆತ್ಮಹತ್ಯೆಗಳಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

Karnataka 490 murders and 600 farmers died after Congress came to power says Pralhad Joshi sat

ಹುಬ್ಬಳ್ಳಿ (ಮೇ 19): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಬರೋಬ್ಬರಿ 490 ಕೊಲೆಗಳು ನಡೆದಿವೆ. ಜೊತೆಗೆ, 600ಕ್ಕೂ ಅಧಿಕ ರೈತರ ಆತ್ಮಹತ್ಯೆಗಳಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

ಹುಬ್ಬಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ಭೀಕರವಾಗಿ ಕೊಲೆಯಾದ ಅಂಜಲಿ ಮನೆಗೆ ಭೇಟಿ ನೀಡಿದ‌ ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಅವರು, ನಾನು ಬಿಹಾರದಿಂದ‌ ನೇರವಾಗಿ ಅಂಜಲಿ‌ ಅವರ ಮನೆಗೆ ಭೇಟಿ ನೀಡಿದ್ದೇನೆ. ಅಂಜಲಿಯ ಅಜ್ಜಿ ‌ಸಹೋದರಿಯರು‌ ಹೇಳಿದ ಮಾತು ಕೇಳಿದ್ರೆ ಭಯ ಹುಟ್ಟುತ್ತದೆ. ಈ ಹಿಂದೆಯೂ ಆರೋಪಿ ಬಗ್ಗೆ ದೂರು ಕೇಳಿಬಂದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು‌ ಅವರ ಬಗ್ಗೆಯೂ‌ ತನಿಖೆಯಾಗಬೇಕು. ನೇಹಾ ಹತ್ಯೆಯಾದಾಗ ಬಹುದೊಡ್ಡ ಜನಾಂದೋಲನವಾಯಿತು. ಆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ‌ ಕೃತ್ಯ ನಡೆಸುವವರಿಗೆ‌ ಪ್ರೋತ್ಸಾಹ ನೀಡಿದಂತಾಯಿತು. ಸಿಎಂ‌ ಸಿದ್ದರಾಂಯ್ಯನವರು ಹೊಣೆಗೇಡಿತನದ ಹೇಳಿಕೆ‌‌ ನೀಡಿದ್ದರ ಪರಿಣಾಮ‌ ಈ‌ ಘಟನೆಯಾಗಿದೆ ಎಂದು ಟೀಕೆ ಮಾಡಿದರು.

RCB ಹುಡುಗಿಯರನ್ನು ಗೇಲಿ ಮಾಡಿದ ಸಿಎಸ್‌ಕೆ ಫ್ಯಾನ್ಸ್; ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಆಕ್ರೋಶ

ನಮ್ಮ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 490 ಕೊಲೆ ಹಾಗೂ 600 ರೈತರ ಆತ್ಮಹತ್ಯೆಗಳಾಗಿವೆ. ಇದನ್ನ ಪ್ರಶ್ನೆ ಮಾಡಿದರೆ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳಾಗಿವೆ ಅಂತಾ  ಹುಡುಕಲು ಅಧಿಕಾರಿಗಳನ್ನು ನೇಮಿಸುತ್ತಾರೆ. ಇವರೆಲ್ಲರೂ ಅಧಿಕಾರಿಗಳ ವರ್ಗಾವಣೆಗೆ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ‌ ಅಫೀಮು‌ ಚಟುವಟಿಕೆಗಳಿಗೆ‌ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು‌ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ‌ ಸರ್ಕಾರದಲ್ಲಿ‌‌ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚಾಗುತ್ತಿದ್ದು,‌ ಅಭಿವೃದ್ದಿಯು ಸಮಾಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಾರ್ಪೆಂಟರ್; ಮಹಡಿ ಜಿಗಿದು ಮಂಡೆ ಒಡೆದುಕೊಂಡ!

ರಾಜ್ಯದಲ್ಲಿ ಅನೇಕ‌ ಬಡ‌ಜನರು ತಮ್ಮ‌ ಮಕ್ಕಳನ್ನ ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಗಂಭೀರ ಘಟನೆ ನಡೆದಾಗ ಯಾರೋ ಒಬ್ಬ ಅಧಿಕಾರಿ‌ಯನ್ನು ಸಸ್ಪೆಂಡ್ ಮಾಡಿ‌ ಕೈತೊಳೆದುಕೊಳ್ಳಬಾರದು. ಇಂತಹ ಘಟನೆಗಳಿಂದ ಜನರು ಭಯಗೊಂಡದ್ದಾರೆ. ಜನರೇ ಬಂದು‌ ಹೋರಾಟ ಮಾಡುವ ಪರಿಸ್ಥಿತಿಯನ್ನ‌ ಸರ್ಕಾರ ತಂದುಕೊಳ್ಳಬಾರದು. ರಾಜ್ಯದಲ್ಲಿ ಮೊದಲು ಡ್ರಗ್ಸ್, ಗಾಂಜಾ ಅಫೀಮು‌ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ‌ ಪ್ರಕರಣದ ಸಂಪೂರ್ಣ ತನಿಖೆ‌ಗೆ ಫಾಸ್ಟ್ ಟ್ರ್ಯಾಕ್‌ ಕೋರ್ಟ್ ತೆರೆಯಬೇಕು. ಈ‌ಘಟನೆಗಳಿಗೆ ಸರ್ಕಾರ ಹಾಗೂ‌ ಗೃಹ‌ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios