ರಾಯಚೂರು, (ಏ.11): ಕಣ್ಣೇ ಅಧಿರಿಂದಿ ಫೈಟ್ ಚೆಧಿರಿಂದಿ ಕಾಲೇ ನಿಲವದು ಪಿಲಗ; ನಿನ್ನಟಿಕೆಲ್ಲಿ ಗಮ್ಮತಿಗುಂದಿ ಗುಂಡೆಲ ಲೊಲ್ಲಿ ಸಮ್ಮಗ ಉಂದಿ..... ತೆಲುಗು ರಾಬರ್ಟ್ ಚಿತ್ರದ ಈ ಸಾಂಗ್ ಸಖತ್ ಹಿಟ್ ಆಗಿದೆ.

ಸಾಂಗ್ ಮೂಲಕ ತೆಲುಗು ಗಾಯಕಿ ಮಂಗ್ಲಿ ಯುವಜನತೆಯ ಎದೆಬಡಿತ ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲದೇ ಈ ಹಾಡಿನ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದು, ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ.

ರಾಬರ್ಟ್ ತೆಲುಗು ಸಾಂಗ್ ವೈರಲ್: ಹಾಡಿದ ಮಂಗ್ಲಿಇವರೇ

ಇದೀಗ ವಿಷ್ಯಾ ಏನಪ್ಪಾ ಅಂದ್ರೆ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.

ಹೌದು...ಇದೇ  ಏ. 13ರಂದು ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮಂಗ್ಲಿ ಅವರು ಪ್ರಚಾರ ನಡೆಸಲಿದ್ದಾರೆ. 

ಮಂಗ್ಲಿ ಇತ್ತೀಚಿಗೆ ತೆಲುಗು ಅವತರಣಿಕೆಯ ರಾಬರ್ಟ್ ಸಿನಿಮಾದಲ್ಲಿ ಹಾಡಿದ ಕಣ್ಣೇ ಅದಿರಿಂದಿ ಹಾಡು ಕರ್ನಾಟಕದಲ್ಲೂ ಸಿಕ್ಕಪಟ್ಟೆ ಫೇಮಸ್ ಆಗಿತ್ತು.  ಈಗ ಮಂಗ್ಲಿ ಫೆಮಸ್ ಬಳಸಿಕೊಂಡಿರುವ ಬಿಜೆಪಿ,  ಮಸ್ಕಿ ಉಪಚುನಾವಣೆಯಲ್ಲಿ ಮಂಗ್ಲಿಯವರ ಮೂಲಕ ಮತ ಸೆಳೆಯಲು ಪ್ಲಾನ್ ಮಾಡಿದೆ.