Asianet Suvarna News Asianet Suvarna News

ಮೋದಿ ನಿಂದಕರಿಗೆ ಕನ್ನಡಿಗರು ಮತ ಹಾಕಲ್ಲ: ರಾಜೀವ್‌ ಚಂದ್ರಶೇಖರ್‌

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷಸರ್ಪ’ ಎಂದಿದ್ದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತೀವ್ರವಾಗಿ ಖಂಡಿಸಿದ್ದು, ಇಂಥವರನ್ನು ಕರ್ನಾಟಕದ ಜನ ಕ್ಷಮಿಸಲ್ಲ ಹಾಗೂ ಮತ ಹಾಕುವುದಿಲ್ಲ ಎಂದಿದ್ದಾರೆ. 

Kannadigas will not vote for PM Narendra Modi abusers Says Rajeev Chandrasekhar gvd
Author
First Published Apr 28, 2023, 2:00 AM IST

ನವದೆಹಲಿ (ಏ.28): ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷಸರ್ಪ’ ಎಂದಿದ್ದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತೀವ್ರವಾಗಿ ಖಂಡಿಸಿದ್ದು, ಇಂಥವರನ್ನು ಕರ್ನಾಟಕದ ಜನ ಕ್ಷಮಿಸಲ್ಲ ಹಾಗೂ ಮತ ಹಾಕುವುದಿಲ್ಲ ಎಂದಿದ್ದಾರೆ. ಟ್ವೀಟ್‌ ಮಾಡಿರುವ ರಾಜೀವ್‌, ‘ಕಾಂಗ್ರೆಸ್‌ಗೆ ಹತಾಶೆ ಬೆಳೆದಂತೆ ಅವರ ಸುಳ್ಳುಗಳು ಹಾಗೂ ಮೋದಿ ಅವರ ಬಗ್ಗೆ ನಿಂದನೆಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಕೆಲವು ಕಾಂಗೀ ನಾಯಕರು ನಮ್ಮ ಪ್ರಧಾನಿಗಳ ಸಾವು ಸಂಭವಿಸುವುದನ್ನು ನೋಡಲು ಬಯಸಿದ್ದರು. 

ಕೆಲವರು ಅಪಹಾಸ್ಯ ಮಾಡಿದ್ದರು. ಈಗ ಖರ್ಗೆ ಅವರು ಮೋದಿ ಅವರನ್ನು ನಿಂದಿಸಿದ್ದಾರೆ. ನನ್ನ ಮಾತುಗಳನ್ನು ಮಾರ್ಕ್ ಮಾಡಿಟ್ಟುಕೊಳ್ಳಿ. ನಮ್ಮ ಪ್ರಧಾನಿಗಳ ನಿಂದಿಸಿದವರನ್ನು ಕರ್ನಾಟಕದ ಜನರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಅಥವಾ ಮತ ಹಾಕುವುದಿಲ್ಲ’ ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

‘ಮನ್‌ ಕಿ ಬಾತ್‌’ ಗಿನ್ನಿಸ್‌ ದಾಖಲೆ ಸೇರುವ ಸಾಧ್ಯ​ತೆ: ಸಂಸದ ಬಿ.ವೈ.ರಾಘವೇಂದ್ರ

ಕೋಟ್ಯಧಿಪತಿಗಳ ರಾಹುಲ್‌ ಹೇಳಿಕೆಗೆ ಆರ್‌ಸಿ ತಿರುಗೇಟು: ಯುಪಿಎ ಆಡಳಿತದ ಸಮಯದಲ್ಲಿ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯ ಒಟ್ಟು ಮೌಲ್ಯದ ಶೇ.97ರಷ್ಟನ್ನು 9 ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತು ಎಂದು ಹೇಳುವ ಮೂಲಕ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ. 

ದೇಶದಲ್ಲಿ ಪ್ರಸ್ತುತ ಎರಡರಿಂದ ಮೂರು ಮಂದಿ ಕೋಟ್ಯಧಿಪತಿಗಳಿಗೆ ಮಾತ್ರ ಮುಖ್ಯಸ್ಥಾನ ನೀಡಲಾಗಿದೆ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಆರ್‌ಸಿ, ಪ್ರಿಯ ಸುಳ್ಳುಗಾರ ರಾಹುಲ್‌, ಬ್ಯಾಂಕುಗಳ ಮೌಲ್ಯದ ಶೇ.97ರಷ್ಟನ್ನು 9 ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತು. 2008ರಲ್ಲಿ ಯುಪಿಎ ಸರ್ಕಾರ ಸಾಲವನ್ನು ಮನ್ನಾ ಮಾಡಿದಾಗ ಅದರಲ್ಲಿ ಶೇ.40ರಷ್ಟುಅವ್ಯವಹಾರ ನಡೆಸಿರುವುದನ್ನು ಮಹಾಲೆಕ್ಕಪರಿಶೋಧಕರು ಕಂಡುಹಿಡಿದಿದ್ದರು. ಈ ರೀತಿಯ ಮೋಸಗಳು ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಯುತ್ತಿತ್ತು. ಪ್ರಧಾನಿ ಮೋದಿ ಅವರು ಇದನ್ನು ಸ್ವಚ್ಛಗೊಳಿಸಿದರು ಎಂದು ಹೇಳಿದ್ದಾರೆ.

ಭ್ರಷ್ಟ, ಹಗರಣದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌: ಕಾಂಗ್ರೆಸ್‌ ಹಿಂದೆ ಅಧಿಕಾರದಲ್ಲಿದ್ದಾಗ ನಡೆಸಿದ ಭಾರೀ ಭ್ರಷ್ಟಾಚಾರ, ಹಗರಣಗಳ ಸರಮಾಲೆಯಿಂದಲೇ 2014ರ ಲೋಕಸಭೆ ಚುನಾವಣೆ ಮತ್ತು 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು. ಇದನ್ನು ಮರೆತು ಕಾಂಗ್ರೆಸ್‌ ನಾಯಕರು ಅಧಿಕಾರಕ್ಕಾಗಿ ಈಗ ಸ್ವಚ್ಛ, ಭ್ರಷ್ಟಮುಕ್ತ ಆಡಳಿತದ ಮಾತನಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿನ ಹಗರಣಗಳು, ಕಾಂಗ್ರೆಸ್‌ ನಾಯಕರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಇಂದಿಗೂ ನಡೆಯುತ್ತಿರುವುದನ್ನು ಜನ ಮರೆತಿಲ್ಲ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಶಿವಮೊಗ್ಗ ಏರ್‌​ಪೋ​ರ್ಟ್‌ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್‌ ಗಾಂಧಿ

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆಸಿದ 2ಜಿ ಸ್ಪೆಕ್ಟ್ರಂ ಸೇರಿದಂತೆ ಇನ್ನಿತರೆ ಹಗರಣಗಳು ಒಂದುಕಡೆ ಇರಲಿ. ಮತ್ತೆ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಹಿಂದೆ ಅಧಿಕಾರದಲ್ಲಿದ್ದಾಗ ನಡೆಸಿದ 1763 ಎಕರೆ ಅರ್ಕಾವತಿ ಬಡಾವಣೆ ರೀಡೂ ಅಕ್ರಮ, ಮತ್ತೊಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಅವರ ಮೇಲಿನ ಸೋಲಾರ್‌ ಪ್ಲಾಂಟ್‌ ಹಗರಣ, ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ತನಿಖೆಯಲ್ಲಿವೆ. ಸಿಬಿಐ ತನಿಖೆ ರದ್ದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸೌರ ವಿದ್ಯುತ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ ನೋಟಿಸ್‌ ನೀಡಿ ತನಿಖೆಗೆ ಸೂಚಿಸಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios