ಶಿವಮೊಗ್ಗ ಏರ್‌​ಪೋ​ರ್ಟ್‌ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್‌ ಗಾಂಧಿ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ‘ಗೆದ್ದು ಬನ್ನಿ’ ಎಂದು ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಶುಭ ಹಾರೈಸಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಜೊತೆ ಖಾಸಗಿಯಾಗಿ ಕೂರಿಸಿಕೊಂಡು ಕೆಲ ಸೂಚನೆ ನೀಡಿದ್ದಾರೆ.

Rahul Gandhi wished the Congress candidates at Shivamogga Airport gvd

ಶಿವಮೊಗ್ಗ (ಏ.27): ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ‘ಗೆದ್ದು ಬನ್ನಿ’ ಎಂದು ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಶುಭ ಹಾರೈಸಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಜೊತೆ ಖಾಸಗಿಯಾಗಿ ಕೂರಿಸಿಕೊಂಡು ಕೆಲ ಸೂಚನೆ ನೀಡಿದ್ದಾರೆ. ದೆಹಲಿಯಿಂದ ಖಾಸಗಿ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸುಮಾರು 12.30 ಗಂಟೆಗೆ ಆಗಮಿಸಿದ ರಾಹುಲ್‌ ಗಾಂಧಿ ಅವರು 10-12 ನಿಮಿಷ ಕಳೆದರು. 

ರಾಹುಲ್‌ ಭೇಟಿ ವೇಳೆ ಜಿಲ್ಲಾ ಕಾಂಗ್ರೆಸ್‌ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿ 135 ಜನರ ಭೇಟಿಗೆ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ 30 ಜನರು ಲೈನ್‌ನಲ್ಲಿ ನಿಂತು ರಾಹುಲ್‌ ಅವರನ್ನು ಸೌಹಾರ್ದ ಭೇಟಿ ಮಾಡಿ ಶುಭ ಕೋರಿದರು. ಪಕ್ಷದ ರಾಷ್ಟ್ರೀಯ ನಾಯಕರಾದ ಕೆ.ಸಿ. ವೇಣುಗೋಪಾಲ್‌, ಎಚ್‌.ಎಂ. ರೇವಣ್ಣ, ಮಯೂರ್‌ ಜಯಕುಮಾರ್‌, ಸಲೀಂ ಅಹ್ಮದ್‌, ಸೈಯದ್‌ ಅಹ್ಮದ್‌ ಅವರ ಜೊತೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಆರ್‌.ಎಂ. ಮಂಜುನಾಥಗೌಡ ಅವರು ರಾಹುಲ್‌ ಅವರನ್ನು ಸ್ವಾಗತಿಸಿದರು.

ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್‌

ಬಳಿಕ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಜೊತೆಯಲ್ಲಿ ಪಕ್ಷದಿಂದ ಸ್ಪರ್ಧಿಸಿರುವ ಜಿಲ್ಲೆಯ ಎಲ್ಲ 7 ಅಭ್ಯರ್ಥಿಗಳ ಜೊತೆ ಸುಮಾರು 5 ನಿಮಿಷ ಮಾತನಾಡಿದರು. ಈ ವೇಳೆಯಲ್ಲಿ ಏನು ಮಾತನಾಡಿದರು ಎಂಬುದನ್ನು ಪಕ್ಷದ ಯಾರೂ ಮಾಹಿ​ತಿ ಬಿಟ್ಟುಕೊಡುತ್ತಿಲ್ಲ. ಮೂಲಗಳ ಪ್ರಕಾರ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೂಡ ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ರಾಜ್ಯದ ಮುಖಂಡರು ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಹೆಚ್ಚು ಗಮನಹರಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ನನ್ನ ಸ್ಪರ್ಧೆ​ಯಿಂದ ಡಿಕೆಶಿ ಕುಟುಂಬಕ್ಕೆ ಭಯ: ಸಚಿವ ಅ​ಶೋಕ್‌

ಕಾಂಗ್ರೆಸ್‌ ಅಭ್ಯರ್ಥಿಗಳಾದ ಭದ್ರಾವತಿಯ ಸಂಗಮೇಶ್‌ ಬಿ.ಕೆ., ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್‌, ಶಿವಮೊಗ್ಗದ ಎಚ್‌.ಸಿ. ಯೋಗೀಶ್‌, ಶಿಕಾರಿಪುರದ ಗೋಣಿ ಮಾಲತೇಶ್‌, ಸಾಗರದ ಬೇಳೂರು ಗೋಪಾಲಕೃಷ್ಣ, ಶಿವ​ಮೊಗ್ಗ ಗ್ರಾಮಾಂತರ ಕ್ಷೇತ್ರದ ಡಾ. ಶ್ರೀನಿವಾಸ್‌ ಕರಿಯಣ್ಣ ಇದ್ದರು. ಸೊರಬದ ಅಭ್ಯರ್ಥಿ ಮಧು ಬಂಗಾರಪ್ಪ ಅವರು ತಾವು ಉಸ್ತುವಾರಿ ಆಗಿರುವ ಉತ್ತರ ಕನ್ನಡ ಜಿಲ್ಲೆಗೆ ತೆರಳಿದ್ದರು. ಬಳಿಕ ರಾಹುಲ್‌ ಗಾಂಧಿ ಅವರು ಹೆಲಿಕಾಪ್ಟರ್‌ನಲ್ಲಿ ಉಡುಪಿ ಜಿಲ್ಲೆಯ ಕಾಪುವಿಗೆ ಪ್ರಯಾಣ ಬೆಳೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios