Asianet Suvarna News Asianet Suvarna News

ಲೋಕಸಭೆ ಚುನಾವಣೆಗೆ ನಿಲ್ಲುವ ಸೂಚನೆ ನೀಡಿದ ಕಂಗನಾ, ಒಕೆ ಎಂದ ಜೆಪಿ ನಡ್ಡಾ!

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಲ್ಲುವ ಆಸೆ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಬಿಜೆಪಿ ಟಿಕೆಟ್ ನೀಡಿದಲ್ಲಿ ಮುಂದಿನ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ ಜೆಪಿ ನಡ್ಡಾ ಕೂಡ ಕಂಗನಾರನ್ನು ಬಿಜೆಪಿಗೆ ಸ್ವಾಗ ಮಾಡಿದ್ದು, ಪಕ್ಷಕ್ಕೆ ಸೇರಿದ ಬಳಿಕ ಅವರ ಜವಾಬ್ದಾರಿ ನಿರ್ಧಾರವಾಗಲಿದೆ ಎಂದಿದ್ದಾರೆ.

Kangana Ranaut hint at joining politics If BJP wants me for Himachal polls BJP President JP Nadda reaction san
Author
First Published Oct 30, 2022, 10:19 AM IST

ನವದೆಹಲಿ (ಅ. 30): ಬಾಲಿವುಡ್ ನಟಿ ಕಂಗನಾ ರಣಾವತ್ ಲೋಕಸಭೆ ಸಂಸದೆಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಹಿಮಾಚಲದ ಮಂಡಿ ಸೀಟು ತಮ್ಮ ಮೊದಲ ಆಯ್ಕೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಹಿಮಾಚಲದ ಜನತೆ ಮತ್ತು ಬಿಜೆಪಿಯವರು ಬಯಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನಸೇವೆಗಾಗಿ ತಾವು ಸ್ಪರ್ಧೆ ಮಾಡಬುದು ಎಂದು ಹೇಳಿದ್ದಾರೆ. ಮಾಧ್ಯಮ ಸಂಸ್ಥೆಯೊಂದರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕಂಗನಾ ಈ ವಿಷಯಗಳನ್ನು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಂಗನಾ ರಾಣಾವತ್‌ಗೆ ಸಾರ್ವಜನಿಕರೊಬ್ಬರು ಪ್ರಶ್ನೆ ಕೇಳಿದ್ದರು. ಹಾಗೇನಾದರೂ ಅವಕಾಶ ಸಿಕ್ಕಲ್ಲಿ ಸಕ್ರಿಯ ರಾಜಕಾರಣಕ್ಕೆ ಹೋಗುವ ಆಸೆ ಇದೆಯೇ ಎಂದು ಕಂಗನಾಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅವರು, ರಾಜಕೀಯಕ್ಕೆ ಹೀಗುವ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲಿ ಬಹಳ ಸನಿಹದಲ್ಲಿಲ್ಲ. ಹಾಗೇನಾದರೂ ನನಗ ಅವಕಾಶ ಸಿಕ್ಕಲ್ಲಿ, ಹಿಮಾಚಲ ಪ್ರದೇಶ ಹಾಗೂ ಬಿಜೆಪಿಯಿಂದ ಅವಕಾಶ ದೊರೆತಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಂಡಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಕಂಗನಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷಕ್ಕೆ ಸೇರಲು ಬಯಸಿದರೆ ಸ್ವಾಗತ ಎಂದು ಹೇಳಿದ್ದಾರೆ. ಅವರ ಜವಾಬ್ದಾರಿಯನ್ನು ಪಕ್ಷ ನಿರ್ಧರಿಸುತ್ತದೆ ಎಂದಿದ್ದಾರೆ. ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಪ್ರತಿಭಾ ಸಿಂಗ್‌ ಸಂಸದೆಯಾಗಿದ್ದಾರೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮ್‌ ಸ್ವರೂಪ್‌ ಶರ್ಮ ಸಂಸದರಾಗಿ ತಮ್ಮ ಕ್ಷೇತ್ರ ಉಳಿಸಿಕೊಂಡಿದ್ದರು. ಆದರೆ, 2021ರಲ್ಲಿ ಮಾರ್ಚ್‌ನಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಿಭಾ ಸಿಂಗ್‌, ಬಿಜೆಪಿಯ ಬ್ರಿಗೇಡಿಯರ್‌ ಕೌಶಾಲ್‌ ಠಾಕೂರ್‌ ಅವರನ್ನು ಅಂದಾಜು 10 ಸಾವಿರದ ಮತಗಳಿಂದ ಸೋಲಿಸಿ ಸಂಸತ್‌ಗೆ ಆಯ್ಕೆಯಾಗಿದ್ದರು.

ಕಾರ್ಯಕ್ರಮದಲ್ಲಿ ಕಂಗನಾ ಚಲನಚಿತ್ರಗಳ ಬಗ್ಗೆ ಮಾತ್ರವಲ್ಲದೆ ರಾಜಕೀಯ ವಿಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ತೆರೆದಿಟ್ಟರು. ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ದೇಶದ ಭವಿಷ್ಯದ ಬಗ್ಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಬಗ್ಗೆಯೂ ಕಂಗನಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನೀವು ಯಾವಾಗಲೂ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತೀರಿ, ಎದುರಾಳಿ ರಾಹುಲ್ ಗಾಂಧಿ ಬಗ್ಗೆ ಏನು ಯೋಚಿಸುತ್ತೀರಿ ಎಂದು ಕೇಳಿದಾಗ, ಮೋದಿ ಹಾಗೂ ರಾಹುಲ್‌ ಇಬ್ಬರು ಎದುರಾಳಿಯಾಗಿರುವುದು ಅವರಿಗೇ ಬೇಸರ ತರಿಸಿದೆ. ಮೋದಿಗೆ ರಾಹುಲ್‌ ಗಾಂಧಿ ಪ್ರಬಲ ಎದುರಾಳಿಯಲ್ಲ ಎಂದನಿಸಿದೆ. ಹಾಗಾಗಿ ಅವರಿಗೆ ಸಮರ್ಥ ಹೋರಾಟ ಸಿಗುತ್ತಿಲ್ಲ. ಇನ್ನೊಂದೆಡೆ ರಾಹುಲ್‌ ಗಾಂಧಿಗೆ ಮೋದಿ ಎದುರಾಳಿಯಾಗಿರುವುದು ಬೇಸರ ತಂದಿದೆ. ಅವರಿಗೆ ಮೋದಿ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

'ಕಾಂತಾರ' ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ; ನಟಿ ಕಂಗನಾ ರಣಾವತ್ ಒತ್ತಾ

ಅರವಿಂದ್ ಕೇಜ್ರಿವಾಲ್ ಅವರು ಭವಿಷ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಹೋರಾಡಬಹುದೇ ಎಂದು ಕಂಗನಾ ಅವರನ್ನು ಕೇಳಿದಾಗ. ಹಿಮಾಚಲದಲ್ಲಿ ಅರವಿಂದ್ ಕೇಜ್ರಿವಾಲ್ ಅಥವಾ ಅವರ ಪಕ್ಷಕ್ಕೆ ಏನೂ ಸಿಗೋದಿಲ್ಲ. ಏಕೆಂದರೆ ಹಿಮಾಚಲದ ಜನರು ತಮ್ಮದೇ ಆದ ವಿದ್ಯುತ್ ಉತ್ಪಾದಿಸುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ಹೆಚ್ಚಿನ ಮನೆಗಳಲ್ಲಿ ಸೌರ ವ್ಯವಸ್ಥೆ ಇದೆ. ತರಕಾರಿ ಮತ್ತಿತರ ವಿಷಯಗಳಲ್ಲಿ ನಾವೂ ಸ್ವಾವಲಂಬಿಗಳಾಗಿದ್ದೇವೆ ಹಾಗಾಗಿ ಅರವಿಂದ್ ಕೇಜ್ರಿವಾಲ್ ಅವರ ಉಚಿತ ಯೋಜನೆಯ ಮಾತು ಹಿಮಾಚಲದಲ್ಲಿ ನಡೆಯುವುದಿಲ್ಲ. ಹಿಮಾಚಲದ ಜನರು ಪ್ರಬಲ ನಾಯಕನನ್ನು ಆಯ್ಕೆ ಮಾಡುತ್ತಾರೆ, ಆ ನಾಯಕ ಬಿಜೆಪಿಯವರು ಅಥವಾ ಕಾಂಗ್ರೆಸ್‌ನವರು ಯಾರು ಬೇಕಾದರೂ ಆಗಬಹುದು ಎಂದಿದ್ದಾರೆ.

ಹ್ಯಾಟ್ಸ್ ಆಫ್ ರಿಷಬ್ ಶೆಟ್ಟಿ, ಸಿನಿಮಾ ಅಂದ್ರೆ ಇದು; 'ಕಾಂತಾರ' ನೋಡಿ ಹೊಗಳಿದ ನಟಿ ಕಂಗನಾ

ಜೆಪಿ ನಡ್ಡಾ ಸ್ವಾಗತ: ಕಂಗನಾ ರಣಾವತ್ ಪಕ್ಷಕ್ಕೆ ಸೇರಲು ಬಯಸಿದರೆ, ಅವರು ಸ್ವಾಗತಿಸುತ್ತಾರೆ. ಅವರ ಜವಾಬ್ದಾರಿಯನ್ನು ಪಕ್ಷ ನಿರ್ಧರಿಸುತ್ತದೆ. ಮೋದಿ ನಮ್ಮ ಪಕ್ಷದ ನಾಯಕ ಮತ್ತು ಪ್ರಧಾನಿಯಾಗಿರುವುದರಿಂದ ಎಲ್ಲರೂ ಬರಬೇಕೆಂದು ನಾವು ಬಯಸುತ್ತೇವೆ. ಅವರಿಂದ ಪ್ರಭಾವಿತರಾಗಿ ದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಅವರೂ ಇದರಲ್ಲಿ ಭಾಗಿಯಾಗಲು ಬಯಸುತ್ತಾರೆ. ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಟಿಕೆಟ್ ನೀಡುವುದು ನನ್ನ ನಿರ್ಧಾರವಲ್ಲ. ಸಮಾಲೋಚನೆಯ ಪ್ರಕ್ರಿಯೆಯು ಮೂಲದಿಂದ ಉನ್ನತ ಮಟ್ಟಕ್ಕೆ ಹೋಗುತ್ತದೆ ಮತ್ತು ನಂತರ ಅದು ಸಂಸದೀಯ ಮಂಡಳಿಗೆ ಹೋಗುತ್ತದೆ. ಈ ಮಂಡಳಿಯು ಟಿಕೆಟ್ ಅನ್ನು ನಿರ್ಧರಿಸುತ್ತದೆ.

Follow Us:
Download App:
  • android
  • ios