ಮೋದಿ, ಶಾ ಏನು ಹೇಳ್ತಾರೋ ಹಾಗೆ ಮಾಡುವೆ, ಮಾಜಿ ಪ್ರಧಾನಿ, ಮಾಜಿ ಸಿಎಂಗಳೂ ಸೋತಿದ್ದಾರೆ, ಜನರ ಇಚ್ಛೆ ಏನು ಎಂಬುದನ್ನು ಕಾದು ನೋಡೋಣ: ಸಚಿವ ಆರ್.ಅಶೋಕ್
ಬೆಂಗಳೂರು(ಏ.12): ಕನಕಪುರದಲ್ಲಿ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ತೀರ್ಮಾನವೇ ಹೊರತು ನನ್ನ ತೀರ್ಮಾನವಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮೊದಲನೇಯದಾಗಿ ಬಿಜೆಪಿಯ ಸೈನಿಕ. ನಮ್ಮ ಕಮಾಂಡರ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಏನು ಹೇಳುತ್ತಾರೋ ಹಾಗೆ ಮಾಡಬೇಕು. ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದೆ. ಬಾಬರಿ ಮಸೀದಿ ಧ್ವಂಸ ಸಮಯದಲ್ಲಿಯೂ ಹೋರಾಟ ಮಾಡಿದ್ದೆ ಎಂದರು ತಿಳಿಸಿದರು.
ಟ್ರಬಲ್ ಶೂಟರ್ ಡಿಕೆಶಿ ವಿರುದ್ಧ ಸಾಮ್ರಾಟ ಆರ್.ಅಶೋಕ್ ಕಣಕ್ಕೆ
ನಮ್ಮ ನಾಯಕರು ಎರಡು ಕಡೆ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ಪಕ್ಷದ ತೀರ್ಮಾನವೇ ಹೊರತು ನನ್ನ ತೀರ್ಮಾನವಲ್ಲ. ಇದೊಂದು ತಂತ್ರಗಾರಿಕೆ. ನಮ್ಮ ಗೆಲುವು ಶತಸಿದ್ಧ. ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೇವೇಗೌಡರೂ ಸೋತಿದ್ದಾರೆ. ಜನರ ಇಚ್ಛೆ ಏನು ಎನ್ನುವುದು ಕಾದು ನೋಡೋಣ ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
