ಒಂದೇ ದಿನ ಪ್ರಚಾರ: 1.2 ಲಕ್ಷ ಅಂತರದಿಂದ ಗೆದ್ದ ಡಿಕೆಶಿ: ಠೇವಣಿ ಕಳೆದುಕೊಂಡ ಆರ್ ಅಶೋಕ್‌

ರಾಜ್ಯ ರಾಜಕಾರಣದಲ್ಲಿ ಪವರ್‌ಫುಲ್‌ ರಾಜ​ಕಾ​ರಣಿ ಎಂದೇ ಗುರುತಿಸಿಕೊಂಡಿರುವ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕನಕಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

Kanakapura Assembly constituency Election Results 2023 DK shivakumar campaigned only one day and won by a margin of 1.2 lakhs vote R Ashok and jds candidate lost his deposit akb

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪವರ್‌ಫುಲ್‌ ರಾಜ​ಕಾ​ರಣಿ ಎಂದೇ ಗುರುತಿಸಿಕೊಂಡಿರುವ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕನಕಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಡಿ.ಕೆ.ಶಿವಕುಮಾರ್‌ 1,22,392 ಮತಗಳ ಭಾರೀ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದು, ಇದು ಅಭ್ಯರ್ಥಿಯೊಬ್ಬರು ಈ ಚುನಾವಣೆಯಲ್ಲಿ ದಾಖಲಿಸಿದ ಅತೀ ಹೆಚ್ಚಿನ ಅಂತರದ ಗೆಲುವಾಗಿದೆ. ಡಿ.ಕೆ.ಶಿವಕುಮಾರ್‌ ಅವರು 1,43,023 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ.ನಾ​ಗ​ರಾಜು 20,631 ಮತಗಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಚಿವ ಆರ್‌.ಅಶೋಕ್‌ ಕೇವಲ 19,753 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.

1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾದಳದ ಎಚ್‌.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್‌ ಪರಾಭವಗೊಂಡಿದ್ದರು. 1989, 1994ರ ಚುನಾವಣೆಯಲ್ಲಿ ಜನತಾದಳದ ಯು.ಕೆ.ಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್‌ ಗೆಲುವು ಸಾಧಿಸಿದ್ದರು. ನಂತರ 1999ರಲ್ಲಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಮತ್ತು 2004ರಲ್ಲಿ ಜೆಡಿಎಸ್‌ ಡಿ.ಎಂ.ವಿಶ್ವನಾಥ್‌ ವಿರುದ್ಧ ಜಯ ಗಳಿಸಿದ್ದರು. ಆ ಬಳಿಕ ಸಾತನೂರು ಕ್ಷೇತ್ರ, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರಕ್ಕೆ ವಲಸೆ ಬಂದ ಡಿ.ಕೆ.ಶಿವಕುಮಾರ್‌ ಅವರು ಪಿ.ಜಿ.ಆರ್‌.ಸಿಂಧ್ಯಾ ಕಟ್ಟಿದ ಜೆಡಿಎಸ್‌ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008ರಲ್ಲಿ ಜೆಡಿಎಸ್‌ನ ವಿಶ್ವನಾಥ್‌, 2013ರಲ್ಲಿ ಜೆಡಿಎಸ್‌ ಪಿ.ಜಿ.ಆರ್‌. ಸಿಂಧ್ಯಾ, 2018ರಲ್ಲಿ ನಾರಾ​ಯ​ಣ​ಗೌ​ಡ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಂದಾಯ ಸಚಿ​ವ​ರಾ​ಗಿದ್ದ ಅಶೋಕ್‌ರನ್ನು ಬಿಜೆಪಿ ಕಣ​ಕ್ಕಿ​ಳಿ​ಸಿ​ದರೆ, ಜೆಡಿ​ಎಸ್‌ಗೆ ಪ್ರಬಲ ಅಭ್ಯ​ರ್ಥಿ ಸಿಗ​ಲಿಲ್ಲ. ಇದು ಕಾಂಗ್ರೆಸ್‌ ಪಾಲಿಗೆ ವರ​ದಾ​ನ​ವಾ​ಯಿ​ತು.

Karnataka election results 2023: ರಾಜಧಾನಿಯಲ್ಲಿ ಒಬ್ಬ ಬಂಡಾಯ ಅಭ್ಯರ್ಥಿಯೂ ಗೆದ್ದಿಲ್ಲ!

ಜೆಡಿ​ಎಸ್‌ ವರಿಷ್ಠ ಎಚ್‌.ಡಿ.ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಪ್ರಚಾ​ರಕ್ಕೆ ಬಾರ​ದಿ​ರು​ವುದು, ಅಭ್ಯ​ರ್ಥಿ​ಯಲ್ಲಿ ಆರ್ಥಿಕ ಬಲ ಇಲ್ಲ​ದಿ​ರು​ವುದು, ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಹೊಂದಾ​ಣಿಕೆ ರಾಜ​ಕಾ​ರ​ಣದ ವದಂತಿ ಜೆಡಿಎಸ್‌ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದರೆ, ಬಿಜೆಪಿ ಅಭ್ಯರ್ಥಿ ಆರ್‌.ಅ​ಶೋಕ್‌ ಹೊರ​ಗಿ​ನ​ವರು ಎಂಬ ಮನೋ​ಭಾ​ವನೆ, ಕೊನೇ ಘಳಿ​ಗೆ​ಯ​ಲ್ಲಿ ಟಿಕೆಟ್‌ ಘೋಷಿಸಿದ್ದು, ಕ್ಷೇತ್ರ​ದಲ್ಲಿ ಪಕ್ಷಕ್ಕೆ ಅಸ್ತಿ​ತ್ವವೇ ಇಲ್ಲ​ದಿ​ರು​ವುದು, ಆಡ​ಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ ಹೀನಾಯ ಸೋಲುಕಂಡಿತು ಎನ್ನಲಾಗಿದೆ.

1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾದಳದ ಎಚ್‌.ಡಿ.ದೇವೇಗೌಡರ ವಿರುದ್ಧ ಡಿಕೆಶಿ ಪರಾಭವಗೊಂಡಿದ್ದರು. 1989, 1994ರ ಚುನಾವಣೆಯಲ್ಲಿ ಜನತಾದಳದ ಯು.ಕೆ.ಸ್ವಾಮಿ ವಿರುದ್ಧ ಡಿಕೆಶಿ ಗೆಲವು ಸಾಧಿಸಿದ್ದರು. ಆನಂತರ 1999ರಲ್ಲಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಮತ್ತು 2004ರಲ್ಲಿ ಜೆಡಿಎಸ್‌ ಡಿ.ಎಂ.ವಿಶ್ವನಾಥ್‌ ವಿರುದ್ಧ ಜಯ ಗಳಿಸಿದ್ದರು. ಆನಂತರ ಸಾತನೂರು ಕ್ಷೇತ್ರ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರ ಕ್ಷೇತ್ರಕ್ಕೆ ವಲಸೆ ಬಂದ ಡಿಕೆಶಿರವರು ಸಿಂಧ್ಯಾ ಕಟ್ಟಿದ ಜೆಡಿಎಸ್‌ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008ರಲ್ಲಿ ಜೆಡಿಎಸ್‌ನ ವಿಶ್ವನಾಥ್‌, 2013ರಲ್ಲಿ ಜೆಡಿಎಸ್‌ ಪಿಜಿಆರ್‌ ಸಿಂಧ್ಯಾ, 2018ರಲ್ಲಿ ನಾರಾ​ಯ​ಣ​ಗೌ​ಡ ವಿರುದ್ಧ ಗೆಲುವು ಸಾಧಿಸಿದ್ದ ಡಿಕೆಶಿ ಇದೀಗ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ.

Karnataka Cabinet Formation: ಹೊಸ ಸಿಎಂಗೆ ಸಂಪುಟ ರಚನೆ ದೊಡ್ಡ ಸವಾಲ್‌: ಎಲ್ಲರಿಗೂ 'ಮಣೆ' ಚಾಲೆಂಜ್‌

ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಂದಾಯ ಸಚಿ​ವ​ರಾ​ಗಿದ್ದ ಅಶೋಕ್‌ ಅವ​ರನ್ನು ಬಿಜೆಪಿ ಕಣ​ಕ್ಕಿ​ಳಿ​ಸಿ​ದರೆ, ಜೆಡಿ​ಎಸ್‌ ಗೆ ಪ್ರಬಲ ಅಭ್ಯ​ರ್ಥಿ ಸಿಗ​ಲಿಲ್ಲ. ಇದು ಕಾಂಗ್ರೆಸ್‌ ಪಾಲಿಗೆ ವರ​ದಾ​ನ​ವಾ​ಯಿ​ತು.

ಡಿಕೆಶಿ ಗೆಲು​ವಿಗೆ ಕಾರ​ಣ:

ಕಾಂಗ್ರೆಸ್‌ ನ ಗ್ಯಾರೆಂಟಿ​ಗಳು. ಕ್ಷೇತ್ರದಲ್ಲಿ ಡಿಕೆಶಿ​ಯನ್ನು ವಿರೋಧಿಸುವ ಯಾವ ನಾಯಕನು ​ಇ​ಲ್ಲ​ದಿ​ರು​ವುದು. ಇಡಿ, ಐಟಿ ಪ್ರಕ​ರಣಗಳಿಂದ ಅನು​ಕಂಪ. ಸಹೋ​ದರ ಸಂಸದ ಡಿ.ಕೆ.ಸುರೇಶ್‌ ರವರು ಕ್ಷೇತ್ರ​ದಲ್ಲಿ ಸಾಕಷ್ಟು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾರಲ್ಲದೆ, ಹಿಡಿತವನ್ನು ಸಾಧಿ​ಸಿ​ರು​ವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೋಟ್ಯಂತರ ರುಪಾಯಿಗಳ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಭಿನ್ನಮತಕ್ಕೆ ಅವಕಾಶ ನೀಡದೆ ಪಕ್ಷ ಸಂಘಟನೆ ಬಲಿಷ್ಠ ಪಡಿಸಿದ್ದು ಡಿಕೆಶಿ ಗೆಲುವಿಗೆ ಸಹಕಾರಿಯಾಯಿ​ತು.

ದಳ - ಕಮ​ಲದ ಸೋಲಿಗೆ ಕಾರ​ಣ​ವೇನು?:

ಜೆಡಿ​ಎಸ್‌ ವರಿಷ್ಠ​ರಾದ ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಪ್ರಚಾ​ರಕ್ಕೆ ಬಾರ​ದಿ​ರು​ವುದು. ಅಭ್ಯ​ರ್ಥಿ​ಯಲ್ಲಿ ಆರ್ಥಿಕ ಬಲ ಇಲ್ಲ​ದಿ​ರು​ವುದು. ಡಿಕೆಶಿಯೊಂದಿಗೆ ಹೊಂದಾ​ಣಿಕೆ ರಾಜ​ಕಾ​ರ​ಣದ ವದಂತಿ. ಮಹಿಳಾ ಮತ್ತು ಯುವ ಮತ​ದಾ​ರ​ರನ್ನು ಸೆಳೆ​ಯು​ವಲ್ಲಿ ವಿಫ​ಲ​ರಾ​ಗಿದ್ದ ಬಿ.ನಾ​ಗ​ರಾಜು ಸೋಲಿಕೆ ಕಾರಣ ಎನ್ನ​ಲಾ​ಗು​ತ್ತಿದೆ. ಬಿಜೆಪಿ ಅಭ್ಯರ್ಥಿ ಆರ್‌.ಅ​ಶೋಕ್‌ ಹೊರ​ಗಿ​ನ​ವರು ಎಂಬ ಮನೋ​ಭಾ​ವನೆ. ಕೊನೆ ಘಳಿ​ಗೆ​ಯ​ಲ್ಲಿ ಟಿಕೆಟ್‌ ಘೋಷಣೆ ಮಾಡಿದ್ದು, ಕ್ಷೇತ್ರ​ದಲ್ಲಿ ಪಕ್ಷಕ್ಕೆ ಅಸ್ತಿ​ತ್ವವೇ ಇಲ್ಲ​ದಿ​ರು​ವುದು. ಬಿಜೆಪಿ ಸರ್ಕಾ​ರದ ದ್ವೇಷದ ರಾಜ​ಕಾ​ರಣ, ಆಡ​ಳಿತ ವಿರೋಧಿ ಅಲೆ, ಸರ್ಕಾರದ ಸಾಧನೆಗಳು ಹಾಗೂ ತಾಲೂಕಿಗೆ ತಮ್ಮ ಸರ್ಕಾರದಿಂದ ಬಂದಿರುವ ಅನುದಾನಗಳ ಬಗ್ಗೆ ಜನರಿಗೆ ​ಮ​ನ​ವ​ರಿಕೆ ಮಾಡಿ​ಕೊ​ಡುವಲ್ಲಿ ಎಡ​ವಿದ್ದರಿಂದ ಸೋಲು ಅನು​ಭ​ವಿ​ಸ​ಬೇ​ಕಾ​ಯಿತು.

Latest Videos
Follow Us:
Download App:
  • android
  • ios