ಇಂದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಗೆಲ್ಲಬೇಕಾದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲೇಬೇಕು. ಖರ್ಗೆ ಮತ ಹಾಗೂ ಜೆಡಿಎಸ್ ಮತ ಸಿಕ್ಕರೂ ಕಾಂಗ್ರೆಸ್‌ಗೆ ಇನ್ನೊಂದು ಮತದ ಕೊರತೆಯಿದೆ. 

ಕಲಬುರಗಿ (ಮಾ.23): ಇಂದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಗೆಲ್ಲಬೇಕಾದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲೇಬೇಕು. ಖರ್ಗೆ ಮತ ಹಾಗೂ ಜೆಡಿಎಸ್ ಮತ ಸಿಕ್ಕರೂ ಕಾಂಗ್ರೆಸ್‌ಗೆ ಇನ್ನೊಂದು ಮತದ ಕೊರತೆಯಿದೆ. ಅತಿ ಹೆಚ್ಚು ಸ್ಥಾನಗಳಿಸಿದರೂ ಇದೀಗ ಬಹುಮತಕ್ಕೆ ಕಾಂಗ್ರೆಸ್ ಪರದಾಡುತ್ತಿದೆ. ಇನ್ನು ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಯತ್ನಿಸುತ್ತಿದ್ದು, ಸ್ಥಳಿಯ ಜನಪ್ರತಿನಿಧಿಗಳ ಮತಗಳು ಸೇರಿ ಬಹುಮತಕ್ಕೆ 35 ಮತಗಳು ಬೇಕು. 

ಜನಪ್ರತಿನಿಧಿಗಳ ಮತ ಸೇರಿ ಬಿಜೆಪಿ ಸಂಖ್ಯಾಬಲ 34 ಇದ್ದು, ಬಹುಮತಕ್ಕೆ ಒಂದು ಮತದ ಕೊರತೆಯಿದೆ. ಸ್ಥಳಿಯ ಜನಪ್ರತಿನಿಧಿಗಳ ಮತ ಸೇರಿ ಕಾಂಗ್ರೆಸ್ ಬಲ 30, ಜೆಡಿಎಸ್ ಬಲ 4 ಇದೆ. ಜೆಡಿಎಸ್, ಬಿಜೆಪಿಗೆ ಬೆಂಬಲಿಸಿದರೆ ಬಿಜೆಪಿ ಗೆಲುವು ಸರಳವಾಗಲಿದೆ. ಮಾತ್ರವಲ್ಲದೇ ಜೆಡಿಎಸ್, ಕಾಂಗ್ರೆಸ್‌ಗೆ ಬೆಂಬಲಿಸಿದರೂ ಕಾಂಗ್ರೆಸ್‌ಗೆ ಇನ್ನೊಂದು ಮತ ಕೊರತೆಯಿದೆ. ಇನ್ನು ಕಾಂಗ್ರೆಸ್‌ನ ಮೂರು ಜನಪ್ರತಿನಿಧಿಗಳ ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಮತವೂ ಸೇರಿದ್ದು, ಪಾಲಿಕೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸಲು ದೆಹಲಿಯಿಂದ ಖರ್ಗೆ ಬರ್ತಾರಾ ಎಂಬ ಅನುಮಾನ ಮೂಡಿದೆ.

ಕಾಮಗಾರಿ ಯಾವುದು ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ: ರೇವಣ್ಣಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ

ಚುನಾವಣೆಗೆ ತಡೆ ನೀಡಲು ಹೈಕೋರ್ಟ್‌ ನಕಾರ: ಮಾ.23ರಂದು ನಿಗದಿಯಾಗಿರುವ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆಗೆ ತಡೆ ನೀಡಲು ಕಲಬುರಗಿ ಹೈಕೋರ್ಟ್‌ ನಕಾರ ಹೇಳಿದೆ. ಪಾಲಿಕೆಯಲ್ಲಿ ಬಹುಮತಕ್ಕಿಂತ ಕಡಿಮೆ ಸೀಟುಗಳನ್ನು ಪಡೆದಿರುವ ಬಿಜೆಪಿ ಬೇರೆ ಜಿಲ್ಲೆಗಳಿಗೆ ಸೇರಿರುವ ವಿಧಾನ ಪರಿಷತ್‌ ಸದಸ್ಯರ ಹೆಸರುಗಳನ್ನು ಕಲಬುರಗಿ ಪಾಲಿಕೆ ಮೇಯರ್‌ ಉಪ ಮೇಯರ್‌ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಮೂಲಕ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. 

ಆದ್ದರಿಂದ ಈ ಚುನಾವಣೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್‌ ಪಾಲಿಕೆ ಸದಸ್ಯೆ ವರ್ಷಾ ಜಾನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌ ಕಲಬುರಗಿ ಪೀಠ ಸದರಿ ಅರ್ಜಿಯನ್ನೇ ವಜಾ ಮಾಡಿದೆ. ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಈಗಾಗಲೇ ಚುನಾವಣೆ ಘೋಷಣೆಯಾಗಿರುವರಿಂದ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದ್ದಾರೆ. 

ನನ್ನನ್ನು ಎಷ್ಟು ಸಾವಿರ ಅಂತರದಲ್ಲಿ ಗೆಲ್ಲಿಸಬೇಕೆಂದು ಜನರು ತೀರ್ಮಾನ ಮಾಡ್ತಾರೆ: ಶಾಸಕ ಪ್ರೀತಂಗೌಡ

ಇದರಿಂದಾಗಿ ಮಾ. 23 ರಂದು ನಿಗದಿಯಾಗಿರುವ ಇಲ್ಲಿನ ಪಾಲಿಕೆ ಮೇಯರ್‌ ಉಪ ಮೇಯರ್‌ ಚುನಾವಣೆಗಳು ಅಬಾಧಿತವಾಗಿ ನಡೆಯಲಿವೆ. ಯುಗಾದಿ ಮಾರನೆ ದಿನವೇ ಚುನಾವಣೆ ನಡೆಯುತ್ತಿರೋದರಿಂದ ಮೇಯರ್‌, ಉಪ ಮೇಯರ್‌ ಪಟ್ಟಯಾರಿಗೆ ಂಬ ವಿಷಯವಾಗಿ ರಾಜಕೀಯ ಪಕ್ಷಗಳ ಪಾಳಯದಲ್ಲಿ ತೀವ್ರ ಚರ್ಚೆ ಸಾಗಿದೆ. ವಾರದ ಹಿಂದೆಯೇ ಪಾಲಿಕೆ ಮೇಯರ್‌ ಚುನಾವಮೆ ಘೋಷಣೆಯಾಗಿತ್ತಲ್ಲದೆ ಈ ಕುರಿತಂತೆ ಪಾಲಿಕೆ ಚುನಾಯಿತ ಸದಸ್ಯರಿಗೆಲ್ಲರಿಗೂ ನೋಟೀಸ್‌ ಸಹ ರವಾನೆಯಾಗಿದ್ದವು.