ಬಿಜೆಪಿಗೆ ಗುಡ್‌ಬೈ ಹೇಳಿದ 'ಕಮಲ' ನಾಯಕ..!
ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದರೂ ತಾಲೂಕಿನಲ್ಲಿ ಯಾವುದೇ ನಾಮನಿರ್ದೇಶನ ಮಾಡಿಲ್ಲ ಮತ್ತು ಜಿಲ್ಲಾಮಟ್ಟದಲ್ಲಿ ಕೂಡ ಮಾಡಿಲ್ಲ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ಧ ಬೇಸತ್ತು ಸಾಮೂಹಿಕ ರಾಜೀನಾಮೆ ಮಾಡಲು ಮುಂದಾಗಿದ್ದಾರೆ: ಅಶೋಕ್ ಸಾಹುಕಾರ್ ಗೋಗಿ
ಕಲಬುರಗಿ/ ಜೇವರ್ಗಿ(ಜ.03): ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಅಶೋಕ್ ಸಾಹುಕಾರ್ ಗೋಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದರೂ ತಾಲೂಕಿನಲ್ಲಿ ಯಾವುದೇ ನಾಮನಿರ್ದೇಶನ ಮಾಡಿಲ್ಲ ಮತ್ತು ಜಿಲ್ಲಾಮಟ್ಟದಲ್ಲಿ ಕೂಡ ಮಾಡಿಲ್ಲ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ಧ ಬೇಸತ್ತು ಸಾಮೂಹಿಕ ರಾಜೀನಾಮೆ ಮಾಡಲು ಮುಂದಾಗಿದ್ದಾರೆಂದರು.
ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥ್ ಗೌಡ ಯಲಗೋಡ ಅವರಿಗೂ ಕೂಡ ರಾಜ್ಯಮಟ್ಟದಲ್ಲಿ ಯಾವುದೇ ನಾಮ ನಿರ್ದೇಶನ ಮಾಡಿಲ್ಲ ಸಂಕಷ್ಟಕಾಲದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ ಅಂತವರಿಗೂ ಕೂಡ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಬೇಸರಿಸಿದರು.
100 ದಿನ ಚುರುಕಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತನ್ನಿ, ಶಕ್ತಿ ಕೇಂದ್ರದ ಸಭೆಯಲ್ಲಿ ಬಿ.ಎಲ್.ಸಂತೋಷ್
ತಾಲೂಕಿನಲ್ಲಿ ಯಾವುದೇ ಕಾಮಗಾರಿ ಮಾಡಿದರೆ ಒಳ ಒಪ್ಪಂದ ರಾಜಕಾರಣ ಮಾಡುತ್ತಿದ್ದ ಪ್ರಯುಕ್ತ ಸರಿಯಾಗಿ ಗುಣಮಟ್ಟದ ಕಾಮಗಾರಿ ಕೆಲಸ ಆಗುತ್ತಿಲ್ಲ, ಯಾವುದೇ ತಪ್ಪು ಮಾಡದೆ ಇದ್ದರೂ ಕೂಡ ಕುತಂತ್ರ ರಾಜಕಾರಣದಿಂದ ಶ್ರೀ ಷಣ್ಮುಖ ಶಿವಯೋಗಿಗಳ ಮಠದ ವಿಷಯದಲ್ಲಿ 22 ದಿನ ಸೆರೆಮನೆ ವಾಸ ಅನುಭವಿಸಿದೆ. 21 ಜನ ಅಮಾಯಕರು ಸೆರೆಮನೆ ವಾಸ ಮಾಡಿದ್ದಾರೆ ಇದು ಕುತಂತ್ರ ರಾಜಕಾರಣದಿಂದ ಮಾಡಿದರೆ ಇದರಲ್ಲಿ ನನ್ನದೇನು ವೈಯಕ್ತಿಕದಿಂದ ಸೆರಮನೆ ವಾಸ ಮಾಡಿಲ್ಲ ಎಂದು ಹೇಳಿದರು ಆದ್ದರಿಂದ ಕಲಬುರ್ಗಿ ಗ್ರಾಮೀಣ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.