‘ಬಿಹಾರದಲ್ಲಿ ಎನ್‌ಡಿಎ ದಾಖಲಿಸಿದ ಐತಿಹಾಸಿಕ ಗೆಲುವು ಡಬಲ್‌ ಎಂಜಿನ್ ಸರ್ಕಾರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ವಿಶ್ವಾಸದ ಮುದ್ರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣಿಸಿದ್ದಾರೆ. ಅಲ್ಲದೇ ‘ಬಿಹಾರ ಜನತೆ ಜಂಗಲ್ ರಾಜ್ಯವನ್ನು ತಿರಸ್ಕರಿಸಿರುವುಕ್ಕೆ ಸಾಕ್ಷಿ’ ಎಂದಿದ್ದಾರೆ.

ನವದೆಹಲಿ: ‘ಬಿಹಾರದಲ್ಲಿ ಎನ್‌ಡಿಎ ಕೂಟ ದಾಖಲಿಸಿದ ಐತಿಹಾಸಿಕ ಗೆಲುವು ಡಬಲ್‌ ಎಂಜಿನ್ ಸರ್ಕಾರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ವಿಶ್ವಾಸದ ಮುದ್ರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಬಣ್ಣಿಸಿದ್ದಾರೆ. ಅಲ್ಲದೇ ‘ಬಿಹಾರ ಜನತೆ ಜಂಗಲ್ ರಾಜ್ಯವನ್ನು ತಿರಸ್ಕರಿಸಿರುವುಕ್ಕೆ ಸಾಕ್ಷಿ’ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಂಗಲ್‌ ರಾಜ್ಯ ಮತ್ತು ಭ್ರಷ್ಟಾಚಾರ ತಿರಸ್ಕರಿಸಿದ್ದಾರೆ

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಿಹಾರದಲ್ಲಿ ಎನ್‌ಡಿಎ ಪಡೆದಿರುವ ಪ್ರಚಂಡ ಬಹುಮತವು ಜನರು ಮಹಾಘಟಬಂಧನದ ಜಂಗಲ್‌ ರಾಜ್ಯ ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ, ಎನ್‌ಡಿಎ ಕೂಟದ ಉತ್ತಮ ಆಡಳಿತ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಸ್ವೀಕರಿಸಿದ್ದಾರೆ ಎನ್ನುವುದನ್ನು ತೋರಿಸುತ್ತದೆ’ ಎಂದರು.

ಐತಿಹಾಸಿಕ ಬೆಂಬಲ

‘ಬಿಹಾರದಲ್ಲಿ ಎನ್‌ಡಿಎ ಕೂಟ ಜನರಿಂದ ಸ್ವೀಕರಿಸಿರುವ ಈ ಐತಿಹಾಸಿಕ ಬೆಂಬಲ, ಜನರು ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ನಿತೀಶ್‌ ಕುಮಾರ್‌ ಅವರ ಅಭಿವೃದ್ಧಿ, ಕಲ್ಯಾಣ ಯೋಜನೆಗಳ ಮೇಲೆ ಇಟ್ಟಿರುವ ವಿಶ್ವಾಸದ ಮುದ್ರೆ. ಈ ಅಭೂತಪೂರ್ವ ಜನಾದೇಶ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ನಮ್ಮ ಸಂಕಲ್ಪಕ್ಕೆ ನಿರ್ದಿಷ್ಟ ರೂಪ ನೀಡುತ್ತದೆ’ ಎಂದು ಹೇಳಿದರು.