ಸಂಭ್ರಮಾಚರಣೆಯಲ್ಲಿ ಬಿಹಾರ ಗೆಲುವಿನ ಹಿಂದಿನ 'MY' ಸೂತ್ರ ಹೇಳಿದ ಪ್ರಧಾನಿ ಮೋದಿ, 200ಕ್ಕೂ ಹೆಚ್ಚು ಸ್ಥಾನದ ಅಭೂತಪೂರ್ವ ಗೆಲುವಿನ ಬಳಿ ದೆಹಲಿಯಲ್ಲಿ ಸಂಭ್ರಮಾಚರಿಸಿದ ಮೋದಿ, ಭರ್ಜರಿ ಭಾಷಣ ಮಾಡಿದ್ದಾರೆ. 

ನವದೆಹಲಿ (ನ.14) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿ ಅಧಿಕಾರಕ್ಕೇರಿದೆ. ಮಹಾಘಟಬಂದನ್ ಭಾರಿ ಮುಖಭಂಗ ಅನುಭವಿಸಿದೆ. ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಜಯಬೇರಿ ಭಾರಿಸಿದೆ. ಗೆಲುವಿನ ಸಂಭ್ರಮವನ್ನು ಬಿಜೆಪಿ ನಾಯಕರು ದೆಹಲಿ ಪ್ರಧಾನಿ ಕಚೇರಿಯಲ್ಲಿ ಆಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಭಾಷಣ ಮಾಡಿದ ಮೋದಿ ಬಿಹಾರ ಗೆಲುವಿನ ಹಿಂದಿನ ರಹಸ್ಯ MY ಎಂದಿದ್ದಾರೆ. ಮೋದಿ ಹೇಳಿದ MY ಇದೀಗ ಭಾರಿ ಚರ್ಚೆಯಾಗುತ್ತಿದೆ.

ಏನಿದು MY ರಹಸ್ಯ ಸೂತ್ರ

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬಿಹಾರ ಗೆಲುವಿನ ಹಿಂದಿನ MY ಸೂತ್ರ ವಿವರಿಸಿದ್ದಾರೆ ಎಂ ಎಂದರೆ ವುಮೆನ್ (ಮಹಿಳೆ) ವೈ ಎಂದರೆ ಯೂತ್ (ಯುವ ಸಮೂಹ) ಮಹಿಳೆ ಹಾಗೂ ಯುವ ಸಮೂಹದ ನಾಡಿ ಮಿಡಿತ ಅರಿತು ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಇದೇ ಬಿಹಾರ ಗೆಲುವಿನ ಹಿಂದಿನ ಸೂತ್ರ ಎಂದು ಮೋದಿ ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಯನ್ನು ಜನರು ಮತ್ತೆ ಮತ್ತೆ ಆಯ್ಕೆ ಮಾಡುತ್ತಿದ್ದರೆ ಎಂದರೆ ಅಭಿವೃದ್ಧಿ ಮುಖ್ಯ ಕಾರಣ. ಜನರು ಹೊಸ ರಾಜಕೀಯ ಎದುರುನೋಡುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಬೇಕು, ಮೂಲಭೂತ ಸೌಕರ್ಯ ಬೇಕು. ಇದನ್ನು ಎನ್‌ಡಿಎ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಹಲವು ರಾಜ್ಯದಲ್ಲಿ ದಶಕಗಳ ಕಾಲ ಆಡಳಿತ ಮಾಡಿದೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸಂಖ್ಯೆ ಮುಟ್ಟಲು ಸಾಧ್ಯವಾಗಿಲ್ಲ. 2024ರ ಲೋಕಸಬೆ ಚುನಾವಣೆ ಬಳಿಕ 6 ರಾಜ್ಯದಲ್ಲಿ ವಿಧಾನಸಭೆ ಚನಾವಣೆ ನಡೆದಿದೆ. ಈ ಎಲ್ಲಾ ಚನಾವಣೆಯಲ್ಲಿ 100 ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಕಳೆದ 6 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಒಟ್ಟು ಸೀಟಿಗಿಂತ ಒಂದೊಂದು ವಿಧಾನಸಭೆಯಲ್ಲಿ ನಾವು ಗೆದ್ದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮುಸ್ಲಿಂ ಮಾವೋವಾದಿ ಕಾಂಗ್ರೆಸ್

ಚೌಕಿ ದಾರ್ ಚೋರ್, ಸಂಸತ್ ಸಮಯ ವ್ಯರ್ಥ ಮಾಡುವುದು, ಇವಿಎಂ ಸರಿಯಿಲ್ಲ, ಚುನಾವಣಾ ಆಯೋಗದ ಮೇಲೆ ಆರೋಪ, ಮತ ಗಳ್ಳತನ ಆರೋಪ, ಜಾತಿ, ಧರ್ಮದ ಮೇಲೆ ಜನರನ್ನು ಒಡೆಯುವುದು, ಇದೆಲ್ಲಾ ಕಾಂಗ್ರೆಸ್ ಕಾರ್ಯಗಳು. ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಬಳಿ ಯಾವುದೇ ವಿಷನ್ ಇಲ್ಲ. ಈಗ ಕಾಂಗ್ರೆಸ್ ಎಂಎಂಸಿ ಆಗಿದೆ. ಅಂದರೆ ಮುಸ್ಲಿಮ್ ಮಾವೋವಾದಿ ಕಾಂಗ್ರೆಸ್ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಜೊತೆಗಿರುವ ಮೈತ್ರಿ ಪಕ್ಷಗಳಿಗೆ ಈಗ ಮನದಟ್ಟಾಗುತ್ತಿದೆ. ಕಾಂಗ್ರೆಸ್ ನೆಗಟೀವ್ ರಾಜಕೀಯದಿಂದ ಇತರ ಪಕ್ಷಗಳು ಮುಳುಗುತ್ತಿದೆ. ಕಾಂಗ್ರೆಸ್ ಬಿಹಾರ ಚುನಾವಣೆಯಲ್ಲಿ ಸತಃ ಮುಳುಗುವುದು ಮಾತ್ರವಲ್ಲ, ಇತರರನ್ನು ಮುಳುಗಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಎಚ್ಚರಗೊಳ್ಳುವ ಸಮಯ ಇದೀಗ ಬಂದಿದೆ ಎಂದು ಮೋದಿ ಹೇಳಿದ್ದಾರೆ.

ಬಿಹಾರ ಯುವ ಸಮೂಹಕ್ಕೆ ಬಿಹಾರದಲ್ಲೇ ಕೆಲಸ ಮಾಡಲು ಇಲ್ಲೇ ಹೂಡಿಕೆಗಳು ಬರುತ್ತಿದೆ. ಪರ್ಯಟನೆ,ವಲಸೆಗೆ ಕಡಿವಾಣ ಬೀಳಲಿದೆ. ಬಿಹಾರದ ತೀರ್ಥಸ್ಥಾನ, ಪ್ರವಾಸಿ ತಾಣ ಸೇರಿದಂತೆ ಬಿಹಾರದ ಐತಿಹಾಸಿಕ ಸ್ಥಳಗಳ ನವೀಕರಣ ನಡೆಯಲಿದೆ. ಬಿಹಾರದಲ್ಲಿ ಹೂಡಿಕೆ ಮಾಡಲು ಇದು ಉಪಯುಕ್ತ ಸಮಯ. ನಾನು ಎಲ್ಲಾ ಹೂಡಿಕೆದಾರರಿಗೆ ಈ ಮೂಲಕ ಹೇಳುತ್ತಿರುವುದೇನೆಂದರೆ, ಇದು ಬಿಹಾರದಲ್ಲಿ ಹೂಡಿಕೆ ಮಾಾಡಲು ಉತ್ತಮ ಸಮಯ ಎಂದಿದ್ದಾರೆ. ನಿಮ್ಮ ಭರವಸೆಕ್ಕೆ ತಕ್ಕ ಅಭಿವೃದ್ಧಿಯಾಗಲಿದೆ. ನಿಮ್ಮ ಪ್ರೀತಿಯಿಂದ ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ. ನಿಮ್ಮ ಕನಸು, ನನ್ನ ಸಂಕಲ್ಪವಾಗಿದೆ. ನಿಮ್ಮ ಆಕಾಂಕ್ಷೆ ನನ್ನ ಪ್ರೇರಣೆಯಾಗಿದೆ. ನಾವು ಜೊತೆಯಾಗಿ, ಸಮೃದ್ಧ ಬಿಹಾರ ನಿರ್ಮಾಣ ಮಾಡೋಣ ಎಂದು ಮೋದಿ ಹೇಳಿದ್ದಾರೆ.

Scroll to load tweet…