ಇಎಸ್‌ಐಸಿ ಆಸ್ಪತ್ರೆ ಸಮುಚ್ಚಯವನ್ನು ಮೇಲ್ದರ್ಜೆಗೇರಿಸಿ ಏಮ್ಸ್‌ ದರ್ಜೆ ನೀಡಬೇಕು. ತೊಗರಿಗೆ ಹೆಚ್ಚಿನ ಪ್ರೋತ್ಸಾಹ ಘೋಷಿಸಬೇಕು. ಇನ್‌ಲ್ಯಾಂಡ್‌ ಕಂಟೈನರ್‌ ಡೀಪೋ ಸ್ಥಾಪಿಸಬೇಕು. ರಫ್ತಿಗೆ ಅವಕಾಶ ನೀಡಬೇಕು. ನಿಮ್ಜ್‌ ಅನುಷ್ಠಾನಕ್ಕೆ ಅನುದಾನ ಮೀಸಲಿಡಬೇಕು ಎಂಬಿತ್ಯಾದಿ ಬೇಡಿಕೆಗಳು ಹಾಗೇ ಬೇಡಿಕೆಗಳಾಗಿಯೇ ಉಳಿದಿವೆ. ಕೇಂದ್ರ ಇವುಗಳನ್ನು ಕಡೆ ಗಣಿಸಿದೆ: ಅಜಯ್‌ ಸಿಂಗ್‌ 

ಕಲಬುರಗಿ(ಫೆ.03): ಕಲ್ಯಾಣ ಕರ್ನಾಟಕಕ್ಕೆ ಕೇಂದ್ರದ ಬಜೆಟ್‌ನಲ್ಲಿ ಒಂದೂ ಯೋಜನೆ ದಕ್ಕಿಲ್ಲ. ರೇಲ್ವೆ, ರಸ್ತೆ ಸೇರಿದಂತೆ ಮೂಲ ಸವಲತ್ತಿನ ಹಲವಾರು ಬೇಡಿಕೆಗಳು ನಮ್ಮದಾಗಿದ್ದರೂ ಕೇಂದ್ರ ಅವುಗಳನ್ನೆಲ್ಲ ಕಡೆಗಣಿಸಿದೆ. ಮಳಖೇಡಕ್ಕೆ ಬಂದು ಹೋಗಿದ್ದ ಪ್ರಧಾನಿ ಕಲ್ಯಾಣಕ್ಕೆ ಕೊಡುಗೆ ನೀಡುವ ನಮ್ಮ ಭರವಸೆ ಠುಸ್‌ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇಎಸ್‌ಐಸಿ ಆಸ್ಪತ್ರೆ ಸಮುಚ್ಚಯವನ್ನು ಮೇಲ್ದರ್ಜೆಗೇರಿಸಿ ಏಮ್ಸ್‌ ದರ್ಜೆ ನೀಡಬೇಕು. ತೊಗರಿಗೆ ಹೆಚ್ಚಿನ ಪ್ರೋತ್ಸಾಹ ಘೋಷಿಸಬೇಕು. ಇನ್‌ಲ್ಯಾಂಡ್‌ ಕಂಟೈನರ್‌ ಡೀಪೋ ಸ್ಥಾಪಿಸಬೇಕು. ರಫ್ತಿಗೆ ಅವಕಾಶ ನೀಡಬೇಕು. ನಿಮ್ಜ್‌ ಅನುಷ್ಠಾನಕ್ಕೆ ಅನುದಾನ ಮೀಸಲಿಡಬೇಕು ಎಂಬಿತ್ಯಾದಿ ಬೇಡಿಕೆಗಳು ಹಾಗೇ ಬೇಡಿಕೆಗಳಾಗಿಯೇ ಉಳಿದಿವೆ. ಕೇಂದ್ರ ಇವುಗಳನ್ನು ಕಡೆಗಣಿಸಿದೆ ಎಂದು ದೂರಿದ್ದಾರೆ.

ಕೇಂದ್ರ ಬಿಜೆಟ್‌ನಲ್ಲಿ ಕನ್ನಡಿಗರಿಗೆ ಮೋಸ: ಪ್ರಿಯಾಂಕ್‌ ಖರ್ಗೆ

ಉದ್ಯೋಗ ಖಾತ್ರಿ, ಶಿಕ್ಷಣ, ಜನಾರೋಗ್ಯ, ಅಂಗನವಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣದಂತಹ ಆದ್ಯತಾ ವಲಯಗಳಿಗೆ ಅನುದಾನ ಕಡಿತ ಮಾಡುವ ಮೂಲಕ ಬಜೆಟ್‌ ಕಲ್ಯಾಣವನ್ನೇ ಮರೆತಿದೆ. ರೇಲ್ವೆಗೆ ನೀಡಿರುವ ಅನುದಾನದಲ್ಲಿ ಕಲಯಾಣ ನಾಡು, ಕರುನಾಡಿಗೆ ಅದೆಷ್ಟುಹಣ ದಕ್ಕಿದೆಯೋ ಇನ್ನೂ ವಿವರಗಳು ಹೊರಬಿದ್ದಿಲ್ಲ. ಕಲ್ಯಾಣದ ಜನರ ಬಡಿಕೆಗಳಿಗೆ ಡಬ್ಬಲ್‌ ಇಂಜಿನ್‌ ಸರ್ಕಾರ ಕಡೆಗಣಿಸಿದೆ.

ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಐದಕ್ಕೇ ಐದು ಸ್ಥಾನದಲ್ಲಿ ಬಿಜೆಪಿ ಸಂಸದರೇ ಇದ್ದರೂ ಸಹ ಇಲ್ಲಿ ಬಜೆಟ್‌ ಕೊಡುಗೆ ಶೂನ್ಯ. ಡಬ್ಬಲ್‌ ಇಂಜಿನ್‌ ಸರ್ಕಾರ ಹಿಂದುಳಿದ ಪ್ರದೇಶವನ್ನು ಸಂಪೂರ್ಣ ಅಲಕ್ಷಿಸಿದೆ. ಇಲ್ಲಿನ ಜನತೆ ಬಿಜೆಪಿಗೆ ಆಯ್ಕೆ ಮಾಡಿದ್ದಕ್ಕೆ ಪರದಾಡುವಂತಾಗಿದೆ. ರೇಲ್ವೆ, ರಸೆಯಂತಹ ಮೂಲ ಸವಲತ್ತಿನ ಕೆಲಸಗಳೂ ಆಗದೆ ಹಾಗೇ ಬಿದ್ದುಕೊಂಡಿದದರಿಂದ ಜನ ನಿತ್ಯವೂ ಪರದಾಡುವಂತಾಗಿದೆ. ಕೇಂದ್ರದ ಬಜೆಟ್‌ ಕಲ್ಯಾಣಕ್ಕೆ ಸು ಆನುಭವ ನೀಡದೆ ಕಡೆಗಣಿಸಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.