ಬೆಂಗ​ಳೂ​ರು (ಅ.11): ‘ರಾಜ​ರಾ​ಜೇ​ಶ್ವರಿ ನಗರ ವಿಧಾ​ನ​ಸಭಾ ಉಪ​ಚು​ನ​ವ​ಣೆ ಜೆಡಿಎಸ್‌ ಅಭ್ಯರ್ಥಿಯನ್ನು ಭಾನುವಾರ ಅಂತಿಮಗೊಳಿಸಲಾಗುವುದು. ಇಂದು ಅಭ್ಯರ್ಥಿಯು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಸುದ್ದಿ​ಗಾ​ರರ ಜತೆ ಶನಿ​ವಾರ ಅವರು ಮಾತ​ನಾಡಿ, ‘ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭಾ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಎರಡು ಕ್ಷೇತ್ರದಲ್ಲಿ ಪಕ್ಷವು ತನ್ನದೇ ಭದ್ರತೆಯನ್ನು ಹೊಂದಿದ್ದು, ಅದನ್ನು ಕಳೆದುಕೊಳ್ಳುವುದಿಲ್ಲ’ ಎಂದ​ರು. 

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಇಲ್ಲಿವೆ 30 ನಾಯಕರ ಹೆಸ್ರು..!

‘ಕಾಂಗ್ರೆಸ್‌ ಪಕ್ಷವು ಹಲವು ಮಂದಿಯನ್ನು ಉಸ್ತುವಾರಿ ಹಾಕಿದೆ. ಆ ರೀತಿ ನಾವು ಮಾಡುವುದಿಲ್ಲ. ಕಾರ್ಯಕರ್ತರನ್ನಿಟ್ಟುಕೊಂಡು ಪಕ್ಷದ ಗೌರವ ಉಳಿಸಲು ಹೋರಾಟ ಮಾಡುತ್ತೇವೆ. ಆರ್‌.ಆರ್‌.ನಗರದಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಲಾಗಿದೆ. 

ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಬಗ್ಗೆ ಅವರಿಗೆ ತೀರ್ಮಾನ ಬರಲು ತಿಳಿಸಿದ್ದೇವೆ. ಭಾನುವಾರ ಅಭ್ಯರ್ಥಿಯನ್ನು ಅಂತಿಮಗೊಳಿಸಿದ ಬಳಿಕ ಸೋಮವಾರ ಓರ್ವ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ​ರು’ ಎಂದು ಹೇಳಿದರು.