ನವದೆಹಲಿ, (ಅ.10):   ಬಿಹಾರ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಕಾಂಗ್ರೆಸ್ ನ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನ ಸಿದ್ಧ ಪಡೆಸಿದ್ದು, ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮನಮೋಹನ್ ಸಿಂಗ್ ಸೇರಿದ್ದಾರೆ.

ಶನಿವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 30 ನಾಯಕರ ಪಟ್ಟಿಯಲ್ಲಿ ಗುಲಾಂ ನಬಿ ಆಜಾದ್, ಸಚಿನ್ ಪೈಲಟ್, ಶತ್ರುಘ್ನ ಸಿನ್ಹಾ ಸೇರಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಎಲೆಕ್ಷನ್‌ಗಾಗಿ ಮಾರ್ಗಸೂಚಿಗಳನ್ನ ಪ್ರಕಟಿಸಿದ ಚುನಾವಣೆ ಆಯೋಗ

ಈ ಪಟ್ಟಿಯಲ್ಲಿ ಶಕ್ತಿಸಿನ್ಹ ಗೋಹಿಲ್, ತಾರಿಕ್ ಅನ್ವರ್, ಶಕೀಲ್ ಅಹ್ಮದ್, ಕೀರ್ತಿ ಆಜಾದ್, ನಿಖಿಲ್ ಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ, ಅನಿಲ್ ಶರ್ಮಾ, ಪ್ರಮೋದ್ ತಿವಾರಿ, ಅಖಿಲೇಶ್ ಪ್ರಸಾದ್ ಸಿಂಗ್, ಉದಿತ್ ರಾಜ್ ಮತ್ತು ರಾಜ್ ಬಬ್ಬರ್ ಇದ್ದಾರೆ.

ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಬಿಹಾರ ಚುನಾವಣೆಯಲ್ಲಿ ಕನಿಷ್ಠ ಆರು ರ್ಯಾಲಿಗಳನ್ನ ನಡೆಸಲಿದ್ದು, ಪ್ರತಿ ಹಂತದಲ್ಲಿ ಎರಡು ರ್ಯಾಲಿಗಳನ್ನ ನಡೆಸಲಿದ್ದಾರೆ. 

ಇನ್ನು 243 ಸದಸ್ಯ ಸ್ಥಾನಗಳ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7 - ಮತ್ತು ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.