ಬೆಂಗಳೂರು[ಜ.04]  ನಮ್ಮ ಕೈಯಲ್ಲೇ ಅಧಿಕಾರ ಇದ್ರೂ  ನಮ್ಮವರಿಗೆ ಏನೂ ಮಾಡೋಕೆ ಆಗುತ್ತಿಲ್ಲ ಎನ್ನುವ ನೋವಿನಲ್ಲಿ ತಂದೆ ದೇವೇಗೌಡರು ಕಣ್ಣೀರು ಹಾಕಿರಬಹುದು ಎಂದು ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವಿನಲ್ಲಿ ಅವರು ಹೀಗೆ ಮಾತಾಡಿದ್ದಾರೆ. ನಮ್ಮ ಬಳಿ ಏನೂ ನೋಟು ಪ್ರಿಂಟು ಮಾಡುವ ಯಂತ್ರ ಇಲ್ಲ. ಅಧಿಕಾರ ಇದ್ರೂ ನಮ್ಮ ಜನಕ್ಕೆ ಅನುಕೂಲ ಮಾಡಿಕೊಡಲಾಗ್ತಿಲ್ಲ ಅನ್ನೋ ನೋವಿದೆ ಎಂದರು.

ಕಾರ್ಯಕರ್ತರ ಸಭೆಯಲ್ಲಿ ಗಳಗಳನೇ ಅತ್ತ ಮಾಜಿ ಪ್ರಧಾನಿ

ದೇವೇಗೌಡರು ಯಾವತ್ತೂ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿದವರಲ್ಲ. ಹಾಗಾಗಿ ಅದೇ ನೋವಿನಿಂದ ಕಣ್ಣೀರು ಹಾಕಿದ್ದಾರೆ. ಮುಂದೆ ಎಲ್ಲವೂ ಸರಿ ಆಗಲಿದೆ ಎಂದು ರೇವಣ್ಣ ಹೇಳಿದರು.