ಬೆಂಗಳೂರು[ಜ.03]  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಣ್ಣೀರು ಹಾಕಿದ್ದಾರೆ. ರೈತರ ಸಾಲ ಮನ್ನಾ ವಿಷಯದಲ್ಲಿ ನನ್ನ ಮಗ ತನ್ನ ಮಗನಾಣೆಗೂ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾನೆ. ಇರುವನೊಬ್ಬ ಮಗ. ಯಾರಿಗೋಸ್ಕರ ಮಗನ ಮೇಲೆ ಆಣೆ ಮಾಡಬೇಕು ಎನ್ನುತ್ತಾ ಗೌಡರು ಗದ್ಗದಿತರಾಗಿದ್ದಾರೆ.

ನೀವೇ ಅಧ್ಯಕ್ಷರಾಗಿ ಮುಂದುವರಿರಿ: ಹಳ್ಳಿ ಹಕ್ಕಿ ತಲೆ ಸವರಿದ ದೇವೇಗೌಡ್ರು

ಕುಮಾರಸ್ವಾಮಿಯವರಿಗೆ ಸರ್ಕಾರ ನಡೆಸುವಲ್ಲಿ ಎಷ್ಟು ನೋವಿದೆ ಅಂತಾ ಗೊತ್ತಿದೆ. ಅದರೆ ಅವರು ಆ ನೋವನ್ನು ಸಹಿಸಿಕೊಳ್ಳಲೇಬೇಕು.ಇಲ್ಲವಾದರೆ ಗುರಿಮುಟ್ಟಲು ಸಾಧ್ಯವಿಲ್ಲ. ಜಾತ್ಯತೀತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಹಿರಿಯಣ್ಣನಂತೆ. ಪ್ರಾದೇಶಿಕ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರ ವಿರುದ್ದವೂ ದೂರಲು ಹೋಗಲ್ಲ ಎಂದು ಗೌಡರು ಹೇಳಿದರು.

ಬಿಜೆಪಿ ಮತ್ತು ಬಿಎಸ್ ಯಡಿಯೂರಪ್ಪ ಮೇಲೆ ವಾಗ್ದಾಳಿ ಮಾಡಿದ ಗೌಡರು..ಯಾವ ಕಾರಣ ಇಟ್ಟುಕೊಂಡು ಅಪ್ಪ ಮಕ್ಕಳನ್ನು ಮುಗಿಸುತ್ತೇವೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ. ನಾವು ಅಂಥ ಪಾಪ ಏನು ಮಾಡಿದ್ದೇವೆ? ಎಂಧು ಪ್ರಶ್ನೆ ಮಾಡಿದರು.