* ಜೆಡಿಎಸ್ ಸೋಲಿಸುವುದೇ ಕಾಂಗ್ರೆಸ್ ಉದ್ದೇಶ* ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಅಲ್ಲ, ಬಿಎಸ್‌ವೈ* 2023ರಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ನಿವೃತ್ತಿ
ಬೆಂಗಳೂರು(ಜೂ.04): ರಾಜ್ಯಸಭೆಗೆ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲೆಹರ್‌ಸಿಂಗ್ ಪಕ್ಷದ ಅಭ್ಯರ್ಥಿಯಲ್ಲ, ಬದಲಿಗೆ ಯಡಿಯೂರಪ್ಪ ಅಭ್ಯರ್ಥಿ. ಹೀಗಾಗಿ ಜೆಡಿಎಸ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಲು ಕಾಂಗ್ರೆಸ್ ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನವರು ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಾರೋ? ದಿನಗಳು ಕಳೆದಂತೆ ಚರಿತ್ರೆ ಹೊರ ಬರುತ್ತಿವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಾವ ಆತ್ಮಸಾಕ್ಷಿ? ನನಗೆ ಬೆಂಬಲ ಕೊಡುತ್ತೇನೆ ಎಂದರಲ್ಲಾ, ಪರಿಷತ್‌ನಲ್ಲಿಯೇ ನನಗೆ ಬೆಂಬಲ ನೀಡಲಿಲ್ಲ. ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸಲು ಎರಡನೇ ಅಭ್ಯರ್ಥಿ ಹಾಕಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಬೇರೆ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ, ರಾಜ್ಯಸಭೆ ಚುನಾವಣೆ ಗೆಲ್ತೇವೆ: ಸಿಎಂ ಬೊಮ್ಮಾಯಿ
‘2023ರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಜೆಡಿಎಸ್‌ಗೆ ಬರುವ ವಿಶ್ವಾಸ ಇದೆ. ಒಂದು ವೇಳೆ ಹೆಚ್ಚು ಸ್ಥಾನ ಬರದಿದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ. ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ. ಕಾಂಗ್ರೆಸ್‌ನವರು ಇಂತಹ ಚಾಲೆಂಜ್ ತೆಗೆದುಕೊಳ್ಳುತ್ತಾರಾ?’ ಎಂದು ಸವಾಲು ಹಾಕಿದರು.
