ಬೇರೆ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ, ರಾಜ್ಯಸಭೆ ಚುನಾವಣೆ ಗೆಲ್ತೇವೆ: ಸಿಎಂ ಬೊಮ್ಮಾಯಿ
* ಬಿಜೆಪಿ ಮತ್ತು ಜೆಡಿಎಸ್ ಬಳಿ ಸಮಾನ ಮತಗಳಿವೆ, ಕಾಂಗ್ರೆಸ್ ಬಳಿ ಮಾತ್ರ ಕಡಿಮೆ ಇವೆ
* ಬಿಜೆಪಿ ಬಳಿ ದ್ವಿತೀಯ ಪ್ರಾಶಸ್ತ್ಯ ಮತಗಳೂ ಇವೆ
* ಶಾಲಾ ಮಕ್ಕಳಿಗೆ ತಕ್ಷಣ ಪಠ್ಯಪುಸ್ತಕ ಪೂರೈಕೆ ಮಾಡುವಂತೆ ಆದೇಶ ಮಾಡಿದ್ದೇನೆ
ಮಣಿಪಾಲ(ಜೂ.01): ಬೇರೆ ಪಕ್ಷಗಳಲ್ಲಿಯೂ ನಮಗೆ ಬಹಳ ಮಂದಿ ಗೆಳೆಯರಿದ್ದಾರೆ, ಆದ್ದರಿಂದ ರಾಜ್ಯದಲ್ಲಿ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಸರಳವಾಗಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಬಳಿ ಸಮಾನ ಮತಗಳಿವೆ, ಕಾಂಗ್ರೆಸ್ ಬಳಿ ಮಾತ್ರ ಕಡಿಮೆ ಇವೆ. ಜೊತೆಗೆ ಬಿಜೆಪಿ ಬಳಿ ದ್ವಿತೀಯ ಪ್ರಾಶಸ್ತ್ಯ ಮತಗಳೂ ಇವೆ. ಅವುಗಳನ್ನು ಲೆಕ್ಕ ಹಾಕಿದರೇ ಬಿಜೆಪಿ ಮೇಲ್ನೋಟಕ್ಕೆ ಸರಳ ಬಹುಮತ ಪಡೆಯಲಿದೆ ಎಂದರು.
ನಾಡಗೀತೆ ತಿರುಚಿದ ಬಗ್ಗೆ ಪತ್ರ ಗಂಭೀರವಾಗಿ ಪರಿಗಣನೆ: ಸಿಎಂ
ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿಯೂ ಜೆಡಿಎಸ್‌ನಲ್ಲಿಯೂ ನಮಗೆ ಬಹಳ ಮಂದಿ ಗೆಳೆಯರಿದ್ದಾರೆ, ಚುನಾವಣೆ ನಡೆಯಲಿದೆ, ಅಷ್ಟರಲ್ಲಿ ಏನೇನು ಬೆಳವಣಿಗೆಳಾಗುತ್ತೋ ನೋಡೋಣ. ಬೇರೆ ಪಕ್ಷದ ಗೆಳೆಯರೊಂದಿಗೆ ಇದುವರೆಗೆ ಯಾವುದೇ ಮಾತುಕತೆ ನಡೆಸಿಲ್ಲ, ನಾಮಪತ್ರ ಸಲ್ಲಿಸಿ ನೇರವಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.
ಶಾಲಾ ಮಕ್ಕಳಿಗೆ ತಕ್ಷಣ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವಂತೆ ಇವತ್ತೇ ಆದೇಶ ಮಾಡಿದ್ದೇನೆ ಎಂದ ಸಿಎಂ, ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.