ಕೋವಿಡ್ ಬಂದ್ರೆ ದುಡ್ಡು ಮಾಡಬಹುದು ಅಂತ ಸುಧಾಕರ್ ಮುಖದ ಮೇಲೆ ನಗು ಬರುತ್ತೆ: ಸಿಎಂ ಇಬ್ರಾಹಿಂ
ಸಾವಿರಾರು ಜನರು ಸತ್ತರೂ ಲಕ್ಷ ರೂ. ಕೊಡಲಿಲ್ಲ. ಸತ್ತವರ ದುಡ್ಡು ತಿಂದ ಪಾಪಿಗಳು ಇವರು. ಧಮ್ ಇದ್ರೆ ಕೋವಿಡ್ ಭ್ರಷ್ಟಾಚಾರ ಬಗ್ಗೆ ವಿಚಾರಣೆ ನಡೆಯಲಿ, ಸಾಕ್ಷಿಗಳನ್ನ ನಾವು ಕೊಡುತ್ತೇವೆ: ಸಿಎಂ ಇಬ್ರಾಹಿಂ
ರಾಯಚೂರು(ಡಿ.28): ಕೋವಿಡ್ ಬಂತು ಅಂದ್ರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮುಖದ ಮೇಲೆ ನಗೆ ಬರುತ್ತದೆ. ಯಾಕಂದ್ರೆ ದುಡ್ಡು ಮಾಡಬಹುದು ಅಂತ ಅವರು ಮುಖದಲ್ಲಿ ನಗು ಬರುತ್ತದೆ. ಸಾವಿರಾರು ಜನರು ಸತ್ತರೂ ಲಕ್ಷ ರೂ. ಕೊಡಲಿಲ್ಲ. ಸತ್ತವರ ದುಡ್ಡು ತಿಂದ ಪಾಪಿಗಳು ಇವರು. ಧಮ್ ಇದ್ರೆ ಕೋವಿಡ್ ಭ್ರಷ್ಟಾಚಾರ ಬಗ್ಗೆ ವಿಚಾರಣೆ ನಡೆಯಲಿ, ಸಾಕ್ಷಿಗಳನ್ನ ನಾವು ಕೊಡುತ್ತೇವೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆಯಲ್ಲಿ 10 ರೂ. ಹಾಲಿಗಾಗಿ ಬಡವರು ಒದ್ದಾಡಿದ್ದರು. ಕೋವಿಡ್ ನಮ್ಮ ಪಂಚರತ್ನ ಯಾತ್ರೆ ನಿಲ್ಲಿಸಲು ಒಂದು ಷಡ್ಯಂತ್ರವಾಗಿದೆ. ಕೋವಿಡ್ ಎಲ್ಲರಿಗೂ ಬಂದು ಹೋಗಿದೆ. ನಾವು, ಜೋಳ, ಮೆಂತ್ಯೆ, ಮೆಣಸಿನಕಾಯಿ ತಿನ್ನುವ ಮಂದಿ ನಾವು. ನಾಲ್ಕು ನಾಲ್ಕು ಜೋಳದ ರೊಟ್ಟಿ ತಿನ್ನುವರು ನಾವು. ಅಮೆರಿಕದಂತೆ ಐ ಲವ್ ಮೀ, ಯು ಲವ್ ಮೀ ಅಂತ ಬೆಡ್ ತಿನ್ನುವರು ಅಲ್ಲ ಅಂತ ಲೇವಡಿ ಮಾಡಿದ್ದಾರೆ.
ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿ.ಎಂ.ಇಬ್ರಾಹಿಂ
ಕೇಶವ ಕೃಪಾದಲ್ಲಿ ಇವರ ಎಲ್ಲಾ ಬೀಜ ಮುರಿದು ಕೂಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಏನು ಅಧಿಕಾರ ಇಲ್ಲ. ಮೇಲಿನಿಂದ ಆರ್‌ಎಸ್‌ಎಸ್‌ನವರು ಕಂಟ್ರೋಲ್ ಮಾಡುತ್ತಿದ್ದಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದಾಗ ನನ್ನ ಸೆಕ್ರೆಟರಿ ಇದ್ದವರು ಬೊಮ್ಮಾಯಿ ಅಂತ ಹೇಳಿದ್ದಾರೆ.
ಹುಬ್ಬಳ್ಳಿ ಮೈದಾನ ವಿಚಾರ ಪ್ರಸ್ತಾಪಿಸಿದ ಸಿಎಂ ಇಬ್ರಾಹಿಂ, ಹುಬ್ಬಳ್ಳಿ ಸಮಾಧಿ ಮುರಿದು ಹಾಕಿದ್ರು, 300 ವರ್ಷದ ಹಳೆಯ ಸಮಾಧಿ ಅದು. ಸಮಾಧಿ ಬಳಿ ಪೋಲಿಸ್ ಕಮಿಷನರ್ ಕಣ್ಣೀರು ಹಾಕಿದ್ದಾರೆ. ಸಿಎಂ ಬೊಮ್ಮಾಯಿ ತಪ್ಪು ಆಯ್ತು ಅಂತ ಒಪ್ಪಿಕೊಂಡಿದ್ದಾರೆ. ಬರೀ ಶಾಸಕ ಬೆಲ್ಲದ್ ಜಾಗ ಉಳಿಸಲು ಸಮಾಧಿ ಕೆಡವಿದರು. ಆ ಜಾಗದಿಂದ 30 ಅಡಿ ತೆಗೆದುಕೊಂಡರೇ ಸಮಾಧಿ ಒಡೆಯುವ ಅವಶ್ಯಕತೆ ಇರಲಿಲ್ಲ. ಯಾವುದೇ ಸಮಾಜದ ಸಮಾಧಿ ಇರಲಿಲ್ಲ ಒಡೆಯಬಾರದು. ಬೊಮ್ಮಾಯಿ ಅವರ ಪಕ್ಷ ಇದೇ ಲಾಸ್ಟ್ ಇನ್ನು ಮುಂದೆ ಕರ್ನಾಟಕದಲ್ಲಿ ಬಿಜೆಪಿಯೂ ಬರಲ್ಲ ಎಂದ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.