ನಾನು ಸಾಬ್ರು ಜಂಗಮರ ಗಲಾಟೆ ಮಧ್ಯ ಹೋಗಬಾರದು. ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವರೇ ಕೈ ಹಾಕಿ ಸುಟ್ಟು​ಕೊಂಡಿ​ದ್ದಾರೆ. ಅದಕ್ಕೆ ನಾನು ಮಾತನಾಡುವು​ದಿಲ್ಲ ಎಂದು ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ ಪ್ರತಿ​ಕ್ರಿಯೆ ನೀಡಿ​ದರು.

ರಾಮ​ನ​ಗ​ರ (ಸೆ.05): ನಾನು ಸಾಬ್ರು ಜಂಗಮರ ಗಲಾಟೆ ಮಧ್ಯ ಹೋಗಬಾರದು. ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವರೇ ಕೈ ಹಾಕಿ ಸುಟ್ಟು​ಕೊಂಡಿ​ದ್ದಾರೆ. ಅದಕ್ಕೆ ನಾನು ಮಾತನಾಡುವು​ದಿಲ್ಲ ಎಂದು ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ ಪ್ರತಿ​ಕ್ರಿಯೆ ನೀಡಿ​ದರು. ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಈ ಹಿಂದೆ ರಾಮಚಂದ್ರ ಮಠದ ಶ್ರೀಗಳ ಮೇಲೆ ಆರೋಪ ಬಂದಾಗ ಆಗಿನ ಸರ್ಕಾರ ಏನು ಮಾಡಿತ್ತು. ಈಗಾಗಲೇ ಮುರುಘಾ ಶ್ರೀಗಳ ಬಂಧನವಾಗಿದೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ ಅನ್ನುವುದಕ್ಕೆ ಇದೇ ಉದಾಹರಣೆ ಎಂದರು.

ರಾಮಚಂದ್ರಪುರ ಮಠದವರ ಮೇಲೆ ನೇರವಾದ ಆಪಾದನೆ ಬಂದಾಗ ಎಫ್‌ಐಆರ್‌ ಹಾಕಿ ಅರೆಸ್ಟ್‌ ಮಾಡ​ಲಿಲ್ಲ. ನಾವು ಏಕೆಂದು ಪ್ರಶ್ನೆ ಮಾಡ​ಲಿಲ್ಲ. ಆಗಲೂ ನಿಸ್ಪಕ್ಷ​ಪಾ​ತ​ವಾಗಿ ತನಿಖೆ ಮಾಡಿ ಎಂದಿದ್ದೆ. ಆದರೆ, ಕೊನೆಗೆ ಆ ಕೇಸ್‌ ಮುಗಿಯಿತು. ಅವರು ಬ್ರಾಹ್ಮಣರು, ನಾನು ಮುಸ್ಲಿಂ. ಆವತ್ತು ಸಹಾ ನಾನು ಆ ಸ್ವಾಮಿಯನ್ನು ನೋಡಲಿಲ್ಲ, ಆ ಪೀಠ ನೋಡಿದ್ವಿ ಎಂದು ಹೇಳಿ​ದರು. ಮುರುಘಾ ಶ್ರೀ ಪ್ರಕ​ರ​ಣ​ದಲ್ಲಿ ಈಗಾ​ಗ​ಲೇ ಬಂಧ​ನ​ವಾ​ಗಿದೆ. ಸ್ವಾಮೀ​ಜಿಗ​ಳನ್ನು ಪೊಲೀಸ್‌ ಕಸ್ಟ​ಡಿಗೆ ಕೊಟ್ಟಿ​ದ್ದು, ವಿಚಾರಣೆ ನಡೆ​ಯು​ತ್ತಿದೆ. ಶ್ರೀಗಳು ತಪ್ಪು ಮಾಡಿ​ದ್ದರೆ ಶಿಕ್ಷೆ ಆಗ​ಬೇಕು. ಆದರೆ, ಟ್ರೈಲ್‌ ಮಾಡೋಕೆ ಹೋಗ​ಬೇಡಿ. ಪರ ವಿರೋ​ಧವೂ ಬೇಡ. ನಿಸ್ಪ​ಕ್ಷ​ಪಾತ ತನಿಖೆ ಮಾಡುವುದರಲ್ಲಿ ಪೊಲೀ​ಸ​ರು ದಕ್ಷ​ರಿ​ದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿ​ಸಿ​ದ​ರು.

ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ಬಿಜೆಪಿ ಪಾಲು, ಚಿಂಚನಸೂರ್ ಅವಿರೋಧ ಆಯ್ಕೆ

ಮಹಿಳಾ ಪೊಲೀಸರನ್ನು ನೇಮಿಸಿ ಬಾಲಕಿಯರಿಂದಲೂ ಹೇಳಿಕೆ ಪಡೆಯಲಿ. ಮಠದ ಆಡ​ಳಿ​ತಾ​ಧಿ​ಕಾರಿ ಬಸವರಾಜ್‌ ಬಗ್ಗೆ ಕೂಡ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲರ ವಿಚಾರಣೆ ನಡೆಯಲಿ ಎಂಬುದು ನಮ್ಮ ಅಪೇಕ್ಷೆ. ಸ್ವಾಮೀಜಿ ಪರ ವಿರೋಧ ನಮ್ಮದೇನೂ ಇಲ್ಲ. ಆ ಮಠಕ್ಕೆ ಬಸವರಾಜ ಉತ್ತರಾಧಿಕಾರಿ ಆಗಬೇಕಿತ್ತು. ಆದರೆ, ಅವನು ಪ್ರೀತಿಸಿ ವಿವಾಹವಾದ ಕಾರಣ ಆ ಸ್ಥಾನ ತಪ್ಪಿತು. ಅದಕ್ಕಾಗಿ ಬಸವರಾಜ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ಮಾಡಿದರು. ಆಗಿನಿಂದಲೂ ಈ ರೀತಿಯ ಷಡ್ಯಂತ್ರ ನಡೆಯುತ್ತಿದೆ. ನಾನು ಮುಸ್ಲಿಂ ಆದರೂ ಆ ಮಠವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ನಾನು ಸಿರಿಗೆರೆ ಮಠದಲ್ಲಿ ಓದಿದ್ದೆ. ಜಂಗ​ಮರ ಗಲಾ​ಟೆ​ಯಲ್ಲಿ ಕೈ ಹಾಕ​ಬಾ​ರ​ದೆಂದು ಮೌನ​ವಾ​ಗಿ​ದ್ದೇನೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ: ಅಲ್ಪಸಂಖ್ಯಾತರು ಹಿಂದಿನಿಂದಲೂ ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುತ್ತಾ ಬಂದಿದ್ದು, ಮುಂದೆಯೂ ಬೆಂಬಲಿಸಲಿದ್ದಾರೆ. 2023ರ ಚುನಾವಣೆಯ ನಂತರ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ನಗರದ 27ನೇ ವಾರ್ಡ್‌ನ ಜೆಡಿಎಸ್‌ ನಗರಸಭೆ ಸದಸ್ಯೆ ನಿಗಾರ್‌ ಬೇಗಂ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 2023ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ದೇವೇಗೌಡ ಬಳಿ ಇರೋದು 4 ಪಂಚೆ, ಜುಬ್ಬಾ, ಸ್ವಂತ ಮನೆ ಇಲ್ಲ: ಇಬ್ರಾಹಿಂ

ಟಿಪ್ಪು ಸುಲ್ತಾನ್‌ ಕಾಲದಿಂದಲೂ ಅಲ್ಪಸಂಖ್ಯಾತರಿಗೂ, ಒಕ್ಕಲಿಗರಿಗೂ ಅವಿನಾಭಾವ ಸಂಬಂಧವಿದೆ. ಸುಲ್ತಾನರು ತನ್ನ ಮಕ್ಕಳನ್ನು ಅಡವಿಟ್ಟಾಗ ಒಕ್ಕಲಿಗರೇ ಅವರ ಮಕ್ಕಳನ್ನು ಬಿಡಿಸಲು ಹಣ ನೀಡಿದ್ದರು. ಮಣ್ಣಿನ ಮಗ ದೇವೇಗೌಡರನ್ನು ಅಲ್ಪಸಂಖ್ಯಾತರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬರುತ್ತಿದ್ದು, ಮುಂದೆಯೂ ಬೆಂಬಲಿಸುತ್ತಾರೆ ಎಂದರು. ಕೇವಲ ರಾಮನಗರ ಜಿಲ್ಲೆ ಮಾತ್ರವಲ್ಲದೇ ಇಡೀ ದೇಶದ ಅಲ್ಪಸಂಖ್ಯಾತರು ದೇವೇಗೌಡರನ್ನು ಇಷ್ಟಪಡುತ್ತಾರೆ. 1972ರಿಂದಲೂ ಅವರ ಪರ ನಮ್ಮ ಸಮುದಾಯದ ಒಲವಿದೆ. 1994ರಲ್ಲಿ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿದ್ದಾಗ ಅಲ್ಪಸಂಖ್ಯಾತರು ಹೆಚ್ಚಿನ ಶಕ್ತಿ ನೀಡಿದ್ದರು ಎಂದರು.