ದೇವೇಗೌಡ ಬಳಿ ಇರೋದು 4 ಪಂಚೆ, ಜುಬ್ಬಾ, ಸ್ವಂತ ಮನೆ ಇಲ್ಲ: ಇಬ್ರಾಹಿಂ
ಪ್ರತಿದಿನ 4 ಗಂಟೆ ಕಾಲ ಕಾಲಭೈರವನಿಗೆ ಪೂಜೆ ಮಾಡುವ ರಾಜಕಾರಣಿ ಇದ್ದರೆ ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತ್ರ. 4 ಪಂಚೆ, ಜುಬ್ಬಾ ಬಿಟ್ಟರೆ ಅವರಿಗೆ ಸ್ವಂತ ಮನೆಯೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ನಾಗಮಂಗಲ (ಆ.01): ಪ್ರತಿದಿನ 4 ಗಂಟೆ ಕಾಲ ಕಾಲಭೈರವನಿಗೆ ಪೂಜೆ ಮಾಡುವ ರಾಜಕಾರಣಿ ಇದ್ದರೆ ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತ್ರ. 4 ಪಂಚೆ, ಜುಬ್ಬಾ ಬಿಟ್ಟರೆ ಅವರಿಗೆ ಸ್ವಂತ ಮನೆಯೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಮಲಕ್ಕೆ ಸೂರ್ಯೋದಯದ ಚಿಂತೆ. ಬಿಜೆಪಿಗೆ ಮೋದಿ ಚಿಂತೆ.
ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಚಿಂತೆ. ದೇವೇಗೌಡರಿಗೆ ನಾಡಿನ ರೈತರ ಚಿಂತೆ. ಸಾಹುಕಾರನ ಮನೆಯಲ್ಲಿ ಹುಟ್ಟಿದವನಿಗೆ ಬಡವರ ಚಿಂತೆ ಇರುವುದಿಲ್ಲ. ಅದಕ್ಕಾಗಿ ರೈತರ ಚಿಂತನೆ ಮಾಡುವ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಜನ ಬೆಂಬಲಿಸಲಿ ಎಂದರು. ಮಾರುಕಟ್ಟೆಯಲ್ಲಿ ಮಾರುವ ಬೀಜ ಬೇರೆ, ಬಿತ್ತನೆ ಬೀಜ ಬೇರೆ ಇರುತ್ತವೆ. ಅದರಂತೆ ಜೆಡಿಎಸ್ ಪಕ್ಷ ಮಾರುವ ಬೀಜವಲ್ಲ. ಬಿತ್ತನೆ ಬೀಜ. ಈ ಪಕ್ಷದಿಂದ ಒಳ್ಳೆಯ ನಾಯಕರು ಸೃಷ್ಟಿಯಾಗಿರುವುದೇ ಅದಕ್ಕೆ ಸಾಕ್ಷಿ ಎಂದು ಎಂದು ಹೇಳಿದರು.
ಸಿ.ಎಂ.ಇಬ್ರಾಹಿಂ ಸ್ಥಾನಕ್ಕೆ ಬೈ ಎಲೆಕ್ಷನ್, ಹಿಂದೂಳಿದ ವರ್ಗಕ್ಕೆ ಮಣೆ ಹಾಕಿದ ಬಿಜೆಪಿ
ಜೆಡಿಎಸ್ ಮಾರೋ ಬೀಜ ಅಲ್ಲ, ಬಿತ್ತನೆ ಬೀಜ: ಜೆಡಿಎಸ್ ಮಾರುವ ಬೀಜ ಅಲ್ಲ. ಅದು ಬಿತ್ತನೆ ಬೀಜ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ತಾಲೂಕಿನ ಸೋಮನಹಳ್ಳಿ ಅಮ್ಮನ ದೇವಾಲಯದ ಎದುರು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಮಾರುವ ಬೀಜ ಬೇರೆ, ಬಿತ್ತನೆ ಬೀಜ ಬೇರೆ ಇರುತ್ತವೆ. ಅದರಂತೆ ಜೆಡಿಎಸ್ ಪಕ್ಷ ಮಾರುವ ಬೀಜವಲ್ಲ. ಬಿತ್ತನೆ ಬೀಜ. ಈ ಪಕ್ಷದಿಂದ ಒಳ್ಳೆಯ ನಾಯಕರು ಸೃಷ್ಟಿಯಾಗಿರುವುದೇ ಅದಕ್ಕೆ ಸಾಕ್ಷಿ ಎಂದು ಉದಾಹರಣೆ ಸಮೇತ ವಿವರಿಸಿದರು.
ಕಮಲಕ್ಕೆ ಸೂರ್ಯೋದಯದ ಚಿಂತೆ. ಬಿಜೆಪಿಗೆ ಮೋದಿ ಚಿಂತೆ. ಸಿದ್ದರಾಮಯ್ಯನಿಗೆ ಸೋನಿಯಾಗಾಂಧಿ ಚಿಂತೆ. ದೇವೇಗೌಡರಿಗೆ ನಾಡಿನ ರೈತರ ಚಿಂತೆ. ಸಾಹುಕಾರನ ಮನೆಯಲ್ಲಿ ಹುಟ್ಟಿದವನಿಗೆ ಬಡವರ ಚಿಂತೆ ಇರೋಲ್ಲ. ಅದಕ್ಕಾಗಿ ರೈತರ ಚಿಂತನೆ ಮಾಡುವ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ದೆಹಲಿಯ ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ದೇವೇಗೌಡರು. ದೇವೇಗೌಡರ ಹಿಂದುತ್ವವೇ ನಮ್ಮ ಹಿಂದುತ್ವ. 4 ಗಂಟೆ ಕಾಲ ಶ್ರೀ ಕಾಲಭೈರವನಿಗೆ ಪೂಜೆ ಮಾಡೋ ಪ್ರಧಾನಿ ಇದ್ದರೆ ಅದು ದೇವೇಗೌಡರು ಮಾತ್ರ. 4 ಪಂಚೆ, ಜುಬ್ಬ ಬಿಟ್ಟರೇ ದೇವೇಗೌಡರಿಗೆ ಸ್ವಂತ ಮನೆ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹಳ್ಳಿಯಿಂದ ದಿಲ್ಲಿವರೆಗೆ ಕೊಂಡೊಯ್ಯುವ ಕೆಲಸವನ್ನು 2023ಕ್ಕೆ ನಮ್ಮ ಜನ ಮಾಡುತ್ತಾರೆ ಎಂದರು.
ಅಧಿಕಾರಕ್ಕೆ ತಂದರೆ ಕನಸು ನನಸು: ನಾಗಮಂಗಲಕ್ಕೆ ಹೇಮಾವತಿ ನೀರು ಸರಿಯಾಗಿ ಸಿಕ್ಕಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಈ ಭಾಗದ ಜನರು ಕೇಳುತ್ತಿದ್ದಾರೆ. ಆದರೂ ಇದುವರೆಗೆ ಸಿಕ್ಕಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ ಅದನ್ನು ಕಾರ್ಯಗತ ಮಾಡುತ್ತೇವೆ. ನಾವು ನೀಡಿದ ಭರವಸೆ ಈಡೇರದಿದ್ದರೆ ಮುಂದೆ ನಿಮ್ಮ ಮುಂದೆ ಮತ ಕೇಳಲು ಬರುವುದಿಲ್ಲ ಎಂದು ಖಚಿತವಾಗಿ ಹೇಳಿದರು. ಜೆಡಿಎಸ್ ಪಕ್ಷದಲ್ಲಿ ಬರೀ ಒಕ್ಕಲಿಗರು ಮಾತ್ರ ಇದ್ದಾರೆ ಎನ್ನುತ್ತಿದ್ದರು. ಬೀದರ್‌ನಲ್ಲಿ ಇರೋದು ಲಿಂಗಾಯತರು, ಕುರುಬರು, ಮುಸ್ಲಿಂರು. ಬೀದರ್‌ನಲ್ಲಿ ನಡೆಯುವ ಜೆಡಿಎಸ್ ಸಮಾವೇಶದಲ್ಲೂ ಲಕ್ಷ ಲಕ್ಷ ಜನರು ಸೇರುತ್ತಿದ್ದಾರೆ. ಜೆಡಿಎಸ್ ಪಕ್ಷದ್ದು ಜನಪರವಾದ ಸರ್ಕಾರ ಎಂದು ಬಣ್ಣಿಸಿದರು.
'ಡಬಲ್ ಇಂಜಿನ್ ಸರಕಾದಲ್ಲಿ ಡಬಲ್ ಮರ್ಡರ್, ಬೊಮ್ಮಾಯಿ ಹೆಸರು ಕೆಡಿಸಲು ಕೊಲೆ'
ಮತ್ತೆ ಎಚ್‌ಡಿಕೆ ಕೈಗೆ ಅಧಿಕಾರ ಕೊಡಿ: ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಆಡಳಿತ ನಡೆಸಬೇಕು. ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳುವ ವಾತಾವರಣ ಸೃಷ್ಟಿಯಾಗಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮೊದಲ ಸಭೆಯನ್ನು ನಾಗಮಂಗಲದ ಭೈರವನ ಸನ್ನಿಧಿಯಲ್ಲಿ ಮಾಡುತ್ತೇವೆ ಎಂದ ಇಬ್ರಾಹಿಂ, ನಾನು ಮೋದಿಗೂ ಬೈಯಲ್ಲ, ಸಿದ್ದರಾಮಯ್ಯಗೂ ಬೈಯ್ಯೋಲ್ಲ. ನಮಗೆ ನೀವು ಬೇಕು. ನಮ್ಮನ್ನ ವಿಧಾನಸೌಧಕ್ಕೆ ಹೊತ್ತುಕೊಂಡು ಹೋಗಿ ಸೇವೆ ಮಾಡಲು ಅವಕಾಶ ಕೊಡಿ. ನಾವು ನಿಮ್ಮ ಪಾದ ಪೂಜೆ ಮಾಡಿ ಸೇವೆ ಮಾಡುತ್ತೇವೆ ಎಂದರು.