ಬೆಂಗಳೂರು, (ಅ.19):  ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆಯೆ ಸಂಸದ ಡಿಕೆ ಸುರೇಶ್ ಅವರು ಜೆಡಿಎಸ್ ಪಕ್ಷಕ್ಕೆ ಭಾರಿ ಹೊಡೆತ ಕೊಟ್ಟಿದ್ದಾರೆ.

ಹೌದು..ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆರ್.ಆರ್.ನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಟ್ಟಸ್ವಾಮಿಗೌಡ ಅವರನ್ನ ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಸಹೋದರ ಡಿಕೆ ಸುರೇಶ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಚಂದ್ರಶೇಖರ್ ಅವರನ್ನ ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 

RR ನಗರ ಬೈ ಎಲೆಎಕ್ಷನ್: ರಹಸ್ಯವಾಗಿ ಅಪರೇಷನ್ ಹಸ್ತ ಪ್ರಯೋಗಿಸಿ ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆಶಿ

ಸುರೇಶ್ ಜೊತೆಗೆ ಮಾತನಾಡಿದ ಬಳಿಕವೇ ಚಂದ್ರಶೇಖರ್ ಅಂತಿಮ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ಅವರೊಂದಿಗೆ ಜೆಡಿಎಸ್ ಪಕ್ಷದ ಹಲವು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ಇನ್ನು ಈ ಸುದ್ದಿ ಕುಮಾರಸ್ವಾಮಿ ಕಿವಿಗೆ ಬಿಳುತ್ತಿದ್ದಂತೆಯೇ ಚಂದ್ರಶೇಖರ್ ಅವರನ್ನ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಛಾಟನೆ ಮಾಡಲಾಗಿದೆ.

ಕುಮಾರಸ್ವಾಮಿ ಅವರ ಆರ್.ಆರ್.ನಗರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದ್ರೆ, ಮತ್ತೊಂದೆಡೆ ಈಗಾಗಲೇ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಎಚ್‌ಡಿಕೆಗೆ ಆರಂಭದಲ್ಲಿ ಆಘಾತವಾಗಿದೆ.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ....