ಬೆಂಗಳೂರು, ಅ.(16): ಆರ್.ಆರ್.ನಗರ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷಗಳು ಈ ಕಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿವೆ.

ಅದರಲ್ಲೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಜಾತಿ ಪಾರುಪತ್ಯಕ್ಕಾಗಿ ಹೋರಾಟ ಶುರುವಾಗಿದೆ.

RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ?

ಇದರ ನಡುವೆಯೇ ಡಿಕೆ ಶಿವಕುಮಾರ್, ರಹಸ್ಯವಾಗಿ ಅಪರೇಷನ್ ಹಸ್ತ ಪ್ರಯೋಗ ಮಾಡುವ ಮೂಲಕ ಎಚ್‌ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಹೌದು... ಜೆಡಿಎಸ್ ಟಿಕೆಟ್ ಆಕಾಂಕ್ಷಿ, ಆರ್.ಆರ್. ವಿಧಾನಸಭಾ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಸೇರಿದಂತೆ ಇತರೆ ಜೆಡಿಎಸ್ ಪದಾಧಿಕಾರಿಗಳನ್ನ ಸೆಳೆಯುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. 

ಬೆಟ್ಟಸ್ವಾಮಿಗೌಡ ಅವರು ಇಂದು (ಶುಕ್ರವಾರ) ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ,  ಜೆಡಿಎಸ್‌ನಲ್ಲಿ ಸಾಕಷ್ಟು ದುಡಿದಿದ್ದೇನೆ. ಆದ್ರೆ ಜೆಡಿಎಸ್ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಲಿಲ್ಲ. ಸೋಲುವ ಅಭ್ಯರ್ಥಿಗಳನ್ನೇ ಜೆಡಿಎಸ್ ಕಣಕ್ಕಿಳಿಸ್ತಿದೆ ಎಂದರು.

ಆರ್.ಆರ್ ನಗರ ಜೆಡಿಎಸ್ ಕಾರ್ಯಕರ್ತರು ನೊಂದಿದ್ದಾರೆ. ನಮಗೆ ಆರ್.ಆರ್ ನಗರದಲ್ಲಿ ಉತ್ತಮ ಶಾಸಕರು ಬೇಕು. ಹೀಗಾಗಿ ಕಾಂಗ್ರೆಸ್ ಸೇರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.