ಮೈಸೂರು, (ಡಿ.13): ಒಂದೇ ಪಕ್ಷದ ಶಾಸಕರಾಗಿದ್ರೂ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡರು ಇಂದು ಜಿಲ್ಲೆಯ ಜಲಾದರ್ಶಿನಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಕುಮಾರಸ್ವಾಮಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿ ಪಕ್ಷದ ಕಾರ್ಯಚಟುವಟಿಕೆಗಳಿಂದ ಜಿ.ಟಿ.ದೇವೇಗೌಡ್ರು ದೂರ ಉಳಿದಿದ್ದರು. ಈ ಹಿನ್ನೆಯಲ್ಲಿ ಜಿಲ್ಲೆ ಮತ್ತೋರ್ವ ಶಾಸಕ ಸಾರಾ ಮಹೇಶ್ ಆಗಾಗ ಜಿ.ಟಿ.ದೇವೇಗೌಡ ವಿರುದ್ಧ ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸಿದ್ದರು.

ಏನಿದು ಕುಮಾರಸ್ವಾಮಿ ಹಿಂಗ್ ಅಂದ್ಬಿಟ್ರು....ದೇವೇಗೌಡ ಯು-ಟರ್ನ್ ಆದ್ರಾ..?

ಮೈತ್ರಿ ಸರ್ಕಾರ ಪತನಗೊಂದ ನಂತರ ಒಂದೇ ಪಕ್ಷದಲ್ಲಿದ್ದರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ನಾಯಕರು ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಬೆನ್ನಲ್ಲೇ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. 

ಜಿ.ಟಿ.ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಜಿ.ಟಿ.ಡಿ ಅವರು ನಮ್ಮ ನಾಯಕರು. ಅವರನ್ನ ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ಪಕ್ಷದಲ್ಲೆ ಇದ್ದಾರೆ. ಮುಂದೆ ನಮ್ಮ ಜೊತೆ ಬಂದೆ ಬರ್ತಾರೆ. ಕೆಲ ದಿನಗಳ ಕಾಲ ಆಕ್ಟಿವ್ ಇರಲಿಲ್ಲ, ಇನ್ನು ಮುಂದೆ ಆಕ್ಟಿವ್ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ದೇವೇಗೌಡ ಮನವೊಲಿಕೆ ಯಶಸ್ವಿ: ಇದೇ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಊಟ

 ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳುತ್ತೇವೆ. ಅವರು ನಮಗಿಂತ 25 ವರ್ಷ ದೊಡ್ಡವರು. ನಮ್ಮಂತವರು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಅಧಿಕಾರ ಅವರಿಗೆ ಇದೆ. ಹಾಗೇನಾದರೂ ನಾನು ತಪ್ಪು ಮಾಡಿದ್ರೆ ಅದನ್ನು ತಿದ್ದಿಕೊಳ್ಳುತ್ತೇನೆ ಎಂದರು.

ಇನ್ನು ಈವರೆಗೆ ಕುಮಾರಸ್ವಾಮಿ ಅವರು ಜಿಟಿಡಿಯವರನ್ನ ಭೇಟಿ ಮಾಡುವ ಸಂದರ್ಭ ಬಂದಿಲ್ಲ. ಅಂತಹ ಸಂದರ್ಭ ಬಂದರೆ ಅವರು ಜಿಡಿಟಿರನ್ನ ಭೇಟಿ ಮಾಡುತ್ತಾರೆ.. ಇನ್ಮುಂದೆ ಎಲ್ಲವು ಸರಿಯಾಗಲಿದೆ. ಪಕ್ಷದ ಸಭೆ ಸಮಾರಂಭಗಳಿಗೆ ಜಿ.ಟಿ. ದೇವೇಗೌಡ್ರಿಗೆ ಎರಡೆರಡು ಬಾರಿ ತಿಳಿಸಲಾಗುತ್ತೆ ಎಂದು ಹೇಳಿದರು.