ಮೈಸೂರು, (ಡಿ.02): ಮೈತ್ರಿ ಸರ್ಕಾರ ಪತನದ ಬಳಿಕ ಶಾಸಕ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಮತನಾಡಿದ್ದರು. ಅಲ್ಲದೇ ಶಾಸಕಾಂಗ ಸಭೆ ಸೇರಿದಂತೆ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

 ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೊಡಿದ್ರೆ ಈಗಾಗಲೇ ಜಿ.ಟಿ.ದೇವೇಗೌಡ್ರು ಜೆಡಿಎಸ್‌ನಿಂದ ಒಂದು ಕಾಲು ಬಿಜೆಪಿ ಬಾಗಿಲಲ್ಲಿ ಇಟ್ಟಿದ್ದರು. ಇದು ಕುಮಾರಸ್ವಾಮಿ ಕಣ್ಣು ಕೆಂಪಾಗಿಸಿದ್ದು, ಯಾರನ್ನ ತಡೆ ಹಿಡಿಯಲ್ಲ ಹೋಗಲಿ ಬಿಡಿ ಎಂದು ಬಹಿರಂಗವಾಗಿಯೇ ಜಿಟಿಡೆಗೆ ಹೇಳಿದ್ದರು.

ಬಿಜೆಪಿಯತ್ತ ಒಲವು ತೋರಿದ್ದ ಜೆಡಿಎಸ್ ಶಾಸಕ, ಇದೀಗ ಕಾಂಗ್ರೆಸ್‌ನತ್ತ ಮುಖ..?

ಆದ್ರೆ, ಇದೀಗ ಕುಮಾರಸ್ವಾಮಿ ಅವರ ಮಾತುಗಳನ್ನ ಕೇಳಿದ್ರೆ, ಎಲ್ಲವೂ ಸರಿ ಹೋಗಿವೆ. ಜೆ.ಟಿ.ದೇವೇಗೌಡ ಅವರು ಜೆಡಿಎಸ್‌ನಲ್ಲಿ ಉಳಿದುಕೊಳ್ಳುವ ಸಾಧ್ಯತೆಗಳಿವೆ.

ಹೌದು....ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,  ಸದ್ಯ ಶಾಸಕ ಜಿ.ಟಿ. ದೇವೇಗೌಡ ನಮ್ಮನ್ನು ಬಿಟ್ಟು ಎಲ್ಲಿ ಹೋಗಿದ್ದಾರೆ? ಅವರು ಇನ್ನೂ ಜೆಡಿಎಸ್​ನಲ್ಲಿಯೇ ಇದ್ದಾರೆ. ಅವರೇ ಮೊನ್ನೆ ಜೆಡಿಎಸ್​ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿಯವರ ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು ಬೇಡ ಎಂದು ಜಿಟಿಡಿ ಪರ ಬ್ಯಾಟಿಂಗ್ ಮಾಡಿದರು.

ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರ ಮುಂದಾಳತ್ವದಲ್ಲೇ ಗ್ರಾಮ ಪಂಚಾಯಿತಿ  ಚುನಾವಣೆ ನಡೆಯಲಿದ್ದು, ಅವರು ಶಾಸಕರಾಗಿವಷ್ಟು ದಿನದವರೆಗೂ ನಮ್ಮ ಪಕ್ಷವನ್ನೇ ಬೆಂಬಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಜಿ.ಟಿ ದೇವೇಗೌಡ್ರು ಜೆಡಿಎಸ್‌ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವಾಗಿ ಬಿಜೆಪಿ ನಾಯಕ ಸಂಘ ಬೆಳೆಸಿದ್ದರು.ಆದ್ರೆ, ಮೊನ್ನೇ ಅಷ್ಟೇ ಜಿ.ಟಿ.ದೇವೇಗೌಡ ಸಹ ನಾನು ಇನ್ನೂ ಜೆಡಿಎಸ್‌ನಲ್ಲೇ ಇದ್ದೇನೆ ಎಂದು ಹೇಳಿದ್ದರು. ಈ ಮೂಲಕ ಬಿಜೆಪಿಯತ್ತ ಇದ್ದ ಚಿತ್ತ ಬದಲಾಯಿಸಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.