ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ಶಾಸಕ ಎಚ್‌.ಡಿ,ರೇವಣ್ಣ ಖಡಕ್ ಎಚ್ಚರಿಯೊಂದನ್ನು ನೀಡಿದ್ದಾರೆ.

ಹಾಸನ, (ಮಾ.12):  ಎಚ್​​.ಡಿ.ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಿದ್ದ ಕಾಮಗಾರಿಗಳನ್ನು ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಇದನ್ನು ಖಂಡಿಸಿ ಸೋಮವಾರದಿಂದ ವಿಧಾನಸಭೆಯಲ್ಲಿ ಧರಣಿಗೆ ಕೂರುತ್ತೇವೆ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನದಲ್ಲಿ ಇಂದು (ಶುಕ್ರವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಜೆಡಿಎಸ್ ಶಾಸಕರೆಲ್ಲರೂ ಸದನದಲ್ಲಿ ಧರಣಿ ಮಾಡುತ್ತೇವೆ. ಈ ವಿಚಾರವನ್ನು ಸಭಾಪತಿಯವರ ಗಮನಕ್ಕೂ ತಂದಿದ್ದು, ಇನ್ನೂ ಎರಡು ವರ್ಷ ದ್ವೇಷದ ರಾಜಕಾರಣ ಮಾಡಲಿ. ನಾವು ಹೋರಾಟದಿಂದಲೇ ಬಂದಿದ್ದೇವೆ. ಎಷ್ಟು ದಿನ ಅಂತಾ ತಾಳ್ಮೆಯಿಂದ ಇರೋಣ. ಇನ್ನು ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ವಿರುದ್ಧ ಕಿಡಿಕಾಡಿದರು.

ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಮಾಡಿ ತೀರ್ಮಾನ ಮಾಡಿದ್ದೇವೆ. ಯಾವುದೇ ಯೋಜನೆಗಳಿಗೆ ಹಣಕೊಡುತ್ತಿಲ್ಲ. ಕುಡಿಯುವ ನೀರು ನೀಡೋದಕ್ಕೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲೂ ಸಾಕಷ್ಟು ಸಮಸ್ಯೆಗಳಿದೆ. ಇವೆಲ್ಲವನ್ಯಾರೂ ಹೇಳೋರಿಲ್ಲ, ಕೇಳೋರಿಲ್ಲ ಎಂದು ಆಕ್ರೋಶ ವ್ಯಕ್ತಪಿಪಡಿಸಿದರು.

ಎಲ್ಲಾ ಪಕ್ಷವನ್ನು ಜೊತೆಗೆ ಕರೆದುಕೊಂಡು ಹೋಗಲು ಕೇಳುತ್ತೇನೆ. ಶಾಸಕರಿಗೆ ಅನ್ಯಾಯವಾದಾಗ ಸ್ಪೀಕರ್ ನಮ್ಮ ನೆರವಿಗೆ ಬರಬೇಕು. ಸಭಾಪತಿಗಳು ಒಂದು ಪಕ್ಷಕ್ಕೆ ಸೀಮಿತವಾದವರಲ್ಲ ಎಂದರು.