ಹಾಸನ, (ಏ.16): ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಮೋದಿ ಅವರನ್ನು ರಾಷ್ಟ್ರ ದೊರೆ ಎನ್ನುತ್ತಲೇ ತೆಗಳಿದ್ದಾರೆ.

ಹೌದು..ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದೆವು. ಯೋಗ ಮಾಡಿ, ಕ್ಲಾಪ್ ಮಾಡಿ ಅಂದ್ರು ಮಾಡಿದ್ದೀವಿ. ಅದ್ರೆ ಈಗ ನಮ್ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎನ್ನುವುದು ನಮ್ಮ ಸ್ಲೋಗನ್ ಎಂದ ರೇವಣ್ಣ ವ್ಯಂಗ್ಯವಾಡಿದರು.

Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರೇವಣ್ಣ ಆಕ್ರೋಶ ಹೊರಹಾಕಿದ್ರು.

ಮೂಕ ಪ್ರಾಣಿಗಳಂತೆ ದೇಶದ ಜನರು ಪ್ರಧಾನಿ ಹೇಳಿದ ಹಾಗೆ ಕೇಳಿದ್ದಾರೆ. ಆದ್ರೆ ಅವರು ದೇಶದ ಜನರ ಕುಟುಂಬಕ್ಕೆ ಏನು ಮಾಡಿದ್ದಾರೆ ? ಜನರ ಸಮಸ್ಯೆ ಬಗೆ ಹರಿಸಿದ್ದಾರಾ ಎಂದು ಕಿಡಿಕಾರಿದರು.

ಹೊರಗಡೆ ಅಂಗಡಿಗೆ ಹೋದ್ರೆ ಒದೆ ಬೀಳುತ್ತೆ ಎಂದ ರೇವಣ್ಣ ಇದ್ದಲ್ಲಿಗೇ ಮೊಂಬತ್ತಿ

ರಾಜ್ಯದ ಜನರು ಸಿಎಂ ಫಂಡ್ ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದರು.

ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದಾರೆ. ದಯಮಾಡಿ ಸಿಎಂ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು  ರೇವಣ್ಣ ಸರ್ಕಾರದ ನಡೆ ಬಗ್ಗೆ ಗರಂ ಆದರು.

ಇನ್ನು ಇದೇ ವೇಳೆ ಮಾಸ್ಕ್ ಹಾಕದವರನ್ನು ಬಂಧಿಸಿ ಎನ್ನುವ ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟನಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದರು.